ಪುಟ:ರಜನೀ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದನೆಯ ಪಕ್ಷದ AAAAAAAAAAAAAAAAAAAAAAAAAAA MAAAA Annnnnnnnnn»wA4AAN AAAAAAAAM ಹನು ಒಂದು ವಿಷಯದಲ್ಲಿ ಸಹನಾತೀತವಾದ ಅಪಮಾನ ಮಾಡಿದ್ದಾನೆಂದು ತಿಳಿಸಿ, ಅಪಮಾನದ ಮಾತನ್ನು ಅವನಿಗೆ ಹೇಳಿ, ವಾಂಛರಿರಾಮನ ಕೆಲಸಗಳನ್ನು ಮಾಡಿ ಸಹಾಯಮಾಡುವುದನ್ನು ಬಿಟ್ಟು ಸಪರಿವಾರವಾಗಿ ಭವಾನಿನಗರವನ್ನು ಬಿಟ್ಟು ಹೊರಟು ಹೋದನು, ವಾಂಛಾರಾಮನು ಮನೋಹರನಿಗೆ ಅನೇಕ ವಿಧವಾಗಿ ಅನುನಯ ವಿನಯ ಗಳಿಂದ ಹೇಳಿಕೊಂಡನು. ಆದರೆ ಮನೋಹರನು ಯಾವದನ್ನ ಕೇಳಲಿಲ್ಲ. ಊರು ಬಿಟ್ಟು ಯಾವದೇಶಕ್ಕೆ ಹೋದನೋ ಅದನ್ನೂ ಹೇಳದೆ ಹೊರಟುಹೋದನು. ವಾಂಛಾರಾಮನು ಮಗನಮೇಲೆ ವಿಶ್ವಾಸವುಳ್ಳವನಾಗಿದ್ದರೂ ಮನೋಹರ ನನ್ನು ಅದಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತಲಿದ್ದನು. ಆದಕಾರಣ ಕಾಮಸದಯನ ಮೇಲೆ ಅಪರಿಮಿತವಾಗಿ ಕೋಪಗೊಂಡು ಅವನನ್ನು ಅತ್ಯಂತ ಕಟೂಕ್ತಿಗಳಿಂದ ಬೈದನು. ರಾಮಸದಯನೂ ಎಲ್ಲಾ ಮಾತುಗಳನ್ನು ನಿಶ್ಯಬ್ದವಾಗಿ ಸಹಿಸಿಕೊಂಡು ಕೇಳಲಿಲ್ಲ. ತಂದೆ ಮಗನ ವಿವಾದದಲ್ಲಿ ವಾಂಛಾರಾಮನು ಮಗನನ್ನು ಮನೆಯಿಂದ ಹೊರಡಿಸಿಬಿಟ್ಟನು. ಮಗನು ಮನೆಯನ್ನು ಬಿಟ್ಟು ಪುನಃ ತಂದೆಯ ಮನೆಯಲ್ಲಿ ಮುಖ ತೋರಿಸುವುದಿಲ್ಲವೆಂದು ಶಪಥಮಾಡಿಕೊಂಡು ಹೊರಟುಹೋದನು. ವಾಂಛಾeಾಮನು ಒಂದು ಉಯಿಲ್ ಬರೆದಿಟ್ಟನು, ಉಯಿಲಿನಲ್ಲಿ ತನ್ನ ಪುತ್ರನಾದ ರಾಮಸದಯನು ಯಾವಾಗ ತನ್ನ ಆಸ್ತಿಗೆ ಅಧಿಕಾರಿಯಾಗಕೂಡದೆಂತಲೂ, ವಾಂಛಾರಾಮನ ಮರಣಾನಂತರ, ಮನೋಹರದಾಸನು, ಅವನು ಇಲ್ಲದಿದ್ದರೆ ಅವನ ಉತ್ತರಾಧಿಕಾರಿ ಗಳು ಆಸ್ತಿಗೆ ಅಧಿಕಾರಿಗಳಾಗಬೇಕೆಂತಲೂ, ಅವರಿಲ್ಲದಿದ್ದರೆ ರಾಮಸದಯನ ಪುತ್ರ ಪೌತ್ರಾದಿಗಳು ಯಧಾಕ್ರಮವಾಗಿ ಅಧಿಕಾರಿಗಳಾಗಬೇಕೆಂತ, ರಾಮಸದಯನ ಮಾತ್ರ ಆಸ್ತಿಯನ್ನು ಹೊಂದಕೊಡದೆಂತಲೂ ಬರೆದಿಟ್ಟನು. ರಾಮಸದಯನು ಮೊದಲು ಹೆಂಡತಿಯನ್ನು ಕರೆದುಕೊಂಡು ತಂದೆಯ ಮನೆ ಯನ್ನು ಬಿಟ್ಟು ಕಲಿಕತ್ತೆಗೆ ಬಂದನು. ಆ ಹೆಂಡತಿಗೆ ತಂದೆಯು ಕೊಟ್ಟ ಸ್ವಲ್ಪ ಸ್ತ್ರೀ ಧನವಿತ್ತು, ಅದರ ಅವಲಂಬನದಿಂದಲೂ ಒಬ್ಬ ಒಳ್ಳೆ ಸಜ್ಜನನಾಹ ವರ್ತಕನ ಸಹಾಯದಿಂದಲೂ ರಾಮಸದಯನು ವ್ಯಾಪಾರದಲ್ಲಿ ಪ್ರವೃತ್ತನಾದನು. ಲಕ್ಷ್ಮಿಯು ಸುಪ್ರಸನ್ನಳಾದಳು. ಸಂಸಾರ ನಡೆಯುವುದಕ್ಕೆ ಅವನಿಗೆ ಕಷ್ಟವೇನೂ ಉಂಟಾಗಲಿಲ್ಲ ಹಾಗೆ ಕಷ್ಟವೇನಾದರೂ ಬಂದಿದ್ದರೆ ವಾಂಛಾರಾಮನು ಸದಯನಾಗುತ ಲಿದ್ದನು. ಪುತ್ರನ ಸುಖಃವಸ್ಥೆಯನ್ನು ಕೇಳಿ ತಂದೆಗೆ ಇದ್ದ ಸ್ನೇಹವಶೇಷವೂ ಕೂಡ ಅಳಿಸಿಹೋಯಿತು. ಪುತ್ರನು ಸ್ವಾಭಿಮಾನದಿಂದ ತಂದೆಯು ಕರೆಯದೆ ಪುನಃ ಮನೆಗೆ