ಪುಟ:ರಜನೀ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ರಚ3 wwwwwwwwwwwwwwwwwwwwwwwwwwwwwww ಅನರ್ಥಕವಾದ ಬರೇ ದಂಭ ! ಇತರರ ಮಾತು ಹಾಗಿರಲಿ; ನಾನೇ ಈ ಅಂಧನಾರಿ ಯಿಂದ ಮೋಹಿತನಾಗಿ ಹೋಗಿದ್ದೇನೆ. - ಮೊದಲು ಈ ಜೀವನವು ಅಮಾವಾಸ್ಯದ ರಾತ್ರಿಯ ಸ್ವರೂಪವಾದುದೆಂತಲೂ, ಅಂಧಕಾರದಲ್ಲಿಯೇ ಕಾಲಹರಣ ಮಾಡಬೇಕೆಂದು ಸ್ಥಿರಮಾಡಿಕೊಂಡಿದ್ದನು. ಆದ್ದ ಕ್ಕಿದ್ದ ಹಾಗೆ ಚಂದ್ರೋದಯವಾಯಿತು ! ಈ ಜೀವನವು ಅನಂತವಾದ ಪರವಿಲ್ಲದ ಸಮುದ್ರವೆಂತಲೂ, ಈಚಿಯೇ ಪಾರಾಗಿ ತೀರಬೇಕೆಂತಲೂ ಭಾವಿಸಿದ್ದನು. ಇದ್ದಕಿದ್ದ ಹಾಗೆ ಸಮ್ಮುಖದಲ್ಲಿ ಕಟ್ಟಿರುವ ಸುವರ್ಣದ ಸೇತುವೆಯನ್ನು ಕಂಡೆನು. ಮನಸ್ಸಿನಲ್ಲಿ ಈ ಮರುಭೂಮಿಯು ಚಿರಕಾಲ ಹೀಗೆಯೇ ದಗ್ಗ ಕ್ಷೇತ್ರವಾಗಿರುವುದೆಂದು ತಿಳಿದಿದ್ದೆನು, ರಜನಿಯು ಇದ್ದಕ್ಕಿದ್ದ ಹಾಗೆ ಅಲ್ಲಿ ನಂದನಕಾನನವನ್ನು ತಂದಿಟ್ಟಳು ! ನನ್ನ ಈ ಸುಖಕ್ಕೆ ಪಾರವೇ ಇಲ್ಲ. ಚಿರಕಾಲ ಅಂಧಕಾರವಾದ ಗುಹಾಮಧ್ಯದಲ್ಲಿ ವಾಸ ಮಾಡುತಲಿದ್ದವನನ್ನು ಸೂದ್ಯ ಕಿರಣಗಳಿಂದ ಸಮುಜ್ವಲವಾದ ಕರುಪಲ್ಲವ ಕುಸುಮಾ ದಿಗಳಿಂದ ಸುಶೋಭಿತವಾದ ಮನುಷ್ಯಲೋಕದಲ್ಲಿ ಇದ್ದಕ್ಕಿದ್ದ ಹಾಗೆ ತಂದು ಸ್ಥಾಪಿತ ಮಾಡಿದರೆ ಅವನಿಗೆ ಯಾವ ಆನಂದವುಂಟಾಗುವುದೇ ನನಗೆ ಅದೇ ಆನಂದ ! ಚಿರ ಕಾಲ ಪರಾಧೀನದಲ್ಲಿ ಪರರಿಂದ ಪೀಡಿತನಾಗಿ ದಾಸಾನುದಾಸನಾಗಿದ್ದವನು ಹಠಾತ್ತಾಗಿ ಸರ್ವಶ್ವರಸಾರ್ವಭೌಮನಾದರೆ ಯಾವ ಆನಂದವನುಳ್ಳವನಾಗುವನೋ ನನಗೂ ಅದೇ ಆನಂದ ! ರಜನಿಯಹಾಗೆ ಜನ್ಮಾಂಧಳಾದವಳಿಗೆ ಹಠಾತ್ತಾಗಿ ಕಣ್ಣುಗಳು ಬಂದರೆ ಯಾವ ಆನಂದವುಂಟಾಗುವದೋ ನಾನೂ ರಜನಿಯನ್ನು ಪ್ರೀತಿಸಿ ಅದೇ ಆನಂದವುಳ್ಳವನಾಗುತ್ತೇನೆ, ಆದರೆ ಆನಂದವು ಕಡೆಗೆ ಏನಾಗುವುದೋ ಅದನ್ನು ಹೇಳಲಾರೆನು. ನಾನು ಕಳ್ಳನು ! ನನ್ನ ಬೆನ್ನಿನಮೇಲೆ ಬೆಂಕಿಯ ಅಕ್ಷರಗಳಿಂದ ನಾನು ಚೋರನೆಂದು ಬರೆ ಹಾಕಲ್ಪಟ್ಟಿದೆ ! ರಜನಿಯು ಕೈಯಿಂದ ಆ ಬರೆಯನ್ನು ಸ್ಪರ್ಶ ಮಾಡಿ ಇದು ಯಾವ ಬರೆಯಂದು ಕೇಳಿದರೆ ಏನುಹೇಳಲಿ ! ಅದೇನೂ ಅಲ್ಲ ಎಂದು ಹೇಳಲೆ ; ಅವಳು ಅಂಧ ಆದುದರಿಂದ ಏನೂ ಅರಿಯಳಾರಳು. ಆದರೆ ಯಾರನ್ನು ಅವಲಂಬಿಸಿಕೊಳು ಸಂಸಾ ರದಲ್ಲಿ ಸುಖಿಯಾಗಬೇಕೆಂದಿದ್ದೆನೋ ಅಂತಹವಳನ್ನು ಪುನಃ ವಂಚಿಸಲೆ ! ವಂಚನೆಮಾಡ ಬೇಕಾದವರು ಹಾಗೆ ಮಾಡಲಿ-ನಾನು ಮಾಡಬಲ್ಲವನಾಗಿದ್ದಾಗ ಇದಕ್ಕಿಂತಲೂ ಹೆಚ್ಚಾದ ದುಷ್ಯಾಲ್ಯವನ್ನು ಮಾಡಿದ್ದೇನೆ ಹಾಗೆ ಮಾಡಿ ಅದರ ಫಲವನ್ನು ಅನುಭೋಗಿ ಸುತ್ತೇನೆ, ಪುನಃ ಏತಕ್ಕೆ ಮಾಡಲಿ? ನಾನು ಲವಂಗಲತೆಯೊಡನೆ ರಜನಿಗೆ ಇದ್ದ ಸಂಗ