ಪುಟ:ರಜನೀ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ 103 ತಿಳಗನ್ನೆಲ್ಲಾ ಹೇಳಿಬಿಡುವೆನೆಂದು ಹೇಳಿದೆನು, ಆದರೆ ಹೇಳಿಬಿಡುವುದಕ್ಕೆ ಬಾಯಿ ಬರು ವುದಿಲ್ಲ. ಈಗ ಹೇಳಿಬಿಡುವೆನು. ಯಾವದಿನ ರಜನಿ ಋು ಶಚೀಂದ್ರನನ್ನು ನೋಡುವುದಕ್ಕೆ ಬಂದಿದ್ದಳೋ ಆದಿನ ಮಧ್ಯಾನದಲ್ಲಿ ಈ ಮಾತು ರಜನಿಗೆ ಹೇಳಬೇಕೆಂದು ಹೋದನು. ಹೋಗಿ ನೋಡಲಾಗಿ ರಜನಿಯೊಬ್ಬಳೇ ಕೂತುಕೊಂಡು ಅಳುತ್ತಿದ್ದಳು. ನಾನು ಆಗವಳಿಗೆ ಏನೂ ಹೇಳದೆ, ರಜನಿಯ ಚಿಕ್ಕ ತಾಯಿಯನ್ನು ಕುರಿತು ರಜನಿಯು ಅಳುವುದೇತಕ್ಕೆ ಎಂದು ಕೇಳಿದೆನು. ಚಿಕ್ಕತಾಯಿಯು ಗೊತ್ತಿಲ್ಲ-ಮಿತ್ರರ ಮನೆಗೆ ಹೋಗಿ ಬಂದಾರಭ್ಯ ಅಳುತ್ತಾಳೆಂದಳು, ನಾನು ಶಚೀಂದ್ರನಬಳಿಗೆ ಹೋಗಿರಲಿಲ್ಲ. ಶಚೀಂದ್ರನು ನನ್ನ ಮೇಲೆ ವಿರಕ್ತನಾಗಿದ್ದಾನೆ. ನನ್ನನ್ನು ನೋಡಿ ಅವನ ರೋಗವು ಹೆಚ್ಚಾದೀತೆಂಬ ಭಯದಿಂದ ಹೋಗಿ ನೋಡಲಿಲ್ಲ, ಅದು ಕಾರಣ ಅಲ್ಲಿ ಏನು ನಡೆಯಿತೋ ಅದು ನನಗೆ ಗೊತ್ತಿಲ್ಲ. ರಜನಿಯನ್ನು ಕುರಿತು ಅಳುವುದೇತಕ್ಕೆ ? ಎಂದು ಪ್ರಶ್ನೆ ಮಾಡಿದೆನು. ರಜನಿಯು ಕಣ್ಣು ಮುಚ್ಚಿಕೊಂಡು ಸುಮ್ಮನಾದಳು. ನಾನು ಬಹಳ ಕಾತರನಾಗಿ, ನೋಡು, ರಜನಿ ! ನಿನಗೇನಾದರೂ ದುಃಖವಿದ್ದು ಅದನ್ನು ತಿದವನಾದರೆ ನಾನದನ್ನು ನಿವಾರಣೆ ಮಾಡಲು ನನ್ನ ಪ್ರಾಣಾಂತವಾದರೂ ಪ್ರಯತ್ನ ಪಡುವೆನು. ನೀನು ಯಾವದುಃಖಕ್ಕೋಸ್ಕರ ಆಳುತ್ತಿ ? ಹೇಳಲಾರೆಯಾ ? ಎಂದು ಕೇಳಿದೆನು. - ರಜನಿಯು ಪುನಃ ಅಳಲಾರಂಭಿಸಿದಳು. ಬಹುಕಷ್ಟದಿಂದ ರೋಗವನ್ನು ನಿಲ್ಲಿಸಿ, ನೀವು ಅನುಗ್ರಹವುಳ್ಳವರಾಗಿದ್ದೀರಿ ; ಆದರೆ ನಾನು ಆ ಅನುಗ್ರಹಕ್ಕೆ ಯೋಗ್ಯಳ " ವೆಂದಳು. ನಾನು-ಅದೇತಕ್ಕೆ ರಜನಿ ? ನಾನೇ ನಿನಗೆ ಯೋಗ್ಯನಲ್ಲವೆಂದು ತಿಳಿದುಕೊಂಡಿ ದೇನೆ. ನಾನು ಆ ಮಾತನ್ನೇ ಹೇಳುವುದಕ್ಕೆ ಬಂದಿದ್ದೇನೆ, ರಜನಿ- ನಾನು ತಮ್ಮಿಂದ ಅನುಗೃಹೀತಳಾದ ತಮ್ಮ ದಾಸಿ ; ನನಗೆ ಇಂತಹ ಮಾತನ್ನು ಹೇಳುವುದೇತಕ್ಕೆ ? ನಾನು-ಕೇಳು, ರಜನಿ ! ನಾನು ನಿನ್ನನ್ನು ವಿವಾಹಮಾಡಿಕೊಂಡು ಇಹಜನ್ಮ ದಲ್ಲಿ ಸುಖವಾಗಿರಬೇಕೆಂದು ಅತ್ಯಂತ ಭರವಸೆಯುಳ್ಳವನಾಗಿದ್ದೇನೆ. ಈ ಆಶೆಯು ಭಗ್ನವಾದರೆ ನಾನು ಉಳಿಯುವುದಿಲ್ಲವೆಂದು ಕಾಣುತ್ತೆ. ಆದರೆ ಆ ಆಶೆಗೆ ಇರುವ ವಿಘ್ನವನೊಂದನ್ನು ನಿನಗೆ ಹೇಳಬೇಕೆಂದು ಬಂದಿದ್ದೇನೆ. ಕೇಳಿ ಉತ್ತರವನ್ನು ಕೊಟ್ಟರೆ ಕೊಡು ; ಇಲ್ಲವಾದರೆ ಬೇಡ, ಪ್ರಥಮ ಯಕೌವನದಲ್ಲಿ ಒಂದು ದಿನ ನಾನು ರೂಡ