ಪುಟ:ರಜನೀ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಚಿಸಿ y r + MP + *

\ \ vvvvvvvM ನಾನು-ಅನಿಶ್ಚಿತವಾದುದೆಂದು ತಿಳಿದೂ ತಿಳಿದು ಜನಗಳನ್ನು ಅದರಿಂದ ವಂಚಿಸಲೇತಕ್ಕೆ ? ಸನ್ಯಾಸಿ-ನೀವು ಸತ್ತು ಹೋದ ಮನುಷ್ಯ ದೇಹವನ್ನು ಕುಯ್ಯುವುದೇತಕ್ಕೆ ? ನಾನು-ಶಿಕ್ಷಾರ್ಥವಾಗಿ, ತಿಳಿದುಕೊಳ್ಳುವುದಕ್ಕೆ, ಸನ್ಯಾಸಿ-ತಿಳಿದಿದ್ದವರೂ ಕೂಡ ಕುಯ್ಯುವುದೇತಕ್ಕೆ ? ನಾನು-ತತ್ವವನ್ನು ಕಂಡುಹಿಡಿಯುವುದಕ್ಕೆ, ಸನ್ಯಾಸಿ-ನಾವೂ ತತ್ವವನ್ನು ಕಂಡುಹಿಡಿಯುವುದಕ್ಕೋಸ್ಕರ ಇದನ್ನೆಲ್ಲಾ ಮಾಡುತ್ತೇವೆ, ಎಲಾಯಿತಿಯಲ್ಲಿರುವ ಪಂಡಿತರೂ ಕೂಡ ಮನುಷ್ಯನ ತಲೆಯ ಘಟನಾ ಕಾರಾದಿಗಳನ್ನು ನೋಡಿ ಅವನ ಚರಿತ್ರೆಯನ್ನು ಹೇಳುತ್ತಾರೆಂದು ಕೇಳಿದ್ದೇನೆ. ತಲೆಯು ಘಟನೆಯನ್ನು ನೋಡಿ ಒಬ್ಬನ ಚುತ್ರಿಯನ್ನು ಹೇಳಬಹುದಾದರೆ ಕೈಯಲ್ಲಿರುವ ರೇಖೆ ಗಳನ್ನು ನೋಡಕೂಡದೇತಕ್ಕೆ ? ಕೈರೇಖೆಗಳನ್ನು ನೋಡಿ ಎಲ್ಲಾ ಸಂಗತಿಗಳನ್ನು ಸರಿ ಯಾಗಿ ಹೇಳುವಷ್ಟು ಇನ್ನೂ ಚೆನ್ನಾಗಿ ಗೊತ್ತಾಗಿಲ್ಲವೆಂದು ಒಪ್ಪಿಕೊಳ್ಳೋಣ. ಇದಕ್ಕೆ ಕಾರಣವೇನೆಂದರೆ --ಇದರ ನಿಜವಾದ ಸಂಕೇತಗಳು ಇನ್ನೂ ಚೆನ್ನಾಗಿ ನಿರ್ಧಾರ" ವಾಗಿ ಗೊತ್ತಾಗಿಲ್ಲ. ಆದರೆ ನೋಡನೋಡುತ್ತಾ ಇದ್ದರೆ ಇದರ ನಿಜ ವಾದ ಸಂಕೇತಗಳೆಲ್ಲ ಚೆನ್ನಾಗಿ ಗೊತ್ತಾಗಬಹುದು. ಆದಕಾರಣ ಯಾರಾದರು ಕೈನೋಡಬೇಕೆಂದರೆ ನೋಡು ನೆ, ನಾನು...ಆ೦ಜನವನ್ನು ಮುಕುವರೋ ? ಮ೦ತ್ರಿಸಿ ಕಟ್ಟಿ ಕೊಡುವುದೊ ? - ಸನ್ಯಾಸಿ-ನೀವು ಕಬ್ಬಿಣದ ತಂತಿಯಿಂದ ಕೃಷಿಯಲ್ಲೆಲ್ಲ ಲಿಪಿಯ ಮೂಲಕ ಸಮಾಚಾರಗಳು ಕಳುಹಿಸುತ್ತೀರಿ. ನಾನು ಅಂಜನದಿಂದ ನಡೆಸಲಾರನೆ ? ನಿಮಗೆ ಇರುವ ಭ್ರಮೆಯೆನದರೆ, 'acಷರು ಯಾವದನ್ನು ಬಲ್ಲ ಅದೇ ನಿಜವಾದು ದೆಂತ, ಇಂಗ್ಲೀಷರಿಗೆ ತಿಳಿಯಚ್ಚು ನಿಜದಲ್ಲ ಎಂತ, ಅದು ಮನುಷ್ಯನ ಜ್ಞಾನಕ್ಕೆ ಅತೀತವಾದುದೆಂತಲೂ, ಅದು ಅಸಾಧ್ಯವಾದುದೆಂತಲೂ, ತಿಳಿದುಕೊಂಡಿರು ವಹಾಗೆ ಕಾಣುತ್ತದೆ. ವಸ್ತುತಃ ಹಾಗಲ್ಲ. ಜ್ಞಾನವೆಂಬುದು ಅನಂಶವಾದುದು ಕೆಲವು ನಿಮಗೆ ಗೊತ್ತು ; ಕೆಲವು ನಮಗೆ ಗೊತ್ತು, ಮತ್ತೆ ಕೆಲವರಿಗೆ ಇನ್ನೂ ಹೆಚ್ಚು ಗೊತ್ತು. ಆದರೆ ಯಾರೇ ಆಗಲಿ, ನಾನೂ ನೀನೂ ತಿಳಿಯದೆ ಇರುವುದು ಮತ್ಯಾರಿಗೂ ಗೊತ್ತಿಲ್ಲವೆಂದು ಹೇಳಲಾಗದು. ಯಾರಿಗೂ ಎಲ್ಲಾ ಗೊತ್ತು ಉಂಟೆಂದು ಹೇಳಲಾರರು, ಇಂಗ್ಲೀಷರು ಕೆಲಸಂಗತಿಗಳನ್ನು ಬಲ್ಲರು. ನಮ್ಮ ಪೂರ್ವಪುರುಷರು ಕೆಲಸಂಗತಿಗಳನ್ನು ಬಲ್ಲವರಾಗಿದ್ದರು. ಇಂಗ್ಲೀಷರಿಗೆ ಈಗ ತಿಳಿಯುತ್ತದೆಂಬುದು ಋಷಿಗಳಿಗೆ ಗೊತ್ತಿಲ್ಲದೆ