ಪುಟ:ರಜನೀ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ. ನನ್ನ ಮನಸ್ಸು ಈಯವಸ್ಥೆಯಲ್ಲಿದ್ದ ಸಮಯದಲ್ಲಿ ಕಾಶೀಧಾಮದಲ್ಲಿ ಗೋವಿಂದದತ್ತ ನಿಂದ ರಜನಿಯ ಹೆಸರನ್ನು ಕೇಳಿದೆನು, ಅದನ್ನು ಕೇಳಿ, ಮನಸ್ಸಿನಲ್ಲಿ ಈಶ್ವರನು ನನಗೆ ಒಂದು ಗುರುತರವಾದ ಕಾರಭಾರವನ್ನು ವಹಿಸಿದನೆಂದು ತಿಳಿದು ಕಂಡೆನು, ಈ ಸಂಸಾರ ಪ್ರಪಂಚದಲ್ಲಿ ನನಗೆ ಒಂದು ಕಾರವು ಸಿಕ್ಕಿತು. ರಜನಿಗೆ ಯಥಾರ್ಥವಾದ ಉಪಕಾರವನ್ನು ಮಾಡಬಹುದು. ನನಗೇನೋ ಬೇರೆ ಕೆಲಸವಿಲ್ಲ. ಈ ಕೆಲಸವನ್ನೇತಕ್ಕೆ ಮಾಡಕೂಡದು ? ಇದು ನನಗೆ ಯೋಗ್ಯವಾದ ಕಾರ ಪಲ್ಲ ವೇನು ? ಇಲ್ಲಿ ಶಚೀಂದ್ರನ ವಂಶಾವಳಿಯ ಪರಿಚಯವನ್ನು ಸ್ವಲ್ಪ ಹೇಳಬೇಕಾಗಿ ಬಂತು. ಶಚೀಂದ್ರನಾಥನ ತಂದೆಯ ಹೆಸರು ರಾಮಸದಯಮಿತ್ರ; ಪಿತಾಮಹನ ಹೆಸರು ವಾಂಛಾರಾಮಮಿತ್ರ ; ಪ್ರಪಿತಾಮಹನ ಹೆಸರು ಶುದ್ಧ ರಾಮಮಿತ್ರ, ಅವನ ಪೂರ್ವಪುರುಷರ ವಾಸಸ್ಥಳವು ಕಲಿಕತ್ತೆಯಲ್ಲ. ಅವರು ಭವಾನಿನಗರದಲ್ಲಿದ್ದರು. ಅವನ ತಂದೆಯೇ ಮೊದಲು ಕಲಿಕತ್ತಾಕ್ಕೆ ಬಂದವನು. ಪ್ರಪಿತಾಮಹನು ಏನೂ ಇಲ್ಲದ ದರಿದ್ರನಾಗಿದ್ದನು. ಪಿತಾಮಹನು ಸ್ವಬುದ್ದಿ ಬದಿಂದ ಹಣ ಸಂಪಾದಿಸಿ ಭೂಮಿ ಕಣಿ ಮಾಡಿದ್ದನು, * ವಾಂಛಾರಾಮನಿಗೆ ಒಬ್ಬ ಪರಮಸ್ನೇಹಿತನಿದ್ದನು. ಅವನ ಹೆಸರು ಮನೋಹರ ದಾಸ ವಾಂಛಾರಾಮನು ಮನೋಹರದಾಸನ ಸಹಾಯದಿಂದಲೇ ಈ ವೈಭವಗಳಿಗೆ ಅಧಿಪತಿಯಾದನು, ಮನೋಹರನು ಸತ್ವ ಪ್ರಯತ್ನದಿಂದ ಸ್ನೇಹಿತನ ಕಾವ್ಯವನ್ನು ಮಾಡುತಲಿದ್ದನು. ಸ್ವಂತವಾಗಿ ಹಣ ಸಂಪಾದಿಸಿಕೊಳ್ಳಲಿಲ್ಲ. ವಾಂಛಾರಾಮನು ಈ ಗುಣಗಳನ್ನು ಕಂಡು ಅವನಿಗೆ ಬಹಳ ಬಾಧ್ಯ ಪಟ್ಟಿದ್ದನು. ಮನೋಹರನನ್ನು ಸಹೋ ದರನ ಹಾಗೆ ಭಾವಿಸಿ ಪ್ರೀತಿಸುತಲಿದ್ದನು. ಮತ್ತು ಮನೋಹರನು ವಯೋಜೈಷ್ಣ ನಾದುದರಿಂದ ಅಣ್ಣ ಹಾಗೆ ಅವನನ್ನು ಮತ್ಯಾದೆ ಮಾಡುತಲಿದ್ದನು. ರಾಮಸದಯನ ತಂದೆಯಾದ ವಾಂರ್ಛಾಗಾಮನಿಗೂ ಮನೋಹರನಿಗೂ ಇದ್ದ ಹಾಗೆ ಮನೋಹರನಿಗೂ ರಾಮಸದಯನಿಗೂ ಪ್ರೀತಿ ವಿಶ್ವಾಸವಿರಲಿಲ್ಲ. ಅವರವರಿಗೆ ಸ್ವಲ್ಪ ದ್ವೇಷವೇ ಇತ್ತೆಂದು ತೋರುತ್ತದೆ. ಒಂದುಸಲ ರಾಮಸದಯನಿಗೂ ಮನಹರದಾಸನಿಗೂ ಘೋರತರವಾದ ವಿವಾದವುಂಟಾಯಿತು. ಮನೋಹರನು ವಾಂಛಾರಾಮನಿಗೆ ನಿನ್ನ ಮಗ ರಾಮಸದ