ಪುಟ:ರಜನೀ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ರಜನೀ ಮೆಲ್ಲ ಮೆಲ್ಲಗೆ ಅವನ ಹಿಂದುಗಡೆ ಹೋದೆನು, ಹೋಗಿ ಅವನ ಸೊಂಟದ ಇದ್ದ ಮಚ್ಚನ್ನು ತೆಗೆದು ದೂರ ಬಿಸಾಟೆನು, ದುಷ್ಟನು ಆಗೆ ಯುವತಿಯನ್ನು ಬಿಟ್ಟು ನನ್ನ ಇದಿರಿಗೆ ಬಂದು ನಿಂತನು, ನನ್ನನ್ನು ಬೈದರು, ಅವರ ಕಣ್ಣುಗಳನ್ನು ನೋಡಿ ನನಗೆ ಭಯವಾಯಿತು, ಇನ್ನು ಅಲ್ಲಿ ಹೆಚ್ಚು ಕಾಲವಿಳಂಬ ಮಾಡುವುದು ಸರಿಯಲ್ಲ ಎಂದು ತಿಳಿದು ಒಂದುಸಲ ಅವನ ಕುತ್ತಿಗೆಗೆ ಕೈ ಹಾಕಿದೆನು, ಅವನದನ್ನು ಬಿಡಿಸಿಕೊಂಡು ನನ್ನನ್ನು ಹಿಡಿದುಕೊಂಡನು. ನಾನೂ ಪುನಃ ಅವನನ್ನು ಹಿಡಿದೆನು. ಅವನಿಗೆ ಬಲ ಹೆಚ್ಚು. ಆದರೆ ನಾನು ಭೀಶನಾಗಲಿಲ್ಲ. ನನಗೆ ಧೈರವೂ ಕುಂದಲಿಲ್ಲ. ಅವನನ್ನು ಹಿಡಿದು ಕೊಂಡು, ಅಲ್ಲಿದ್ದ ಯುವತಿಯನ್ನು ಕುರಿತು, ನೀನು ಓಡಿಹೋಗು, ಇವನಿಗೆ ಸರಿ ಯದ ದಂಡನೆ ಮಾಡುತ್ತೇನೆಂದು ಹೇಳಿದನು. ಯುವತಿಯು ಎಲ್ಲಿಗೆ ಹೋಗಲಿ ; ನಾನು ಕುರುಡಳು, ಇಲ್ಲಿ ದಾರಿಯು ಗೊತ್ತಿಲ್ಲವೆಂದು ಹೇಳಿದಳು. ಅಂಧ ! ನನ್ನ ಬಲವು ಹೆಚ್ಚಾಯಿತು. ನಾನು ರಜನಿಯೆಂಬ ಒಬ್ಬ ಅಂಧ ಕನೈಯನ್ನು ಹುಡುಕುತಲಿದ್ದೆನು, ಆ ಬಲಿಷ್ಠನಾದ ದುಷ್ಟನು ನನ್ನನ್ನು ಬಲಪೂರ್ವಕವಾಗಿ ಎಳೆದುಕೊಂಡು ಹೋಗುತಲಿದ್ದನು. ಅವನು ನನ್ನನ್ನು ಎಳೆದುಕೊಂಡು ಹೋದ ದಿಕ್ಕು ನೋಡಲಾಗಿ ನಾನು ಬಿಸಾಟಿದ್ದ ಮಚ್ಚು ಕತ್ತಿಯನ್ನು ತೆಗೆದುಕೊಳ್ಳಲು ಹೋಗುವಹಾಗೆ ಕಂಡಿತು. ನಾನು ಕೂಡಲೇ ಅವನನ್ನು ಬಿಟ್ಟು ಬಿಟ್ಟು ಓಡಿಹೋಗಿ ಆ ಮಚ್ಚು ಕತ್ತಿಯನ್ನು ತಗದು ಕೊಂಡೆನು, ಅವನು ಒಂದು ಮರದ ರೆಂಬೆಯನ್ನು ಮುರಿದುಕೊಂಡು ಅದನ್ನು ತಿರು ಗಿಸಿ ಹಿಡಿದು ನನ್ನ ಕೈಮೇಲೆ ಹೊಡದನು. ನನ್ನ ಕೈಲಿದ್ದ ಮಚ್ಚು ಕಳಚಿ ಕೆಳಗೆ ಬಿತ್ತು. ಅವನದನ್ನು ತೆಗೆದುಕೊಂಡು ನನ್ನ ಮೈಯಲ್ಲಿ ಎರಡು ಮೂರು ಕಡೆ ಘಾಯಮಾಡಿ ಬಿಟ್ಟು ಓಡಿಹೋದನು. ನಾನು ಬಹಳ ನೋವು ತಿಂದು ಅತಿ ಕಷ್ಟದಿಂದ ನಾನು ಉಳಿದಿದ್ದ ನೆಂಟರ ಮನೆಗೆ ಹೋದೆನು, ಅಂಧ ಯುವತಿಯು ನನ್ನ ಪದಶಬ್ದಾನುಸರಣ ಮಾಡಿಕೊಂಡು ಬರುತ್ತಿದ್ದಳು. ಸ್ವಲ್ಪ ದೂರ ಹೋಗಿ ಮುಂದೆ ಹೋಗಲು ಸಾಗದೆ ಹೋಯಿತು ದಾರಿಯಲ್ಲಿ ಹೋಗತಕ್ಕವರು ಕೈ ಹಿಡಿದುಕೊಂಡು ಹೋಗಿ ಮನೆಯಲ್ಲಿ ಬಿಟ್ಟರು.