ಪುಟ:ರಜನೀ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜನಿ M \ r\ \ / s+1 1 * (174 Sr***

  • *
    • AMN

ಸಂತುಷ್ಟರಾಗುತಲಿದ್ದೆವು. ಲವಂಗತೆಯು ನಮ್ಮಲ್ಲಿ ಗೂಡೆ'ಡೆ ಕೂವನ್ನು ತೆಗೆದು ಕೊಂಡು ರಾಮಸದಯನ ಹಾಸಿಗೆಯ ಮೇಲೆಲ್ಲಾ ಹಸುವಳು. ಗಂಡಹೆಂಡಿ ರಿಬ್ಬರೂ ಪರಸ್ಪರ ಮನಸ್ಸು ಒಂದಾಗಿ ಕನ್ನಡಿಯಹಾಗೆ ಒಬ್ಬರ ಮನಸ್ಸನ್ನು ಒಬ್ಬರು ಸುಲಭವಾಗಿ ತಿಳಿಯುತಲಿದ್ದರು. ಅವಂಗತೆಯು ಇಷ್ಟು ದುಡ್ಡು ಕೊಡುತ್ತಿದ್ದರೆ ದೊಡ್ಡವರ ಮನೆಗೆ ಹೂ ವನ್ನು ಕೊಡಬೇಕಾದರೆ ಕಷ್ಟವೇತಕ್ಕೆ? ಹಾಗಾದರೆ ಕೇಳಿ ಹೇಳುತ್ತೇನೆ. ಒಂದುದಿನ ನನ್ನ ತಾಯಿಗೆ ಜ್ವರ ಬಂದಿತ್ತು. ಅಂತಃಪುರಕ್ಕೆ ನನ್ನ ತಂದೆಯು ಹೋಗಕೂಡದು ; ಲವಂಗಲತೆಗೆ ನನ್ನ ಹೊರ್ತು ಬೇರೆಜನರು ಹೂ ತೆಗೆದುಕೊಂಡು ಹೋಗಿ ಕೊಡುವವರು ಇಲ್ಲ. ನಾನೇ ಲವಂಗತೆಗೋಸ್ಕರ ಹೂವನ್ನು ತೆಗೆದು ಕೊಂಡು ಹೊರಟೆ. ಅಂಧಳೇ ಹೌದು. ಅದು ಹೇಗಾದರೂ ಆಗಲಿ; ಕಲಿಕತ್ತೆಯಲ್ಲಿ ರಸ್ತೆಗಳೆಲ್ಲ ನನ್ನ ನಖದರ್ಪಣದಲ್ಲಿತ್ತು. ಕೈಯಲ್ಲಿ ಸೋಲನ್ನು ಹಿಡಿದುಕೊಂಡು ಸರ್ವತ್ರ ಹೋಗಬಲ್ಲವಳಾಗಿದ್ದೆನು. ಯಾವಾಗಲೂ ಭಂಡಿ ಮತ್ತು ಕುದುರೆಯ ಕಾಲಿಗೆ ಸಿಕ್ಕಲಿಲ್ಲ. ಅನೇಕತಡವೆ ಪಾದಚಾರಿಗಳು ಮೈವೆ ಸೀಳುವರು. ಅವರು ಇವಳು ಅಂಧಯುವತಿಯೊಂದು ಹಾದಿಬಿಡದೆ, ಎಲೆ | ನೋಡಿಕೊಂಡು ಬರಕೂಡದ, ಕುರಡಿಯೆ ? ಎಂದಂದುಕೊಳ್ಳುವರು, ನಾನು « ಉಭಯತಃ ಎಂದಂದು ಕೊಳ್ಳು ತಿದ್ದನು. - ಹೂವನ್ನು ತೆಗೆದುಕೊಂಡು ಲವಂಗತೆಯ ಬಳಿಗೆ ಹೋದೆ, ಲವಂಗಲತೆಯು ನೋಡಿ, ಏನೇ ಕುರುಡಿ ! ಪುನಃ ಹೂವು ತೆಗೆದುಕೊಂಡು ಸಾಯುತ್ತ ಬೀಳುತ್ತ ಬಂದಿಯಾ ? ಎಂದಳು. ಕುರುಡಿಯೆಂದು ಹೇಳಿದರೆ ನನಗೆ ಮೈಯೆಲ್ಲಾ ಉರಿಯುತ ಲಿತ್ತು. ನಾನು ಅದಕ್ಕೆ ಸರಿಯಾದ ಉತ್ತರವನ್ನು ಕೊಡುತಲಿದ್ದೆ. ಅಷ್ಟರೊಳಗೆ ಇದ್ದ ಕ್ಕಿದ್ದ ಹಾಗೆ ಯಾರೋ ಬರುವ ಶಬ್ದವು ಕೇಳಿಸಿತು. ಯಾರೋ ಬಂದರು. ಬಂದ ವರು, ಇದು ಯಾರು ? ಚಿಕ್ಕಮ್ಮ ! ಎಂದು ಕೇಳಿದರು. ಚಿಕ್ಕಮ್ಮ ! ಎಂದು ಕರೆಯ ಬೇಕಾದರೆ ಯಾರು ಇರಬೇಕು ? ರಾಮಸದಯನ ಮಗ, ರಾಮಸದಯನ ಯಾವ ಮಗ! ದೊಡ್ಡ ಮಗನ ಧ್ವನಿಯನ್ನು ಒಂದುದಿನ ಕೇಳಿದ್ದೆನು. ಅದು ಅಷ್ಟು ಅಮೃತ ಮಯವಾಗಿರಲಿಲ್ಲ. ಹೀಗೆ ಕರ್ಣವಿವರವನ್ನು ತುಂಬಿ ಸುಖವುಂಟಾಗುತ್ತಿರಲಿಲ್ಲ. ಇವನು ಚಿಕ್ಕ ಬಾಬುವಾಗಿರಬೇಕೆಂದು ತಿಳಿದುಕೊಂಡೆನು, ರಾದ ಕಂಠದಿಂದ ೬ವಳು ಕುರುಡ ಹೂವಾಳ ಗಿತ್ತಿಯೆಂದು ಹೇಳಿದಳು,