ಪುಟ:ರಜನೀ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ 9 ಕರು ನನಗೆ ಯಾವ ರೋಗವೆಂದು ತಿಳಿದು ಚಿಕಿತ್ಸೆಯನ್ನು ಮಾಡುತಲಿದ್ದರೆ ನನಗೆ ಗೊತ್ತಾಗಲಿಲ್ಲ. ನನ್ನ ಕಣ್ಣುಗಳಿದಿರಿಗೆ ಕುಣಿಯುತಲಿದ್ದ ರೂಪವನ್ನು ಕುರಿತು ನಾನು ಯಾರಿಗೂ ಹೇಳಲಿಲ್ಲ. -- - ಆರನೆಯ ಪರಿಚ್ಛೇದ. ಶಚೀಂದ್ರನ ಹೇಳಿ ಕೆ. ಓಹೊ ! ಮೆಲ್ಲಗೆ, ರಜನಿ, ಮೆಲ್ಲಗೆ ! ಮೆಲ್ಲಗೆ ಮೆಲ್ಲಗೆ ನನ್ನ ಹೃದಯ ಮಂದಿರದಲ್ಲಿ ಪ್ರವೇಶಮಾಡು ! ಇಷ್ಟು ದ್ರುತಗಾಮಿನಿಯಾಗುವುದೇತಕ್ಕೆ ? ನೀನು ಅಂಧಳು, ಮಾರ್ಗವು ಗೊತ್ತಿಲ್ಲ. ಮೆಲ್ಲಗೆ, ರಜನಿ, ಮೆಲ್ಲಗೆ ! ಅಲ್ಪವಾದ ಈ ಪುರಿಯು ಕತ್ತಲೆ, ಶುದ್ಧ ಕತ್ತಲೆ, ! ಚಿರಾಂಧಕಾರವಗಿದೆ ! ಬೆಂಕಿಕಡ್ಡಿ ಯಹಾಗೆ ಇದನ್ನು ಪ್ರವೇಶಿಮಾಡಿ ಬೆಳಕು ಮಾಡು ; ದೀಪದ ಕಡ್ಡಿಯಹಾಗೆ ನೀನು ಉರಿಯುತ್ತಿ; ಆದರೆ ಈ ಅಂಧಕಾರಮಯವೆ: ದ ಪುರಿಯನ್ನು ಬೆಳಕು ಮಾಡುವಿಯೆ ! ಓಜೋ ! ಮೆಲ್ಲಗೆ, ರಜನಿ, ಮೆಲ್ಲಗೆ ! ಈ ಪುರಿಯನ್ನು ಬೆಳಕು ಮಾಡು, ಆದರೆ ಸುಡುವುದೇಕೆ ? ಶೀತಲವಾದ ಶಿಲೆಯು ಕೂಡ ಸುಡುವುದೆಂದು ಯಾರಿಗೆ ಗೊತ್ತು ? ನೀನೋ, ಪಪಾಣಘಟಿತಳೆಂತ, ಪಾಷಾಣಮಯಿಯಂತ ಬಲ್ಲೆನು, ಈ ಪಾವಾಣವೂ ಕೂಡ ಸುಡುವುದೆಂದು ಯಾರು ಬಲ್ಲರು ? ಅಥವಾ ಪಾಪಣವೂ ಕೂಡ ಲೋಹಸಂಘರ್ಷಣದಿಂದ ಬೆಂಕಿಯನ್ನು ಐಟುಮಾಡುತ್ತದೋ ? ಯಾರು ಬಲ್ಲರು ? ನಿನ್ನೆ ಪ್ರಸ್ತರದಂತಹ ಧವಳವೂ ಸಿಗ್ಟವಾದ ಪ್ರಸ್ತರದ ದರ್ಶನವೂ, ಪ್ರಸ್ತರದಿಂದ ಘಟಿತವೇದಹಾಗೆ ಇರುವ ಮೂರ್ತಿಯ. ಇವುಗಳನ್ನೆಲ್ಲ ನೋಡಿದ ಹಾಗೆಲ್ಲಾ ಹೆಚ್ಚು ನೋಡಬೇಕೆಂದು ಇಚ್ಛೆಯುಂಟಾಗುತ್ತದೆ. ನಿತ್ಯವೂ ನೋಡುತ ಲಿದ್ದರೂ ಸಲಕಸಲಕದಲ್ಲಿಯೂ ನೋಡಿದ್ದರೂ ನೋಡಿದೆನೆ ? ಎಂದು ಅನುಮಾನ ದಿಂದ ಪುನಃ ನೋಡಬೇಕೆಂದು ಇಷ್ಟವುಂಟಾಗುತ್ತದೆ. ಪುನಃ ಪುನಃ ನೋಡುತ್ತಲ ದ್ದರೂ ಆಶೆಯು ದಣಿಯುವುದಿಲ್ಲ. ಈ ಆಲಸ್ಯದಲ್ಲಿ ನಾನು ಯಾರಸಂಗಡ ಮಾತನಾಡುತ್ತಿರಲಿಲ್ಲ. ಯಾರು ಬಂದು ಮಾತನಾಡಿದರೂ ಇಷ್ಟವಾಗದು. ರಜನಿಯ ಮಾತು ಬಾಯಿಯಿಂದ