ಪುಟ:ರಜನೀ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 wwwwwwwwww ರಜನಿ wwwwwwwwwwwwwwwwwwwwwwwwwwwwwwwwwww ಹೋಗುವದಿಲ್ಲ ಎಂದು ಸ್ಥಿರಮನಸ್ಕನಾಗಿ ತಂದೆಯ ಸಮಾಚಾರವನ್ನೇ ವಿಚಾರಿಸಿ ಕೊಳ್ಳಲಿಲ್ಲ. ಭಕ್ತಿಯಿಲ್ಲದೆ ತಾತ್ಕಾರದಿಂದ ಪುತ್ರನು ಹೀಗೆ ಮಾಡುತ್ತಾನೆಂದು ಯೋಚಿಸಿಕೊಂಡು ವಾ೦ಛಾರಾಮನು ಅವನನ್ನು ಪುನಃ ಕರೆಯಲೇ ಇಲ್ಲ. ಆದುದರಿಂದ ಪರಸ್ಪರ ಪುನಃ ಪ್ರೀತಿಯುಂಟಾಗಲಿಲ್ಲ. ಉಯಿಲು ಬದಲಾಯಿಸ ಲ್ಪಡದೆ ಹಾಗೆಯೇ ನಿಂತಿತು. ಹೀಗಿರುತ್ತ ಹಟಾತ್ತಾಗಿ ವಾಂಛಾರಾಮನಿಗೆ ಸ್ವರ್ಗ ಪ್ರಾಪ್ತಿಯುಂಟಾಯಿತು. ರಾಮಸದಯನು ಶೋಕಾಕುಲನಾದನು ; ತಂದೆಯು ಸಾಯುವುದಕ್ಕೆ ಮೊದಲು ಅವನ ಸಂಗಡ ಸಾಕ್ಷಾತ್ಕಾರವಾಗಿ ಮಾತನಾಡಿ ಮಾಡತಕ್ಕದ್ದೇನೆಂಬುದನ್ನು ತಿಳಿದುಕೊಳ್ಳದೆ ಹೋದುದಕ್ಕಾಗಿ ದುಃಖದಿಂದ ಅನೇಕ ದಿನಗಳ ಪರಂತವಾಗಿ ರೋದನ ಮಾಡಿದನು. ಆವನು ಪುನಃ ಭವಾನಿನಗರಕ್ಕೆ ಹೋಗಲಿಲ್ಲ. ಕಲಿಕತ್ತೆ ಯಲ್ಲಿಯೇ ಪಿತೃಕೈಂಕಯ್ಯ ವನ್ನು ನೆರವೇರಿಸಿದರು, ಏತಕ್ಕೆಂದರೆ, ಈಗ ಭವಾನಿನಗದ ಮನೆಯು ಮನೋಹರದಾಸನದಾಯಿತು, . ಇತ್ತಲಾಗಿ ಮನೋಹರನ ಸಮಾಚಾರವೇ ಇಲ್ಲ. ಕಡೆಗೆ ತಿಳಿದುಬಂದುದರಲ್ಲಿ ವಾಂಛಾರಾಮನು ಬದುಕಿರವಾಗಲೇ ಮನೋಹರನ ಸಮಾಚಾರೆ ಗೊತ್ತಾಗಿರಲಿಲ್ಲ, ಮನೋಹರದಾಸನು ಮೊದಲು ಭವಾನಿನಗರವನ್ನು ಬಿಟ್ಟಾಗಲೇ ಹೊರಟುಹೋದದು. ವಾಂಛಾರಾಮನು ಎಷ್ಟು ಪ್ರಯತ್ನ ಪಟ್ಟಾಗ ಸಮಾಚಾರವೇ ಸಿಕ್ಕಲಿಲ್ಲವಾದ ಕಾರಣ ಉಯಿಲಿಗೆ ಒಂದು ಕೊಡ ಪತ್ರವನ್ನು (Codicil) ಬರೆದಿಟ್ಟನು. ಅದರಲ್ಲಿ ತನ್ನ ಬಂಧುವಾದ ಕಲಿಕತ್ತೆಯಲ್ಲಿರುವ ವಿಷ್ಣು ರಾಮಸಮ್ಮಾರನೆಂಬುವನನ್ನು ಉಯಿಲಿಗೆ ಮಗ್ಗಿ ಕ್ಕೂಟರನ್ನಾಗಿ ಗೊತ್ತು ಮಾಡಿ ಅವನು ಮನೋಹರನನ್ನು ಪ್ರಯತ್ನ ಪಟ್ಟು ಪತ್ತೆ ಹಚ್ಚಿಸಿ ಆ ಪ್ರಯತ್ನದ ಫಲಾನುಸಾರವಾಗಿ ಆಸ್ತಿಯು ಯಾರಿಗೆ ಸೇರಬೇಕೋ ಅವರವ ರಿಗೆ ತಲ್ಪಿಸಬೇಕೆಂದು ಬರೆದನು.

  • ವಿಷ್ಣು ರಾಮಬಾಬು ಬಹಳ ವಿಚಕ್ಷಣನಾಗಿ ನಿರಪೇಕ್ಷನಾದ ಕರ್ಮಠನಾಗಿದ್ದನು. ಅವನು ವಾಂಛಾರಾಮನು ಸತ್ತ ಕೂಡಲೇ ಮನೋಹರನು ಇರುವ ಸ್ಥಳದ ಅನು ಸಂಧಾನ ಮಾಡತೊಡಗಿದನು. ಬಹಳ ಶ್ರಮಪಟ್ಟು ದುಡ್ಡು ಖರ್ಚುಮಾಡಿ ವಾಂಛಾ ರಾಮನು ಹುಡುಕದ ಸ್ಥಳಗಳನ್ನೆಲ್ಲ ಹುಡುಕಿದ್ದರಮೇಲೆ, ಮನೋಹರನು ಭವಾನಿ ನಗರದಿಂದ ಓಡಿಹೋದವನು ಕೆಲಕಾಲ ಸಪರಿವಾರವಾಗಿ ಡಾಕ್ಕಾ ಪ್ರಾಂತ್ಯಗಲ್ಲಿದ್ದು, ಅಲ್ಲಿ ಜೀವನ ನಡೆಯುವದು ಕಷ್ಟವಾಗಿ ಕಲಿಕತ್ತೆಗೆ ಹೋಗಬೇಕೆಂದು ನೌಕದಲ್ಲಿ ಬರು