ಪುಟ:ರಜನೀ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ 89 ಅವನು ಶಚೀಂದ್ರನ ಅನಾರೋಗ್ಯದ ವೃತ್ತಾಂತವನ್ನೆಲ್ಲ ಕೇಳಿ, ಅವನ ಹತ್ತಿರ ಹೋಗಿ ಕೂತುಕೊಂಡು ನಾನಾ ಸಂಗತಿಗಳನ್ನು ಕುರಿತು ಮಾತನಾಡಲಾರಂಭಿಸಿ ದೆನು, ಅನಂತರ ನಾನು ಸನ್ಯಾಸಿಗೆ ಪ್ರಣಾಮ ಮಾಡಬೇಕೆಂದು ಅವನನ್ನು ಕರೆಸಿ ದನು. ಕರೆಸಿ ಪ್ರಣಾಮವನ್ನು ಮಾಡಿ, ಕ್ಷೇಮಲಾಭ ಕೇಳಿದಮೇಲೆ, ಸ್ವಾಮಿ ! ತಾವು ಸರ್ವಜ್ಞರು ; ತಮಗೆ ತಿಳಿಯದ ತತ್ವವು ಯಾವುದೂ ಇಲ್ಲ ; ಶಚೀಂದ್ರನ ರೋಗವು ಇಂತಹದುದೆಂದು ತಮಗೆ ಅವಶ್ಯ ಗೊತ್ತಿರಬೇಕೆಂದೆನು. ಸನ್ಯಾಸಿ-ಅದು ವಾಯುರೋಗ ಚಿಕಿತ್ಸೆಯಾಗುವುದು ಅತಿ ಕಷ್ಟ, ನಾನು-ಹಾಗಾದರೆ ಶಚೀಂದ್ರನು ಯಾವಾಗಲೂ ರಜನಿಯ ಹೆಸರನ್ನು ಹೇಳುತಲಿರುತ್ತಾನೇಶಕ್ಕೆ ? ಸವAa-ಅಮಾ ! ನೀನು ಇನ್ನು ಹುಡುಗಿ, ತಿಳಿಯುವೆ ಹೇಗೆ ? (ಇದೇನು, ಹಾಳಾಯಿತು ! ನಾನು ಇನ್ನೂ ಹುಡುಗಿಯ ! ನಾನು ಶಚೀಂದ್ರನ ತಾಯಿ ! ) ಅಮ್ಮಾ ! ಈ ರೋಗಕ್ಕೆ ಒಂದು ಲಕ್ಷಣವೇನೆಂದರೆ--ಹೃದಯದಲ್ಲಿ ಮರೆಯಾಗಿದ್ದು ಅಪರಿಚಿತವಾದ ಭಾವ ಅಧವಾ ಪ್ರವೃತ್ತಿಗಳಲ್ಲಿ ಪ್ರಕಾಶಿತವಾಗಿ ಹೊರಪಡುತ್ತದೆ ಯಲ್ಲದೆ, ಅದೆಲ್ಲ ಅತ್ಯಂತ ಬಲವುಳ್ಳದ್ದಾಗಿ ತಲೆಯೆತ್ತಿಕೊಳ್ಳುತ್ತದೆ. ಶಚೀಂದ್ರನ ಒಂದು ದಿನ ನನ್ನ ದೈವಜ್ಞ ವಿದ್ಯೆಯನ್ನು ಪರೀಕ್ಷಿಸಬೇಕೆಂದು ಕೇಳಿದನು. ನಾನು ಒಂದು ತಂತ್ರವನ್ನು ಅನುಷ್ಠಾನ ಮಾಡಿ ಅವನನ್ನು ಯಾರು ಈ ಪ್ರಪಂಚದಲ್ಲಿ ಅತ್ಯಂತವಾಗಿ ಆಂತ್ಯದಿಂದ ಪ್ರೀತಿಸುವರೋ ಅಂತಹವರನ್ನು ರಾತ್ರಿ ಸ್ವಪ್ನದಲ್ಲಿ ನೋಡುವೆಯೆಂದು ಅವನಿಗೆ ಹೇಳಿದೆನು. ಶಚೀಂದ್ರನು ರಾತ್ರಿ ಸ್ವಪ್ನದಲ್ಲಿ ರಜನಿ ಯೆಂಬ ಹೆಂಗಸನ್ನು ನೋಡಿದನು. ಸ್ವಭಾವಸಿದ್ಧವಾದ ನಿಯಮವೇನೆಂದರೆ ; ನಾವು ನಮ್ಮನ್ನು ಯಾರು ಪ್ರೀತಿಸುತ್ತಾರೆಂದು ತಿಳಿಯುತ್ತೇವೋ ಅವರಲ್ಲಿ ಅನುರಕ್ತರಾಗು ತೇವೆ. ಅದು ಕಾರಣ ಆ ರಾತ್ರಿ ಶಚೀಂದ್ರನ ಮನಸ್ಸಿನಲ್ಲಿ ಅನುರಾಗದ ಬೀಜವು ಗೋಪ್ಯವಾಗಿ ನೆಡಲ್ಪಟ್ಟಿತು ಆದರೆ ರಜನಿಯು ಅ೦ಧಳು, ಅಲ್ಲದೆ ಸಾಮಾನ್ಯ ರಾಜಿನಗ ಹೆಣ್ಣು ; ಇವೇ ಮುಂತಾದ ಕಾರಣಗಳಿಂದ ಆ ಅನುರಾಗವು ವಿಕಾಸ ವಾಗಲಾರದೆ ಹೋಯಿತು. ಅನುರಾಗದ ಅಕ್ಷಣವೇನೆಂದರೆ ; ಮನಸ್ಸಿನಲ್ಲಿ ಏನಾದರೂ ಕಂಡುಬಂದರೆ ಶಚೀಂದ್ರನಿಗೆ ಅದು ಗೋಚರವಾಗುವುದಿಲ್ಲ. ಕ್ರಮೇಣ ನಿಮಗೆ ದಾರಿದ ಶಂಕೆಯುಂಟಾಗಿ ಅದರಿಂದ ಪೀಡಿತರಾಗಿರಿ ಎಲ್ಲರಿಗಿಂತ ಶಚೀಂದ್ರನೇ ಆದರಿಂದ ಹೆಚ್ಚು ವೃಧೆ ಇಟ್ಟನು. ಆ ವ್ಯಧೆಯನ್ನು ಮರೆಯುವುದಕ್ಕೆ