ಪುಟ:ರಜನೀ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ 43 NAAAAAAMAAMAhhhhhhhhhhhhh AnAAAA AANAhhhhhAAAAAAAMA ಸಮಾಜ, ವಕ್ತತೆ, ರೆಜರ್ಷ, ಮೆಮೋರಿಯಲ್, ಆವೇದನ, ನಿವೇದನ, ಸಮ ವೇದನ, ಇತ್ಯಾದಿಗಳಿದ್ದಿವೆ. ನಾನು ಅದಕ್ಕೆ ಯೋಗ್ಯನಲ್ಲ, ನಾನೊಂದುಸಲ ನನ್ನ ಸ್ನೇಹಿತನು ಒಂದು ಮಹಾಸಭೆಯ ಆರ್ವೇನಪತ್ರವನ್ನು ಓದುತಲಿದ್ದುದನ್ನು ನೋಡಿ, ಇದೇನೆಂದು ಕೇಳಿದ್ದಕ್ಕೆ ಅವನು ಅಂತಹದು ಏನೂ ಅಲ್ಲ ; ಒಬ್ಬ ಕುರುಡ ಫಕೀರನು ಭಿಕ್ಷೆ ಬೇಡುತ್ತಾನೆಂದು ಹೇಳಿದನು. ಇದೆಲ್ಲ ನನ್ನ ಅಲ್ಪಬುದ್ದಿಗೆ ಕುರುಡ ಫಕೀರಸ ಭಿಕ್ಷೆ ಎಂದು ತೋರುತ್ತದೆ, ಈ ರೋಗಕ್ಕೆ ಮತ್ತೊಂದು ಪ್ರಕಾರವಾದ ವಿಕಾರವಂಟು, ವಿಧವೆಗಳಿಗೆ ವಿವಾಹ ಮಾಡು ; ಕುಲೀನ ಬ್ರಾಹ್ಮಣರ ವಿವಾಹವನ್ನು ನಿಲ್ಲಿಸು ; ಅಲ್ಪವಯಸ್ಸಿನಲ್ಲಿ ವಿವಾಹವನ್ನು ಬಂಧಮಾಡು ; ಜಾತಿಯನ್ನು ತೆಗೆದುಹಾಕು ; ಹೆಂಗಸರು ಈಗ ದನ ಗಳಹಾಗೆ ಕೊಟ್ಟಿಗೆಯಲ್ಲಿ ಕಟ್ಟಲ್ಪಟ್ಟಿದ್ದಾರೆ ; ಹಗ್ಗ ಬಿಚ್ಚಿ ಅವರನ್ನು ಬಿಟ್ಟು ಬಿಡು ... ಧ>ರಾಳವಾಗಿ ಮೇಯುತ್ತಿರಲಿ ಎಂದು ಮುಂತಾಗಿ ಒಂದು ವಿಧವಾದ ಬೊಗಳು ಏರಿಹೋಗಿದೆ. ನನಗೆ ದನವಿಲ್ಲ. ಇತರರ ಕೊಟ್ಟಿಗೆಯಲ್ಲಿ ಸಂಬಂಧವೂ ಇಲ್ಲ. ಚಾತಿ ಯನ್ನು ತೆಗೆದುಹಾಕಲು ನನಗೆ ಅಷ್ಟು ರಜೆಯಿಲ್ಲ. ನಾನು ಅಷ್ಟು ದೂರ ಇದುವ ರೆಗೂ ಸುಶಿಕ್ಷಿತನಾಗಿಲ್ಲ. ನನಗೆ ಇನ್ನೂ ಬೀದಿ ಗುಡಿಸವವರ ಪಂಕ್ತಿಯಲ್ಲಿ ಕೂತು ಕೊಂಡು ಊಟಮಾಡುವುದಕ್ಕೆ ಇಷ್ಟವಿಲ್ಲ. ಅವರ ಹೆಣ್ಮಕ್ಕಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲ. ಪಂಡಿತಶಿರೋಮಣಿ ಮಹಾಶಯರು ನನ್ನ ನ್ನು ಬೈಯುವ ಬೈಗಳನ್ನಾದರೂ ಸಹಿಸಿಕೊಳ್ಳುವೆನೇ ಹೊರ್ತು ಮಾರ್ಜಸಿಧಾರಿಗಳ ಹತ್ತಿರ ಕೂಡುವುದನ್ನು ಸಹಿಸಲಾರೆನು, ಆದಕಾರಣ ನನಗೆ ಜಾತಿಯಿರಲಿ, ವಿಧವಾ ವಿವಾಹ ವನ್ನು ಮಾಡುವವರು ಮಾಡಿಕೊಳ್ಳಲಿ. ಕುಲೀನ ಬ್ರಾಹ್ಮಣರು ಏಕಪವ್ರತದ ಕಷ್ಟದಲ್ಲಿ ಸುಖಿಗಳಾದರೆ ಆಗಲಿ, ನನ್ನಾ ಕ್ಷೇಪಣೆಯಿಲ್ಲ. ಆದರೆ ಇದನ್ನೆಲ್ಲಾ ಅನು ಮೋದಿಸಿ ಪೋಷಿಸುವುದರಿಂದ ಜನಗಳಿಗೆ ಏನು ಹಿತಮಾಡಿದಾಗಾಗುತ್ತದೋ ಅದು ನನ್ನ ಅಲ್ಪಬುದ್ಧಿಗೆ ಗೋಚರವಾಗುವುದಿಲ್ಲ. ಆದುದರಿಂದ ಈ ಸಮಾಜದಲ್ಲಿ ನನಗೇನೂ ಕಾಧ್ಯವಿಲ್ಲ. ನಾನು ಯಾರೂ ಅಲ್ಲ. ಇದುವರೆಗೆ ನಾನೇ ನಾನಾಗಿದ್ದೇನೆ. ಇನ್ನೇನೂ ಇಲ್ಲ. ನನಗೆ ಆ ದುಃಖಮತ್ಯಾವ ದುಃಖವೂ ', ಲವಂಗತೆಯ ಕೈ ಬರಹವು ಮರೆಯುತ್ತ ಬಂತು. --- -