ಪುಟ:ರಜನೀ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ 101 wwwwwwwwwwwww ಮನೋರೋಗಕ್ಕೆ ಮಾನಸಿಕವಾದ ಚಿಕಿತ್ಸೆಯನ್ನೂ ಮಾಡಬೇಕು. ರಜನಿಯ ಬರಬೇಕಾಗುತ್ತದೆ, ನಾನು-ರಜಸಿಯೂ ಬರುವಳು, ಹೇಳಿಕಳುಹಿಸಿದ್ದೇನೆ, ಸನ್ಯಾಸಿ-ಆದರೆ ರಜನಿಯು ಬರುವುದರಿಂದ ಗುಣವಾಗುವುದೋ, ಅಥವಾ ಇನ್ನೇನಾದರೂ ಆಗುವುದೋ ಅದನ್ನು ಮೊದಲು ಯೋಚಿಸಬೇಕು. ಶಚೀಂದ್ರನಿಗೆ ರಜನಿಯಮೇಲೆ ಉಂಟಾಗಿರುವ ಅನುರಾಗವು ಅವನಿಗೆ ಮದುವೆಯಾಗಲು ಅವಳು ಅನರ್ಹಳಾಗಿದ್ದು ಅವನು ಈ ರುಗ್ತಾವಸ್ಥೆಯಲ್ಲಿ ಅವಳನ್ನು ನೋಡಿಬಿಟ್ಟರೆ ರೋಗವು ನೆಲೆಯಾಗಿ ನಿಂತುಬಿಡುವುದು, ರಜನಿಗೂ ಅವನಿಗೂ ದ?೦ಪತ್ಯ ಸಂಬಂಧವು ಆಗದು ದಾಗಿದ್ದರೆ ಅವರವರು ನೋಡದಿರುವುದೇ ಒಳ್ಳೇದು. ನಾನು-ರಜನಿಯು ಬರುವದು ಒಳ್ಳೆದಾಗಲಿ ಕೆಟ್ಟ ದುದಾಗಲಿ ಅದನ್ನು ವಿಚಾರ ಮಾಡುವುದಕ್ಕೆ ಈಗ ಸಮಯವಿಲ್ಲ. ಅಲ್ಲಿ ನೋಡಿ, ಅವಳು ಬರುತ್ತಾಳೆ. ಆ ಸಮಯಕ್ಕೆ ಸರಿಯಾಗಿ ಪರಿಚಾರಕಳೊಬ್ಬಳು ರಜನಿಯನ್ನು ಕರೆತಂದಳು. ಅಮರನಾಥನು ಶಚೀಂದ್ರನ ಆಲಸ್ಯವನ್ನು ಕೇಳಿ ತಾನೇ ನೋಡುವುದಕ್ಕೆ ಬಂದಿದ್ದನು. ಅವನು ರಸಿಯ ಸಂಗಚಲೇ ಬಂದನು, ತಾನು ಹೊರಗೆ ದಿವಾನಖಾನೆಯಲ್ಲಿ ನಿಂತು ಕೊಂಡು, ರಜನಿಯನ್ನು ಏರಿಚಾರಕಳ ಸಂಗದ ಅveಃಪುರಕ್ಕೆ ಕಳುಹಿಸಿದ್ದನು, m ಐದನೆಯ ಭಾಗ. ಅಮರನಾಥನ ಹೇಳಿಕೆ, ಮೊದಲನೆಯ ಪರಿಚ್ಛೇದ. ಈ ಅಂಧಳಾದ ಪುಷ್ಪನಾರಿಯು ಎಂತಹ ಮನೋಮೋಹಿನಿಯಾದವಳೊ ಅದನ್ನು ಹೇಳಲಾರೆನು, ಚೆಕ್ಕುಗಳಲ್ಲಿ ಕಟಾಕ್ಷವಿಲ್ಲ ; ಆದರೂ ನನ್ನ೦ತಹ ಸನ್ಯಾಸಿ ಯನ ಮೋಹಿತನನ್ನಾಗಿ ಮಾಡಿಬಿಟ್ಟಳು. ನಾನು ಮನಸ್ಸಿನಲ್ಲಿ ಲವಂಗತೆಯ ಅನಂತರ ಮತ್ತಾರನ್ನೂ ಪ್ರೀತಿಸಲಾರೆನೆಂದು ತಿಳಿದುಕೊಂಡಿದ್ದೆನು, ಮನುಷ್ಯನಿಗೆ