ಪುಟ:ರಜನೀ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ

ಪ್ರತಿಶಬ್ದದಲ್ಲಿಯ, ಪ್ರತಿ ಅಕ್ಷಗಳಲ್ಲಿಯ ಎಷ್ಟು ಸುಖದುಃಖಗಳ ತರಂಗಗಳು ಏಳುತ್ತದೆಯೋ ಅದನ್ನು ತಿಳಿಯುವವರು ಯಾರಾದರೂ ಹುಟ್ಟಿದ್ದಾರೆಯೆ ? ಸುಖ ದುಃಖ ? ಓ! ಸುಖವೂ ಇದೆ ! ಚೈತ್ರ ಮಾಸದಲ್ಲಿ ಪುಷ್ಪ ತುಂಬಿದ ಬುಟ್ಟಿಗಳೊಂದಿಗೆ ಮಧುಮಕ್ಷಿಗಳು ನಮ್ಮ ಮನೆಯೊಳಗೆ ಪ್ರವೇಶ ಮಾಡಿದಾಗ ಅದರ ಕ್ರೀಂಕಾರ ಶಬ್ದವು ನನಗೆ ಎಷ್ಟು ಸುಖವುಂಟುಮಾಡುತಲಿತ್ತೊ ಅದನ್ನರಿಯುವವರು ಯಾರು ? ಸಂಗೀತ ವ್ಯವಸಾಯ ಮಹಡಿಯ ಮೇಲಿನಿಂದ ವಾದ್ಯ ನಿಕ್ಷಣವು ಸಂಧ್ಯಾಕಾಲದ ತಂಗಾಳಿಯಲ್ಲಿ ಹರಿದುಬಂದು ಕರ್ಣಕುಹರವನ್ನು ತುಂಬುವಾಗ ನನಗೆ ಉಂಟಾಗುತ ಲಿದ್ದ ಸುಖವನ್ನು ಯಾರು ತಿಳಿಯುವವರು ? ನಾವಚರಣನು ತೊದಲು ನುಡಿ ಗಳನ್ನು ನುಡಿಯುವುದಕ್ಕೆ ಪ್ರಾರಂಭಿಸಿ ಅನ್ನಕ್ಕೆ < ಬೊ” ಎಂತಲೂ, ನೀರಿಗೆ ( ತೀ ” ಎಂತಲೂ, ಪದ್ಮಾ ಅನ್ನುವುದಕ್ಕೆ 1 ಚಬ್ಬ' ಎಂತಲೂ, ರಜನಿ ಎಂಬುವು ದಕ್ಕೆ 14 ಜಂಜಿ” ಎಂತಲೂ ಅರ್ಧಸುಟಿತವಾದ ಅಕ್ಷರಗಳನ್ನು ನುಡಿದಾಗ ಕೇಳಿ ನನ್ನ ಮನಸ್ಸಿನಲ್ಲಿ ಉಕ್ಕಿ ಬರುತಲಿದ್ದ ಸುಖವನ್ನು ಯಾರು ತಿಳಿಯುವವರಾಗಿದ್ದರು ? ನನ್ನ ದುಃಖವನ್ನು ತಾವೇ ಯಾರು ತಿಳಿಯುವರು ? ಅಂಧಳಿಗೆ ಇರುವ ರೂಪೋನ್ಮಾದ ವನ್ನು ಯಾರು ಜರಿಯುವರು ? ಕಣ್ಣು ಕಾರ್ಣಿದಿರುವುದರಿಂದುಂಟಾಗುವ ದುಃಖವನ್ನು ಯಾರು ಬಲ್ಲರು ? ತಿಳಿದರೂ ತಿ"ಯಬಹುದು, ಆದರೆ ದುಃಖವನ್ನು ಹೊರಪಡಿಸಲಶ ಕಳಾದವಳ ದುಃಖವನ್ನು ಯಾರು ತಿಳಿಯ ವರು ? ಸೃದ್ಧಿಯಲ್ಲಿ ದುಃಖದ್ಯೋತಕವಾದ ಭಾಷೆಯಿಲ್ಲವೆಂಬ ದುಃಖವನ್ನು ಯಾರು ತಿಳಿಯುವರು ? ಸಣ್ಣದಾದ ಬಾಯಿಂದ ದೊಡ್ಡದಾದ ಮಾತನ್ನು ಹೇಳಿದರೆ ನೀವು ಪ್ರೀತಿಸುವುದಿಲ್ಲ. ಸಣ್ಣದಾದ ಮಾತಿನಿಂದ ದೊಡ್ಡದಾದ ದುಃಖವನ್ನು ಪ್ರಕಾಶಮಾಡಲು ಸಾಧ್ಯವೆ ? ಇನ್ನೂ ದುಃಖವೇನೆಂದರೆ ; ನನಗೆ ಇರುವ ದುಃಖದಿಂದ ಹೃದಯವು ಸುಟ್ಟು ಧ್ವಂಸವಾಗುತಲಿದ್ದರೂ ಅದೆಲ್ಲವನ್ನೂ ಮನಸ್ಸಿನಲ್ಲಿ ಭಾವಿಸಿ ತಿಳಿದು ಕೊಳ್ಳಲಾರೆನೆಂಬ ದುಃಖವೇ ಹೆಚ್ಚು ದುಃಖವಾಗಿದೆ. ಮನುಷ್ಯ ಭಾಷೆಯಲ್ಲಿ ಅಂತಹ ಮಾತೂ ಇಲ್ಲ ! ಮನುಷ್ಯನಲ್ಲಿ ಅಂತಹ ಚಿಂತಾಶಕ್ತಿಯ ಇಲ್ಲ. ದುಃಖವನ್ನು ಅನುಭವಿಸುತ್ತೇನೆ, ದುಃಖವೆಂತಹದೆಂಬು ದನ್ನು ತಿಳಿದುಕೊಳ್ಳಬಾರದವಳಾಗಿದ್ದೇನೆ. ನನ್ನ ದುಃಖವು ಯಾವದು? ಅದು ಏನೋ ಯಾವದೋ ತಿಳಿದಿಲ್ಲ. ಆದರೆ ಹೃದಯವು ಸೀಳಿಹೋಗುತ್ತಲಿದೆ. ದೇಹವು ಶೀರ್ಣ ವಾಗುತಲಿರುತ್ತದೆ; ಬಲವು ಕಡಮೆಯಾಗುತಲಿರುತ್ತದೆ. ಇದನ್ನು ನೀವು ಸದಾ ನೋಡುವಿರಿ ; ಆದರೆ ನಿಮ್ಮ ಶಾರೀರಕವಾದ ರೋಗವೆಂತಹದು ಎಂದು ಗೊತ್ತು ಮಾಡಿ ಕೊಳ್ಳಲಾರಿರಿ, ಮತ್ತು ಅನೇಕ ಸಮಯದಲ್ಲಿ ನಿಮ್ಮ ದುಃಖದಿಂದ ವಕ್ಷವು ವಿದೀರ್ಣ