ಪುಟ:ರಜನೀ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲ್ಲಿ ಚಚನಿಳಿ www ಆಗ ನಾನು ಹೀರಾಲಾಲನ ಚರಿತ್ರೆಯನ್ನು ಕೇಳಿರಲಿಲ್ಲ. ಈಚಿಗೆ ಕೇಳಿದೆ. ನಮ್ಮ ತಂದೆಯು ಸ್ವಲ್ಪ ಅನುಮಾನಪಟ್ಟು ಕೊಂಡು ಹಿಂಜರಿಯಲಾರಂಭಿಸಿ, ಇಂತಹ ದೊಡ್ಡ ಪಂಡಿತನಾದ ಅಳಿಯನನ್ನು ಕೈಬಿಡಬೇಕಾಗಿ ಬಂತೆಂದು ದುಃಖಪಟ್ಟು, ಕಡೆಗೆ, ಮತ್ತು ನಿಷ್ಕರ್ಷೆಯಾಗಿ ಹೋಯಿತು. ಈಗ ಬದಲಾಯಿಸುವುದಕ್ಕಿಲ್ಲವಾಗಿದೆ. ಅಲ್ಲದೆ ಈ ವಿವಾಹಕ್ಕೆ ಶಚೀಂದ್ರಬಾಬುವೇ ಯಜಮಾನನಾಗಿದ್ದಾನೆ, ಅವನೇ ಲಗ್ನ ಮಾಡಿಸುವನು. ಅವನು ಹೇಗೆ ಮಾಡುವನೋ ಹಾಗಾಗುತ್ತದೆ. ಅವನೇ ಗೋಪಾಲ ಬಾಬುವಿನ ಸಂಬಂಧವನ್ನು ಗೊತ್ತು ಮಾಡಿದ್ದಾನೆಂದು ಹೇಳಿದನು. ಹೀರಾ-ಅವನ ಅಭಿಪ್ರಾಯವನ್ನು ನೀನು ಹೇಗೆ ತಿಳಿಯುವೆ? ದೊಡ್ಡವರ ಮರ್ಮವನ್ನು ತಿಳಿಯುವುದು ಕಷ್ಟ. ಅವರನ್ನ ನಂಬಬೇಡ, ಹೀಗೆಂದು ಹೇಳಿ ಹೀರಾ ೮ಾಲನು ತಂದೆಯ ಕಿವಿಯಲ್ಲಿ ಏನೋ ಏಕಾಂತವಾಗಿ ಹೇಳಿದ. ಅದು ಕೇಳಿಸಲಿಲ್ಲ. ತಂದೆಯು ಅದು ಹೇಗೆ ? ಇರಲಾರದು. ನನ್ನ ಮಗಳು ಕಣ್ಣಿಲ್ಲದಹುಡುಗಿ ಎಂದನು. ಹೀರಾಲಾಲನು ಭಗ್ನ ಮನೋರಧನಾಗಿ ಅತ್ತಿತ್ತ ನೋಡಿದನು, ನಾಲ್ಕು ಕಡೆಯೂ ನೋಡಿ, ನಿಮ್ಮ ಮನೆಯಲ್ಲಿ ಮದ್ಯವಿಲ್ಲವೆ ? ನಿಜ, ಇರಲಾರದೆಂದು ಹೇಳಿ ಕೊಂಡನು, ತಂದೆಯು ಆಶ್ಚರ ಪಟ್ಟು ಮದುವೆ ! ಏತಕ್ಕೆ ಇಡಲಿ ? ಎಂದನು. ಹೀರಾಲಾಲನು ಮದ್ಯವಿಲ್ಲವೆಂದು ತಿಳಿದು, ಕೇವಲ ಪಂಡಿತನ ಹಾಗೆ ನಟಿಸಿ, ನಿಮಗೆ ಎಚ್ಚರಿಸುವುದಕ್ಕೋಸ್ಕರವಾಗಿ ಹಾಗೆ ಕೇಳಿದೆ. ಈ ಕಾಲದಲ್ಲಿ ದೊಡ್ಡವರ ಸಂಗಡ ಸಂಬಂಧವನ್ನು ಬೆಳಸಬೇಕಾದರೆ ಅದು ಮನೆಯಲ್ಲಿ ಇದ್ದೇ ಇರಬೇಕು. ಇಲ್ಲ ದಿದ್ದರೆ ಗೌರವವೇ ಇಲ್ಲವೆಂದನು, - ಈ ಮಾತು ನಮ್ಮ ತಂದೆಗೆ ಚೆನ್ನಾಗಿ ತೋರಲಿಲ್ಲವಾಗಿ ಅವನು ಸುಮ್ಮನ್ನಿದ್ದು ಬಿಟ್ಟನು, ಹೀರಾಲಾಲನು ಮದುವೆಯಲ್ಲಿಯೂ ಮದ್ಯಪಾನದಲ್ಲಿಯೂ ದೇಶದ ಉನ್ನ ತಿಗೆ ಎಗ್ಯಾಂಪಲ್‌ಸೆಟ್ ಮಾಡುವುದಕ್ಕೆ ಅವಕಾಶ ಸಿಕ್ಕದೆ ಕ್ಷುಣ್ಣನಾಗಿ ಹೊರಟು ಹೋದನು. --- -- ಆರನೆಯ ಪರಿಚ್ಛೇದ. ಲಗ್ನವು ಬಹಳ ಹತ್ತಿರವಾಯಿತು, ಒಂದೇದಿನ ಉಳಿಯಿತು. ಉಪಾಯವಿಲ್ಲ! ನಿಷ್ಮತಿಯಿಲ್ಲ ! ನಾಲ್ಕು ದಿಕ್ಕುಗಳಿಂದ ಉಕ್ಕುತ್ತಿರುವ ವಾರಿರಾಶಿಯು ಗರ್ಜಿಸಿ ಕೊಂಡು ಬರುತ್ತದೆ. ನಿಜವಾಗಿ ಮುಣುಗಿ ಹೋಗುವೆನು,