ಪುಟ:ರಜನೀ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ನೆಯ ಪರಿಚ್ಛೇದ 79 Ah+\AH+\h 1 h c \ A \ +1 *

  • *

\n \ \ # # #

  1. 1 1

1 1 1 1 1 1 1 2 hp4 ## \ \/\ \ / \ Art Ar nr P /*/• • • • • • ಹೆಂಗಸಿನ ಒನಕೆ ಬುದ್ದಿಯನ್ನು ನೋಡಿ ನನಗೆ ಬಹಳ ಕೋಪಬಂದು ಅದೇನೆ ! ಹೆಣ್ಣು ಹೆಂಗಸಿಗೆ ತಿಳಿಯದ್ದು ಪುರುಷನು ಬಲ್ಲನೆ ? ಪುರುಷನಿಗೆ ಸಂಸಾರ, ಮನೇ ಗೃಹಕೃತ್ಯ, ಇದೆಲ್ಲಾ ಹೇಗೆ ಗೊತ್ತು ? ಗಂಡಸಾದವನು ! ಹೊರೆ ಹೊತ್ತು ಕಷ್ಟ ಪಟ್ಟು ಮನೆಗೆ ತಂದುಹಾಕುವ ಮಟ್ಟಿಗೆ ಸರಿ, ಮಿಕ್ಕದ್ದಕ್ಕೆಲ್ಲ ಪುರುಷನೇ ಯಜಮಾನ ? ಎಂದು ಹೇಳಿದೆ. ಆ ಹೆಂಗಸಿನ ಒನಕೆಬುದ್ದಿಗೆ ನಾನು ಹೇಳಿದುದೆಲ್ಲ ಅಸಂಗತವಾದುದೆಂದು ಕಂಡ ಹಾಗೆ ತೋರುತ್ತದೆ. ಅವಳು ಸ್ವಲ್ಪ ನಕ್ಕಳು, ನಾನು ನಿನ್ನ ಗಂಡನು ಹೆಣ್ಣನ್ನು ಅಮರ ನಾಧನಿಗೆ ಕೊಡಬೇಕೆಂದು ಇದನೇನೆಂದು ಕೇಳಿದೆನು, ಹೂವಾಡಗಿತ್ತಿ-ಅವನ ಅಭಿಪ್ರಾಯವೇನೂ ಅಲ್ಲ, ಅಮರನಾಧನು ರಜನಿಗೆ ಆಸ್ತಿಯನ್ನು ಸಂಪ• ದಿಸಿಕೊಟ್ಟನು. ಅವನಿಗೆ ಬಾಧ್ಯರಾಗಲೇ ಬೇಕಾಗಿದೆ. ನಾನು-ಹಾಗಾದರೆ ಹೋಗಿ, ಅಮರನಾಧನಿಗೆ, ರಜನಿಗೆ ಇನ್ನೂ ಆಸ್ತಿಯು ಬಂದಿಲ್ಲ, ಆಸ್ತಿಯೆಲ್ಲ ನಮ್ಮದು, ನಾವು ಆಸ್ತಿಯನ್ನು ಬಿಟ್ಟು ಕೊಡುವದಿಲ್ಲವೆಂದು ಹೇಳು, ಬೇಕಾದರೆ ನಿಮ್ಮ ಆಸ್ತಿಯನ್ನು ಮೊಕದ್ದಮೆಮಾಡಿ ತೆಗೆದುಕೊಳ್ಳಲಿ; ಸಾಧ್ಯವೆ, ನೋಡೋಣ. ಹೂವಾಡಗಿತ್ತಿ- ಆ ಮಾತು ಮೊದಲೇ ನಡೆದಿದೆ. ಇಷ್ಟು ದಿನಕ್ಕೆ ಮೊಕದ್ದ ಮೆಯು ದಾಖಲಾಗಿರಬಹುದು, ನಾನು-ಮೊಕದ್ದಮೆ ಮಾಡುವುದು ಬಾಯಿಮಾತಲ್ಲ. ರೂಪಾಯಿ ದಂಡ ಶಿರಬೇಕು. ರಾಜಚಂದ್ರನು ಹೂವು ಮಾರಿ ಎಷ್ಟು ದುಡ್ಡು ಸಂಪಾದಿಸಿ ಗಂಟು ಇಟ್ಟಿದ್ದಾನೆ ? ಹೂವಾಡಗಿತ್ತಿ ಕೋಪದಿಂದ ಉರಿದುರಿದು ಬಿದ್ದಳು. ನಿಜವಾಗಿಯೂ ನನ ಗೇನೂ ಕೋಪಬರಲಿಲ್ಲ. ಹೂವಾಡಗಿತ್ತಿಯು ಕೋಪವನ್ನು ಸ್ವಲ್ಪ ಶಮನ ಮಾಡಿ ಕೊಂಡು, ಅಮರಬಾಬು ನಮ್ಮ ಅಳಿಯನಾದರೆ ಆಸ್ತಿಯ ಅವನದಾಗುತ್ತದೆ. ಅವನಿಗೆ ದುಡ್ಡು ಖರ್ಚು ಮಾಡಿ ಮೊಕದ್ದಮೆ ಮಾಡುವುದಕ್ಕೆ ಶಕ್ತಿಯಿದೆ, ಎಂದಳು. ಇಷ್ಟು ಹೇಳಿ ಅವಳು ಎದ್ದು ಹೊರಟುಹೋಗುತ್ತಿದ್ದಳು. ನಾನು ಅವಳ ಶರಗನ್ನು ಹಿಡಿದು ಕೂಡಿಸಿಕೊಂಡೆ. ಅವಳು ನಕ್ಕು ಕುಳಿತುಕೊಂಡಳು. ನಾನು, ಅಮರನಾಥನು ಮೊಕದ್ದಮೆಯನ್ನು ಮಾಡಿ ಆಸ್ತಿಯನ್ನು ತೆಗೆದುಕೊಂಡರೆ ನಿಮಗೇ ನಂದಹಾಗಯಿತೆಂದು ಕೇಳಿದೆನು. ಹೂವಾಡಗಿತ್ತಿ-ನಮ್ಮ ಹುಡುಗಿಗೆ ಸುಖವುಂಟಾಗುತ್ತದೆ.