ಪುಟ:ರಜನೀ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ 17 wwwwwwwwಯ ಲವಂಗ-ಏತಕ್ಕೆ ? ಚಿಕ್ಕ ಬಾಬು ಮದುವೆ ಮಾಡಿಸುತ್ತಾನೆ. ಏತಕ್ಕೆ, ಆಗ ಇಡದೆ ? ಇನ್ನೂ ಹೆಚ್ಚು ಉರಿದು, ನಾನು ನಿಮಗೇನು ತಪ್ಪು ಮಾಡಿದೆ ಎಂದು ಕೇಳಿದೆ. ಲವಂಗಲತೆಯು ಕೋಪಗೊಂಡು, ಅಯ್ಯೋ ! ಹೆಣ್ಣೆ ! ನಿನಗೆ ಮದುವೆಯ ಗುವ ಮನಸ್ಸು ಇಲ್ಲವೇನೆ ? ಎಂದಳು. ನಾನು ತಲೆಯನ್ನ ಲ್ಲಾಡಿಸುತ್ತ, ಇಲ್ಲವೆಂದನು. ಲವಂಗತೆಯು ಮತ್ತಷ್ಟು ಕೋಪವಶಳಾಗಿ, ಎಂತಹ ಪಾಪಿಷ್ಟಳೆ ನೀನು ! ನಿನ್ನನ್ನು ಮದುವೆಮಾಡಿಕೊಳ್ಳುವವರುತನೇ ಯಾರೇ ? ಎಂದಳು. ನಾನು-ಇಷ್ಟ, ಲವಂಗಲತೆಯ ಮನಸ್ಸಿನಲ್ಲಿ, ನಾನು ಕುಲಭ್ರಷ್ಠಳೆಂಕಲ ಇಲ್ಲದಿದ್ದರೆ ವಿವಾ ಹಕ್ಕೆ ಏತಕ್ಕೆ ಸಮ್ಮತಿಸದಿರುವಳು ಎಂತಲೂ ತಿಳಿದುಕೊಂಡಹಾಗೆ ತೋರುತ್ತದೆ. ಅವಳು ಇನ್ನೂ ಹೆಚ್ಚು ರಗತಿ೦ಧಳಾಗಿ, ಆಹಾ! ಹೆಣ್ಣೆ ! ಇಷ್ಟವಿಲ್ಲದಿದ್ದರೆ ಕಸಬರಿಕೆಯಿಂದ ಹೊಡದು ಇಲ್ಲಿಂದ ಹೊರಡಿಸುತ್ತೇನೆಂದು ಹೇಳಿದರು, ನಾನು ಎದ್ದೆ- ನನ್ನ ಎರಡು ಅಂಧ ಚಕ್ಷುಗಳಿಂದ ನೀರು ಸುರಿಯುತಲಿತ್ತು, ಅದನ್ನು ಅವಂಗಲತೆಗೆ ತೋರಿಸದೆ ಮುಖವನ್ನು ತಿರುಗಿಸಿಕೊಂಡೆನು. ಮನೆಗೆ ಹೋಗ ಬೇಕೆಂದು ಹೊರಟೆ. ಹೊರಟವಳು ವೆಟ್ಟುಗಳ ಹತ್ತಿರ ಕಡವಾಡುತಲಿದ್ದೆ, ಲವಂಗ ಲತೆಯನ್ನು ತಿರಸ್ಕರಿಸಲು ಹೇಳಬೇಕೆಂದಿದ್ದ ಮಾತುಗಳು ಯಾವವೂ ಏತಕ್ಕೆ ಬಾಯಿ ನಿಂದ ಹೊರಡಲಿಲ್ಲವೋ ಗೊತ್ತಾಗಲಿಲ್ಲ. ಅಕಸ್ಮಾತ್ತಾಗಿ ಯಾರದೇ ನೀ ನಡೆದುಬರುವ ಶಬ್ದವು ಕಿವಿಗೆ ಬಿತ್ತು, ಅಂಧಕರ ಶ್ರವಣಶಕ್ತಿಯು ಅತಿಶಯವಾಗಿ ಅಸಾಧಾರಣ ವಾದ ಪ್ರಖರತೆಯನ್ನು ಹೊಂದುತ್ತದೆ. ನಾನು ಆ ಪದಶಬ್ದವನ್ನು ಒಂದೆರಡು ಕಡವೆ ಕೇಳಿದ್ದೆನು. ಅದು ಇಂತಹವರದೆಂದು ಗೊತ್ತಾಯಿತು. ಮೆಟ್ಟುಗಳಮೇಲೆ ಕುಳಿತು ಕಂಡೆನು, ಚಿಕ್ಕಬಾಬುವು ಹತ್ತಿರ ಬಂದು ನನ್ನನ್ನು ನೋಡಿದನು. ನೋಡಿ ನನ್ನ ಕಣ್ಣುಗಳಿಂದ ಬರುತಲಿದ್ದ ನೀರನ್ನು ನೋಡಿದನೆಂದು ತೋರುತ್ತದೆ. ನೋಡಿದವನು, ಏಶಕ್ಕೆ ರಜನಿ ? ಎಂದು ಕೇಳಿದನು.

  • ಎಲ್ಲಾ ಮರೆತುಬಿಟ್ಟೆ ! ಕೋಪ ಹೋಯಿತು ! ಅಪಮಾನವನ್ನು ಮರತೆ ! ದುಃಖವನ್ನು ಮರತೆ | ಕಿವಿಯಲ್ಲಿ, ಏತಕ್ಕೆ ರಜನಿ? ಎಂಬುದು ಶಬ್ದ ವಾಗಲಾರಂಭ ವಾಯಿತು. ನಾನು ಉತ್ತರವನ್ನು ಕೊಡಲಿಲ್ಲ-ಮನಸ್ಸಿನಲ್ಲಿ ಇನ್ನೊಂದೆರಡು ತಳವೆ ಕೇಳಲಿ-ನಾನದನ್ನು ಕೇಳಿ ಕಿವಿಗಳನ್ನು ಇಂದುವಾಡಿಕೊಳ್ಳುತ್ತೇನೆಂದು ಸುಮ್ಮನಿದ್ದೆ.