ಪುಟ:ರಜನೀ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ 49 ಆ ಊರಲ್ಲಿ ನಾನು ಕೆಲಕಾಲ ಶಯ್ಯಾಗತನಾಗಿ ಬಿದ್ದಿದ್ದೆ. ಅನ್ಯ ಆಶ್ರಯವೂ ಇರಲಿಲ್ಲ. ನನ್ನ ದೆಶೆ ಏನಾಗುತ್ತದೋ ಅದನ್ನು ತಿಳಿದುಕೊಳ್ಳದೆ ಎಲ್ಲಿಯೂ ಹೊರದ ಲಾಗದು, ಈ ಎರಡು ಕಾರಣಗಳಿಂದ ಅಲ್ಲಿಯೇ ಇರಬೇಕಾಯಿತು. ಅಂಧ ಯುವತಿಯ ಅಲ್ಲಿಯೇ ಇದ್ದಳು. ಬಹಳ ಕಷ್ಟದಿಂದ ಬಹು ದಿನಗಳಮೇಲೆ ಆರೋಗ್ಯ ಲಾಭವನ್ನು ಹೊಂದಿದೆನು, ಅಂಧ ಯುತಿಯನ್ನು ನೋಡಿದಾರಭ್ಯ ನನಗೆ ಸಂದೇಹವುಂಟಾಗಿತ್ತು. ನನಗೆ ಮಾತನಾಡುವುದಕ್ಕೆ ಶಕ್ತಿ ಬಂದಾಗ ಅವಳು ನನ್ನ ರುಗ್ನ ಶಯ್ಯ ಪಾರ್ಶ್ವ ಬಂದು ಕೂತಳು. ಆ ದಿನವೇ ಅವಳನ್ನು ನಿನ್ನ ಹೆಸರೇನಮ್ಮ ! ಎಂದು ಕೇಳಿದೆನು, ಅವಳು ರಜನಿಯೆಂದು ಹೇಳಿದಳು. ಕೇಳಿ ನಾನು ಚಮಕಿತನಾಗಿ, ನೀನು ರಾಬಚಂದ್ರನ ಮಗಳೆ ? ಎಂದನು. ರಜನಿಯ - ವಿಸ್ಮಿತಳಾಗಿ ನನ್ನ ತಂದೆಯನ್ನು ಕಂಡಿದ್ದೀಯಾ ? ಎಂದು ಕೇಳಿದಳು. ನಾನು ಸ್ಪಷ್ಟವಾಗಿ ಯಾವ ಉತ್ತರವನ್ನೂ ಕೊಡಲಿಲ್ಲ. ನನಗೆ ಸಂಪೂರ್ಣವಾಗಿ ಆರೋಗ್ಯಲಾಭವಾದಮೇಲೆ ರಜನಿಯನ್ನು ಕಲಿಕೆಗೆ ಕರೆದುಕೊಂಡು ಹೋದೆನು. -.. ಡHAS ---- ಏಳನೆಯ ಪರಿಚ್ಛೇದ. ಕಲಿಕತ್ತೆಗೆ ಹೋಗುವಾಗ ರಜನಿಯನ್ನು ನಾನೊಬ್ಬನೇ ಕರೆದುಕೊಂಡು ಹೋಗ ಲಿಲ್ಲ. ಆ ಗ್ರಾಮದಲ್ಲಿ ಮುರಕಿ ಎಂದೊಬ್ಬ ಮುದಕಿಯನ್ನು ಪರಿಚಾರಕಳನ್ನಾಗಿ ಗೊತ್ತು ಮಾಡಿಕೊಂಡು ಸಂಗಡ ಕರೆದುಕೊಂಡು ಹೋದೆನು, ರಜನಿಯ ಮನಸ್ಸಿಗೆ ಸಂತೋಷವುಂಟಾಗಲೆಂದು ಹೀಗೆ ಮಾಡಿದೆನು. ಹೋಗುತ್ತ ದಾರಿಯಲ್ಲಿ ರಜನಿಯನ್ನು ಕುರಿತು, ರಜನಿ ! ನಿನ್ನ ಮನೆಯಿರುವುದು ಕಲಿಕೆಯಲ್ಲಿ, ಇಲ್ಲಿಗೆ ಹೇಗೆ ಬಂದೆ ? ಎಂದು ಕೇಳಿದೆನು, ರಜನಿ :-ನಿನಗೆ ಎಲ್ಲಾ ಸಂಗತಿಗಳನ್ನು ವಿವರವಾಗಿ ಹೇಳಬೇಕೆ ? ನಾನು :-ನಿನಗೆ ಇಷ್ಟವಿಲ್ಲದಿದ್ದರೆ ಹೇಳಬೇಡ,