ಪುಟ:ರಜನೀ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಕಜನಿಳಿ AuAkh, tv vvvvv vvGMMMA ನಾನು-ಕೇಳೆ, ತಾಯಿ, ! ಈ ವಿವಾಹದಲ್ಲಿ ನೀನು ಎಷ್ಟು ವಿರಕ್ತಳಾಗಿದ್ದೀಯೋ ನಾನೂ ಅಷ್ಟು ವಿರಕ್ತಳಾಗಿದ್ದೇನೆ. ಈ ವಿವಾಹವು ನಡೆಯದಿರಲು ಏನು ಮಾಡ ಬೇಕೋ ಅದನ್ನು ಮಾಡಲು ಸಿದ್ಧವಾಗಿದ್ದೇನೆ. ಯಾತರಿಂದ ಈ ವಿವಾಹವು ನಿಂತು ಹೋಗಬಹುದೋ ಅದನ್ನು ಹೇಳಬಲ್ಲೆಯಾ ? ಚಂಪಳು ವಿಸ್ಮಿತಳಾಗಿ, ಹೆ+ಗಾದರೆ ನಿಮ್ಮ ತಂದೆತಾಯಿಗಳಿಗೆ ಹೇಳಕೂಡ ದೇತಕ್ಕೆ ? ಎಂದಳು, ನಾನು-ಸಾವಿರಸಲ ಹೇಳಿದೆ. ಏನೂ ಆಗಲಿಲ್ಲ. ಚಂದ -ಬಾಬುಗಳ ಮನೆಗೆ ಹೋಗಿ ಅವರ ಕಾಲು ಕಟ್ಟಿಕೊಳ್ಳಕೂಡದೆ ? ನಾನು-ಅದರಿಂದ ಏನೂ ಆಗಲಿಲ್ಲ, ಚಂಪಳು ಸ್ವಲ್ಪ ಯೋಚಿಸಿ, ಹಾಗಾದರೆ ಒಂದು ಕೆಲಸ ಮಾಡುತ್ತೀಯಾ ? ಎಂದಳು, ನಾನು... ಏನು ? ಚಂಪ.-ಎರಡು ದಿನ ಔತTಡಿಮಯಾ ? ನಾನು-ಎಲ್ಲಿ ಔತುಕೊಂಡಿರಲಿ ? ನನಗೆ ಸ್ಥಳವೆಲ್ಲಿ ? ಚಂಪಳು ಪ್ರಸೆ ಸ್ವಲ್ಪ ಯೋಚಿಸಿ, ನನ್ನ ತಂದೆಯ ಮನೆಯಲ್ಲಿ ಹೋಗಿರು ವಯಾ? ಎಂದಳು, ಕೆಟ್ಟದ್ದೇನು ? ಈ ಅಪಾಯದಿಂದುದ್ಧಾರವಾಗುವುದಕ್ಕೆ ಬೇರೆ ಮಾರ್ಗವಿಲ್ಲ ಎಂದು ಯೋಚಿಸಿ, ನಾನು ಕಣ್ಣು ಇಲ್ಲದವಳು, ಹೊಸ ಸ್ಥಳಕ್ಕೆ ನನ್ನನ್ನು ಕರೆದು ಕೊಂಡು ಹೋಗುವವರು ಯಾರು ? ನಿಮ್ಮ ತಂದೆಯ ಮನೆಯಲ್ಲಿ ಸ್ಥಳವನ್ನು ಕೊಟ್ಟಾರೆ ? ಎಂದು ಕೇಳಿದೆನು. ಚಂಪಳು ನನ್ನ ಸರನಾಶಕ್ಕೆ ಕುಪ್ರವೃತ್ತಿಯುಳ್ಳ ಮೂರ್ತಿಮತಿಯಾಗಿ ಬಂದಿ ದ್ದವಳು, ಅದರ ಯೋಚನೆ ನಿನಗೆ ಬೇಡ, ಅದರ ಅನುಕೂಲಗಳನ್ನೆಲ್ಲ ನಾನು ಮಾಡು ಜೈನ, ನಾನು ಸಂಗಡ ಮನುಷ್ಯನನ್ನು ಕಳುಹಿಸುತ್ತೇನೆ; ಅವನ ಸಂಗಡ ಎಲ್ಲಾ ಹೇಳುತ್ತೇನೆ ; ನೀನು ಹೋಗುವುದು ನಿಜವೊ ? ಹೇಳೆಂದಳು, ಮುಣುಗಿ ಹೋಗುವವನಿಗೆ ಹತ್ತಿರದಲ್ಲಿ ಕೈಗೆ ಸಿಕ್ಕಿದ ಹಲಿಗೆಯಂತ ಹೀಗೆ ಮಾಡುವುದೊಂದೇ ನನ್ನ ರಕ್ಷಣೆಗೆ ಉಪಾಯವೆಂದು ನನಗೆ ಬೋಧೆಯಾಯಿತು, ನಾನು ಅದಕ್ಕೆ ಒಪ್ಪಿಕೊಂಡೆನು. ಚಂಪಳು, ಒಳ್ಳೇದು, ಸರಿಯಾಗಿದ್ದುಕೊಂಡಿರು. ರಾತ್ರಿ ಎಲ್ಲರೂ ಮಲಗಿದ ಮೇಲೆ ನಾನು ಬಂದು ಬಾಗಿಲು ತಟ್ಟುತ್ತೇನೆ, ಹೊರಗೆ ಹೊರಟು ಬಂದುಬಿಡೆಂದಳು. ನಾನು ಸಮ್ಮತಳಾದೆನು. k