ಪುಟ:ರಜನೀ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ 106 ನೋಡಲಾಗಿ ಲವಂಗತೆಯು ಧೂಳಿಯಲ್ಲಿ ಬಿದ್ದು ಶಚೀಂದ್ರನಿಗೋಸ್ಕರ ಅಳುತ್ತಿ ದ್ದಳು. ನಾನು ಹೋಗುತ್ತಲೇ ಅವಂಗಲತೆಯು ನನ್ನ ಕಾಲುಗಳನ್ನು ಹಿಡಿದು ಕೊಂಡು ಮತ್ತಷ್ಟು ಹೆಚ್ಚಾಗಿ ಅಳಲಾರಂಭಿಸಿದಳು. ಕಡೆಗೆ ಕ್ಷಮಿಸು, ಅಮರನಾಥ ! ಕ್ಷಮಿಸು, ನಿನ್ನ ಮೇಲೆ ನಾನು ಹೆಚ್ಚು ಅತ್ಯಾಚಾರ ಮಾಡಿದುದರಿಂದ ದೇವರು ನನಗೆ ತಕ್ಕ ಶಿಕ್ಷೆ ಮಾಡುತ್ತಾನೆ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಪುತ್ರನಿಗಿಂತಲೂ ನನಗೆ ಹೆಚ್ಚು ಪ್ರಿಯ ಪುತ್ರನಾದ ಶಚೀಂದ್ರನು ನನ್ನ ದೋಷದಿಂದಲೇ ಪ್ರಾಣವನ್ನು ಕಳೆದುಕೊಂಡರು. ನಾನು ವಿಷಪಾನ ಮಾಡಿ ಪ್ರಾಣ ಬಿಟ್ಟು ಬಿಡುವೆನು. ಈಹೊತ್ತು ನಾನು ನಿನ್ನ ಇದಿರಿಗೆ ವಿಷವನ್ನು ತೆಗೆದುಕೊಂಡು ಪ್ರಾಣವನ್ನು ಬಿಡುವೆನೆಂದು ಹೇಳಿದಳು. ನನ್ನ ಎದೆಯ ಸೀಳಿದಹಾTT Nತು, ನಂಗಳು ಅಳುತ್ತಾಳೆ, ರಜನಿಯ ಅಳುತ್ತಾಳೆ ಇವರು ಬೆಂಗಸರು. ಎಷ್ಟು ಬೇಕಾದರೂ ಕಣ್ಣೀರನ್ನು ಸುರಿಸಬಲ್ಲರು. ನನ್ನ ಕಣ್ಣುಗಳಿಂದ ನೀರು ಬೀಳುತ್ತಿರಲಿಲ್ಲ. ಆದರೆ ರಜನಿಯ ಮಾತನ್ನು ಕೇಳಿ ನನ್ನ ಹೃದಯದೊಳಗಿನಿಂದ ರೊದನಧ್ವನಿಯು ಏಳುತಲಿತ್ತು, ಲವಂಗಳು ಅಳುತ್ತಾಳೆ ; ರಜನಿಯ ಅಳುತ್ತಾಳೆ ; ನಾನೂ ಆಳುತ್ತೇನೆ ಮತ್ತು ಶಚೀಂದ್ರನಿಗೆ ಈ ದೆಶೆ ! ಸಂಸಾರದಲ್ಲಿ ಸುಖವಿದೆಯೆಂದು ಯಾರು ಹೇಳುವರು ? ಸಂಸಾರವು ಅಂಧಕಾರ ! ನನ್ನ ದುಃಖವನ್ನು ಒಂದು ಕಡೆಗೆದಗಿಸಿಟ್ಟುಕೊಂಡು ಮೊದಲು ಲವಂಗ ಲತೆಯ ದುಃಖವನ್ನು ಕುರಿತು ವಿಚಾರ ಮಾಡಿದೆವು. ಲವಂಗಳು ಅಳು ತಳುತ ಶಚೀಂ ದ್ರನ ರೋಗದ ವೃತ್ತಾಂತವನ್ನೆಲ್ಲ ವಿಶದವಾಗಿ ಹೇಳಿದಳು, ಸನ್ಯಾಸಿಯ ವಿದ್ಯಾ ಪರೀಕ್ಷೆಯನ್ನು ಮಾಡಿದ ಮೊದಲ್ಗೊ ೧ಡು ರುಗ್ನ ಶಯ್ಕೆಯಲ್ಲಿ ರಜನಿಯನ್ನು ನೋಡಿ ದವರೆಗೆ ನಡೆದುದೆಲ್ಲ ಹೇಳಿದಳು, ಅನಂತರ ರಜನಿಯ ಮಾತನ್ನು ಕ೦ತು ಕೇಳಿ ಅವಳು ಹೇಳುವಹಾಗೆ ಹೇಳ ಬೇಕೆಂದು ಹೇಳಿದ್ದಾಳೆಂದು ತಿಳಿಸಿದೆನು. ಲವಂಗಳು ರಜನಿಯಿಂದ ಕೇಳಿದುದನೆಲ್ಲ ಮರೆಮಾಚದೆ ಹೆಳಿದಳು. - ರಜನಿಂತು ಶಚೀಂದ್ರನವಳು, ಶಚೀಂದ್ರನು ರಜನಿಗೆ ಸೇರಿದವನು. ಮಧ್ಯೆ ನಾನು ಯಾರು ? ಈ ತಡವೆ ಬಟ್ಟೆಯನ್ನು ಮುಖದ ಮೇಲೆ ಹಾಕಿ ಕೊಂಡು ಆಳುತಳುತ ಮಳೆಗೆ ಹಿಂದಿರುಗಿ ಹೋಟುಹೋದೆನಾ