ಪುಟ:ರಜನೀ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮ ಏರಿಚ್ಛೇದ \r M/+/\/\/v btv\r \/\/vA ಆದುದರಿಂದ ನನಗೆ ಸುಖವೇ ಇಲ್ಲವೆಂದು ಕೇಳುವಿರೋ ? ಹಾಗಲ್ಲ. ಸುಖ ದುಃಖಗಳೆರಡೂ ನಿಮಗೂ ನನಗೂ ಸಹ ಪ್ರಾಯಃ ಸಮಾನವಾಗಿರುವುವು, ನೀವು ರಸವನ್ನು ನೋಡಿ ಸುಖಿಳಾಗುತ್ತೀರಿ. ನಾನು ಶಬ್ದವನ್ನು ಕೇಳಿ ಸುಖಿಯಾಗುತ್ತೇನೆ. ಈಗ ನೋಡಿ, ಈ ಚಿಕ್ಕದಾದ ಯೋಗಿಕಾಪುಷ್ಪಗಳ ತೊಟ್ಟು ಎಷ್ಟು ಸೂಕ್ಷ್ಮ ವಾಗಿದೆ ; ಮತ್ತು ನಾನು ಕೈಯಲ್ಲಿ ಹಿಡಿದಿರುವ ಸಚಿ.ಆಿಭಾಗವು ಮತ್ತಷ್ಟು ಸೂಕ್ಷ್ಮವಾಗಿದೆ ! ನಾನು ಈ ಸೂಜಿಯ ಕೊನೆಯಿಂದ ಸಣ್ಣಗಾದ ಆ ಹೂಗಳ ತೊಟ್ಟುಗಳಲ್ಲಿ ರಂಧ್ರವನ್ನು ಮಾಡಿ ಪುಷ್ಪಮಾಲೆಯನ್ನು ಮಾಡುತ್ತೇನೆ, ನಾನು ಚಿಕ್ಕವಯಸ್ಸಿನಿಂದ ಪ್ರಷ್ಟ ಮಾಲೆಯನ್ನೇ ಮಾಡುತ್ತಲಿದ್ದೇನೆ. ನಾನು ಮಾಡಿದ ಹೂಮಾಲೆಗಳನ್ನು ಧರಿಸಿಕೊಂಡವರು ಯಾರೂ ಯಾವಾಗಲೂ ಕಣ್ಣಿಲ್ಲದ ವ್ಯಕ್ತಿಯು ಪೋಣಿಸಿದಮಾಲೆಯೆಂದು ಹೇಳಿಲ್ಲ. ನಾನು ಯಾವಾಗಲೂ ಹೂಮಾಲೆಗಳನ್ನೇ ಪೋಣಿಸುತಲಿದ್ದೆನು. ಬಲೀ ಗಂಜಿನ ಊರು ಮುಂದುಗಡೆ ನಮ್ಮ ತಂದೆಗೆ ಒಂದು ಪುಷೋದ್ಯಾನವಿರುವುದು, ಅದರಿಂದಲೇ ಅವನಿಗೆ ಜೀವನವು ನಡೆಯುತಲಿತ್ತು, ಫಾಲ್ಗುಣಮಾಸದಲ್ಲಿ ಹೂ ಬಿಡು ವುದಕ್ಕೆ ಪ್ರಾರಂಭವಾದ ಮೊದಲ್ಗೊಂಡು ತೋಟದಿಂದ ನಿಶ್ಯವೂ ಹೂ ತಂದುಕೊಡು ವನು. ನಾನದನ್ನು ಮಾಲೆಯಾಗಿ ಪೋಣಿಸಿ ಸಿದ್ಧಪಡಿಸುವೆನು, ತಂದೆಯು ಅದನ್ನು ತೆಗೆದುಕೊಂಡು ಹೋಗಿ ಕಲಕತ್ತಾ ನಗರದ ಬೀದಿಗಳಲ್ಲಿ ಅಲ್ಲಲ್ಲಿ ಮಾರುವನು. ನಮ್ಮ ಶಾಯಿಯು ಮನೆಯ ಕೆಲಸವನ್ನು ಮಾಡುವಳು. ಅವಕಾಶವಿದ್ದರೆ ತಂದೆತಾಯಿಗಳಿ ಬ್ಬರೂ ಮಾಲೆಗಳನ್ನು ಕಟ್ಟುವುದಕ್ಕೆ ನನಗೆ ಸಹಾಯಮಾಡುವರು. ಪುಷ್ಪಗಳ ಸ್ಪರ್ಶವು ಬಹಳ ಸುಂದರವಾದುದು. ಧರಿಸುವುದಕ್ಕೂ ಬಹಳ ಸುಂದರವೆಂತಲೇ ತಿಳಿಯುತ್ತೇನೆ. ಘಣಕ್ಕೆ ಸುಂದರವಾದದೇ ಹೌದು. ಆದರೆ ಹೂ ಕಟ್ಟಿ ಮಾರುವುದರಿಂದಲೇ ಸಂಸಾರವು ನಡೆಯುವುದಿಲ್ಲ. ಅನ್ನದ ವೃಕ್ಷಕ್ಕೆ ಹೂ ಇಲ್ಲ. ಆದುದರಿಂದ ತಂದೆಯು ದರಿದ್ರನಾಗಿಯೇ ಇದ್ದನು. ಮಿರಜಾಪುರದಲ್ಲಿ ಒಂದು ಸಾಮಾನ್ಯವಾದ ಹೆಂಚಿನ ಮನೆಯಲ್ಲಿ ನಾವು ವಾಸಮಾಡುತಲಿದ್ದೆವು. ಆ ಮನೆಯಲ್ಲೊಂದುಕಡೆ ಹೂ ಹರಡಿ ಆರಿಸಿ ರಾಶಿಮಾಡಿಕೊಂಡು ಮಾಲೆ ಮಾಲೆಯಾಗಿ ಪೋಣಿಸಿ ಕಟ್ಟುತ್ತಲಿದ್ದೆನು, ತಂದೆಯು ಹೊರಗೆ ಹೊರಟುಹೋಗುತ್ತಲೇ ನನ್ನ ಆಶೆಯ ಪ್ರಭಾತಕ್ಕೆ ಸರಿಯಾಗಿ ಮೊಗ್ಗುಗಳು ಅರಳಿದವೆಂದು ಭಾವಿಸಿಕೊಂಡು ಹಾಡುತ ಬಿರುವೆನು,