ಪುಟ:ರಜನೀ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ 53 AhhhY Mለ : ለለለለታላለ ለለለለለኒ ነታ ላላለስ ለ\\ላሌሊላላ ರಾಜಚಂದ್ರನು ಆಶ್ಚಯ್ಯ ಪಟ್ಟು, ಅದೇನು ? ನನ್ನ ಮಗಳಲ್ಲದೆ ಮತ್ಯಾರ ಮಗ ಇಂದು ಕೇಳಿದನು. ನಾನು-ಹರೇಕೃಷ್ಣನ ಮಗಳು. ರಾಜಚಂದ್ರನು ಸ್ವಲ್ಪ ಹೊತ್ತು ಸುಮ್ಮನಿದ್ದು ಅನಂತರ, ನೀನು ಯಾರೋ ನಾನರಿಯೆನು, ಆದರೆ ನೀನು ಈ ಮಾತನ್ನು ರಜನಿಗೆ ಹೇಳಕೂಡದೆಂದು ಬೇಡಿಕೊಳ್ಳು ತೇನೆಂದನು. ನಾನು-ಈಗ ಹೇಳುವುದಿಲ್ಲ. ಆದರೆ ಹೇಳಲೇಬೇಕು, ಹರೇ ಕೃಷ್ಣನು ಸಾಯುವಾಗ ರಜನಿಯ ಕೆಲ ಒಡವೆ ವಸ್ತುಗಳಿದ್ದವಲ್ಲವೆ ? ರಾಜಚಂದ್ರ ಭಯಪಟ್ಟವನಾಗಿ, ನಾನು ಆ ನಗ ನಟ್ಟುಗಳ ಸಮಾಚಾರವನ್ನು ಅರಿಯೆನು, ನಾನು ಅಭರಣಗಳಲ್ಲಿ ಯಾವುದನ್ನೂ ಹೊಂದಲಿಲ್ಲ ವೆಂದನು. ನಾನು-ನೀನು ಹರೇಕೃಷ್ಣನು ಸತ್ತ ಮೇಲೆ ಅವನ ಆಸ್ತಿ ಏನಿದೆಯೆಂದು ಹುಡುಕುವುದಕ್ಕೆ ಆ ದೇಶಕ್ಕೆ ಹೋಗಿರಲಿಲ್ಲವೆ? ರಾಜ-ಹೌದು, ಹೋಗಿದ್ದೆ. ಹೋಗಿ ವಿಚಾರಿಸಲಾಗಿ ಹರೇಕೃಷ್ಣನ ಬಾಬತು ಇದ್ದು ದುನೆಲ್ಲಾ ಪೋಲೀಸಿನವರು ತೆಗೆದುಂಡು ಹೋದರೆಂದು ತಿಳಿಯಬಂತು. ನಾನು-ಅದರಮೇಲೆ ನೀನೇನು ಮಾದೆ ? ರಾಜ-ಇನ್ನು ನಾನೇನು ಮಾಡಲಿ ? ನಾನು ಪೋಲೀಸಿನವರಿಗೆ ಬಹಳ ಭಯಪಡುತ್ತೇನೆ, ರಜನಿಯ ಕಳವಾಗಿ ಹೋಗಿ ಮೊಕದ್ದಮೆಯಲ್ಲಿ ಬಹಳ ಪಾಡು ಪಟ್ಟಿದ್ದೇನೆ. ನಾನು ಪೋಲೀಸಿನವರ ಹೆಸರು ಕೇಳಿ ಮತ್ತೇನೂ ಹೇಳಲಿಲ್ಲ. ನಾನು-ರಜನಿಯು ಆಸಾಮಿ ಚೋರಿಯಾದುದು ಹೇಗೆ ? ರಾಜ -ರಜನಿಗೆ ಅನ್ನಪ್ರಾಶನವಾಗುವ ವಯಸ್ಸಿನಲ್ಲಿ ಅವಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದರು. ವರ್ಧಮಾನದಲ್ಲಿ ಆ ಮೊಕದ್ದಮೆಯು ನಡೆ ಯಿತು. ಈ ಕಲಿಕತ್ತೆಯಿಂದ ವರ್ಧಮಾನಕ್ಕೆ ಸಾಕ್ಷಿ ಕೊಡುವುದಕ್ಕೆ ನಾನು ಹೋಗ ಬೇಕಾಯಿತು. ಆಗ ಪೋಲೀಸಿನವರ ಕೈಯಲ್ಲಿ ಸಂಕಟಪಟ್ಟು ಪಾಡುಪಟ್ಟೆನು. ನನಗೆ ಮಾರ್ಗವು ಸಿಕ್ಕಿದಹಾಗಾಯಿತು. ಡಿಡಿಪಸ್