ಪುಟ:ರಜನೀ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ರಜನೀ

  • }

}

  • /

\ n \ \/\ \ / \ \ / \ \r\ / 1 / \"

ಧನಾಗಿ ಉನ್ಮತ್ತನಾದೆನು. ಜ್ಞಾನಹೊದವನಾಗಿ ಕಳ್ಳನು ಮಾಡುವ ಕೆಲಸವನ್ನು ಮಾಡಿಬಿಟ್ಟೆವು. ಮೈಯಲ್ಲಿ ಅದರ ಚಿಹ್ನೆ ಯು ಇನ್ನೂ ಇದೆ. ಆ ಮಾತನ್ನು ನಿನಗೆ ತಿಳಿಸಲು ಬಂದಿದ್ದೇನೆ, ಆಗ ಮೆಲ್ಲಗೆ ಮೆಲ್ಲಗೆ ಕೇವಲ ಧೈಯ್ಯ ಮಾತ್ರಾವಲಂಬನವುಳ್ಳವನಾಗಿ ಆ ಹೇಳಕೂಡದ ಮಾತುಗಳನ್ನೆಲ್ಲ ಹೇಳಿದೆನು. ರಜನಿಯು ಅಂಧಳಾದುದರಿಂದ ಅದ ನ್ನೆಲ್ಲ ಹೇಳಲು ಸಮರ್ಧನಾದೆನು. ಕಣ್ಣು ಕಣ್ಣುಗಳಿಗೆ ಸಂದರ್ಶನವಾಗಿದ್ದರೆ ಹೇಳುವ ದಕ್ಕೆ ಆಗುತ್ತಿರಲಿಲ್ಲ. ರಜನಿಯ ನೀರವವಾಗಿ ಸುಮ್ಮನಿದ್ದಳು. ನಾನು, ರಜನಿ ! ರೂಪೋನ್ಮಾದ ದಿಂದ ಉನ್ಮತ್ತನಾಗಿ ಪ್ರಧನ ಯೌವನದಲ್ಲಿ ಒಂದು ದಿನ ಈ ಅಜ್ಞಾನದ ಕೆಲಸವನ್ನು ಮಾಡಿಡೆನು, ಮತ್ಯಾವಾಗಲೂ ಯಾವ ಅಪರಾಧವನ್ನೂ ಮಾಡಿದವನಲ್ಲ. ಚಿರ ಜೀವನವೂ ಆ ಒಂದುದಿನದ ಅಪರಾಧಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿದ್ದೇನೆ, ನೀನು ನನ್ನನ್ನು ಗ್ರಹಣವೂಡುವಿಯಾ ? ಎಂದು ಕೇಳಿದೆನು. - ರಜನಿಯು ಆಳುತಳ, ತಾವು ಚಿರಕಾಲ ಕಳ್ಳತನ ಮಾಡಿದರೂ, ತಾವು ಸಹಸ್ರ ಬ್ರಹ್ಮಹತ್ಯ. ಗೋಹತ್ಯೆ, ಹತ್ಯಗಳನ್ನು ಮಾಡಿದ್ದರೂ ತಾವು ನನಗೆ ದೇವತಾ ಸ್ವರೂಪರಾಗಿರುತ್ತೀರಿ. ತಮ್ಮ ಚರಣದಲ್ಲಿ ನನಗೆ ಸ್ಥಾನವನ್ನು ಕೊಡುವಿರಾದರೆ ನಾನು ತಮ್ಮ ದಾಸಿಯಾಗುವೆನು, ಆದರೆ ನಾನು ತಮ್ಮ ದಾಸಿಯಾಗಲು ಯೋಗ್ಯ ಇಲ್ಲ. ಆ ಮಾತನ್ನು ತಾವು ಕೇಳುವುದು ಉಳಿದಿದೆ ಎಂದಳು, ನಾನು-ಅದೇನು ರಜನಿ ! ರಜನಿ-ಈ ನನ್ನ ಪಾಪಿಯಾದ ಮನಸ್ಸು ಇತರರಿಗೆ ಎಕ್ರೀತವಾಗಿದೆ. ನಾನು ಚಮಕಿ ನಾಗಿ ನಡುಗಿದೆನು. ಅದೇನು ರಜನಿ ! ಎಂದು ಹೇಳಿದನು. - ರಜನಿ-ನಾನು ಹೆಂಗಸು, ನಾನು ತಮ್ಮ ಸಂಗಡ ಇನ್ನೇನು ಯಾವಪ್ರಕಾರ ಹೇಳಲಿ ? ಆದರೆ ಲವಂಗಲತೆಯು ಎಲ್ಲವನ್ನೂ ತಿಳಿದವಳಾಗಿದ್ದಾಳೆ, ತಾವು ಹೋಗಿ ಕೇಳಿದರೆ ಎಲ್ಲವೂ ಗೊತ್ತಾಗುತ್ತದೆ. ನಾನು ಎಲ್ಲ ತಿಳಿಸಬೇಕೆಂದು ಹೇಳಿದೆನೆಂದು ಹೇಳಬಹುದು. ನಾನು ಆ ಕೂಡಲೇ ಮಿತ್ರರ ಮನೆಗೆ ಹೋದೆನು, ಲವಂಗತೆಯನ್ನು ನೋಡಲು ಯಾವಪ್ರಕಾರ ಅನುಕೂಲಪಡಿಸಿಕೊಂಡೆನೋ ಅದು ಅಲ್ಪ ವಿಷಮಯ ದಾದುದರಿಂದ ಅದನ್ನು ವಿವರಿಸಿ ಕಾಲಹರಣ ಮಾಡುವುದಿಲ್ಲ, ಹೋಗಿ ನೋಡಿದೆನು,