ಪುಟ:ರಜನೀ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * »8 + tv 11 ಶ್ರೀಮೈನಮಃ || ರಜನೀ, -- - ಮೊದಲನೆಯ ಭಾಗ. ರಜನಿಯ ಹೇಳಿಕೆ. ಪ್ರಥಮ ಪರಿಚ್ಛೇದ. ನಿಮ್ಮಗಳ ಸುಖದುಃಖಗಳಿಗೆ ಸರಿಯಾಗಿ ನನ್ನ ಸುಖದುಃಖಗಳು ಪರಿಮಿತ ವಾಗುವುದಿಲ್ಲ. ನೀವು ಬೇರೆ, ನಾನು ಬೇರೆ, ಪರಸ್ಪರ ಭಿನ್ನ ಪ್ರಕೃತಿಯುಳ್ಳವರು. ನನ್ನ ಸುಖದಲ್ಲಿ ನೀವು ಸುಖಿಗಳಾಗುವ ಸಂಭವವಿಲ್ಲ, ನನ್ನ ದುಃಖಗಳನ್ನು ನೀವು ಅರಿಯಲಾರಿರಿ, ನಾನು ಒಂದು ಅಲ್ಪವಾದ ಯಧಿಕಾ ಪದ ಗಂಧದಿಂದ ಸುಖ ಯಾಗುವನು. ಷೋಡಶಕಳಾಯುಕ್ತನಾದ ಚಂದ್ರನು ಸಹಸ್ರನಕ್ಷತ್ರಮಂಡಲಮಧ್ಯಸ್ಥ ನಾಗಿ ನನ್ನ ಕಣ್ಣುಗಳಿದುರಿಗೆ ಬಂದು ನಿಂತು ಪ್ರಜ್ವಲಿಸುವನಾದರೂ ಕೂಡ ನಾನು ಸುಖಿಯಾಗಲಾರೆನು, ನೀವು ಮನವಿಟ್ಟು ಈ ನನ್ನ ಕಥೆಯನ್ನು ಹೇಗೆತಾನೇ ಕೇಳು ವಿರಿ ? ನನಗೆ ಹುಟ್ಟಿದ ಮೊದಲು ಕಣ್ಣುಗಳು ಕಾಣಿಸದು. ಯಾವಪ್ರಕಾರತಾನೇ ತಿಳಿಯುವಿರಿ ? ಅಮ್ಮ ಜೀವನವಾದರೋ ದೃಷ್ಟಿ ಮಯ ವಾದುದು. ನನ್ನ ಜೀವನವು ಅಂಧಕಾರಮಯ. ಆದರೆ ದುಃಖವಿಷಯವೇನೆಂದರೆನಾನು ಇದನ್ನು ಅಂಧಕಾರವೆಂದು ತಿಳಿದಿಲ್ಲ. ನನ್ನ ಈ ಅಂಧನಯನಗಳಿಗೆ ಅದೇ ಬೆಳಕಾಗಿದೆ ! ನಿಮ್ಮಗಳ ಬೆಳಕು ಎಂಬುದು ಎಂತಹುದೋ ಅದನ್ನು ನಾನರಿಯೆ !