ಪುಟ:ರಜನೀ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ. ಲವಂಗತಯ ಹೇಳಿಕೆ, ಗೊತ್ತಾಯಿತು. ಶಚೀಂದ್ರನು ಏನೇನು ಮಾಡಿಬಿಡುತ್ತಾನೋ, ದೇವರು ಕಾಪಾಡಬೇಕು-ಹುಡುಗ ! ಈ ವಯಸ್ಸಿನಲ್ಲಿ ಇಷ್ಟು ಕಳವಳವುಂಟೆ ! ಅಕ್ಕನಾ ದರೋ, ಒಂದು ತಡವೆಯಾದರೂ ಇತ್ತ ಕಡೆ ತಿರುಗಿ ನೋಡುವುದಿಲ್ಲ. ನಾನು ಹೇಳುವ ದಕ್ಕೆ ಹೋದರೆ ಬಲತಾಯಿಯೆಂದು ಅದು ಲಕ್ಷ್ಯಕ್ಕೆ ಬರುವುದಿಲ್ಲ. ಅದೆಲ್ಲಾ ಹುಡುಗನಿಗೆ ಹೇಳಿ ಪೂರೈಸುವುದು ಬಹಳ ಕಷ್ಟ, ಎಲ್ಲ ನನ್ನ ಮೇಲೆ ಬಿದ್ದಿದೆ. ಡಾಕ್ಟರನ ಔಷಧದಿಂದ ಏನೂ ಗುಣವಿಲ್ಲ. ಆಗುವಹಾಗೆ ಇಲ್ಲ. ಅವರಿಗೆ ರೋಗ ನಿರ್ಣಯ ಮಾಡುವುದೇ ಗೊತ್ತಿಲ್ಲ. ರೋಗವಿರುವುದು ಮನಸ್ಸಿನಲ್ಲಿ ಕೈ, ಕಣ್ಣು, ನಾಲಿಗೆ ನೋಡಿದರೆ ಏನುತಾನೇ ತಿಳಿಯುವುದು ? ನನ್ನ ಹಾಗೆ ಅವರೂ ಮರೆಯಲ್ಲಿ ಕುಳಿತುಕೊಂಡು ಹುಡುಗನ ಚರವನ್ನೆಲ್ಲ ನೋಡಿದರೆ ಏನಾದರೂ ರೋಗ ರುಜನ ಗೊತಾದೀತು. ಅದೇನಎ ಇಲ್ಲ. ಕುಡುಗನಾದರೊ, ಮೆಲ್ಲಗೆ, ರಜನಿ ! ” ಎಂದು ಕಳವಳಪಡುತ್ತಾನ ಅದೂ ಅವನೊಬ್ಬನೇ ಇದ್ದಾಗ ಆ ಮಾತು ಬಾಯಿಯಿಂದ ಹೊರಡುತ್ತೆ, ಹೀಗೆ ದಿನ ಕಳೆದರೆ ಹುಡುಗನೇನಾಗಬೇಕು ! ಸನ್ಯಾಸಿಯ ಔಷಧವು ಹೀಗೆ ಫಲಿಸಿತೆ | ನಾನು ಹಾಳಾಗುವುದಕ್ಕೆ ಏತಕ್ಕೆ ಈ ಕೆಲಸ ಮಾಡಿದೆನೋ ! ಒಳ್ಳೇದು, ರಜನಿಯನ್ನು ಒಂದುಸಲ ಸನ್ಯಾಸಿಯ ಹತ್ತಿರ ಕರೆತಂದು ಕೂಡಿಸಿ ನೋಡಿ ? ಏನಾದೀತೋ, ನೋಡೋಣ ! ನಾನು ಒಂದುಸಲ ರಜನಿಯ ಮನೆಗೆ ಹೋಗಿದ್ದೆ, ಅವಳು ಅದು ಮೊದಲು ನಮ್ಮ ಮನೆಗೆ ಒಂದು ತಡವೆಯಾದರೂ ಬಂದಿಲ್ಲ ! ಕರೆಸಿದರೆ ಬಾರದೆ ಇರಲಾರಳು. ಹೀಗೆಂದು ಯೋಚಿಸಿ ಅವಳ ಮನೆಗೆ ಆಳನ್ನು ಕಳುಹಿಸಿದನು. ಸ್ವಲ್ಪ ಮಾತನಾಡುವುದು ಬಹಳ ಅವಶ್ಯವಾಗಿದೆ, ಬಂದು ಹೋಗಬೇಕೆಂದು ಅವನ ಸಂಗಡ ಹೇಳಿಕಳುಹಿಸಿದನು. ಮನಸ್ಸಿನಲ್ಲಿ ಮೊದಲು ಶಚೀಂದ್ರನ ಹತ್ತಿರ ರಜನಿಯ ಮಾತು ಎತ್ತಿ ನೋಡಿ ದರೆ, ಅವಳ ಸಂಬಂಧವಾದ ಮನೋರೋಗವಿದ್ದರೆ ಆದು ಹೊರಪಡುವುದೆಂದು ಯೋಚಿಸಿ ನಿಜಾಂಶವನ್ನು ತಿಳಿಯುವುದಕ್ಕೋಸ್ಕರ ಶಚೀಂದ್ರನ ಹತ್ತಿರ ಹೋಗಿ ಕೂತುಕೊಂಡೆನು. ಆ ಮಾತು ಈ ಮಾತು ಆಡುತ್ತ ಪ್ರಸ್ತಾಪದಮೇಲೆ ರಜನಿಯ 13