ಪುಟ:ರಜನೀ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ರಜನಿ •h AAN ನಾನು-ನಮ್ಮ ಹುಡುಗನಿಗೆ ಕೊಟ್ಟು ಮದುವೆಯಾದರೆ ದುಃಖವುಂಟಾಗು ಇದೇನೋ ? ಹೂವಾಡಗಿತ್ತಿ-ಅದೇತಕ್ಕೆ ? ಎಲ್ಲಿದ್ದರೂ ನಮ್ಮ ಹುಡುಗಿಗೆ ಸುಖವೇ ಆಗುತ್ತದೆ. ನಾನು-ನಿಮಗೆ ಸ್ವಂತ ಸುಖವನ್ನೇನೂ ಅಪೇಕ್ಷಿಸುವುದಿಲ್ಲವೋ ಏನು ? ಹೂವಾಡಗಿತ್ತಿ-ನಮಗೆ ಇನ್ನೇನು ಸುಖ? ಹುಡುಗಿಯ ಸುಖವೇ ನಮ್ಮ ಸುಖ, ನಾನು-ಹೆಣ್ಣಿನ ತುದೆತಾಯಿಗೆ ಬರಬೇಕಾದುದೊ ? | ಹೂವಾಡಗಿತ್ತಿಯು, ಹುಸಿನಗು ನಕ್ಕು-ಮುಖ್ಯವಾದ ಮಾತು ಏನು ? ಹೇಳ ಕೂಡದೇನಮ್ಮ! ಈಗ ಮದುವೆಯಾಗಲು ಹುಡುಗಿಗೆ ಮದುವೆಯಲ್ಲಿ ಇಷ್ಟವೆ ಇಲ್ಲ ವೆಂದಳು. ನಾನು-ಅದು ಹೇಗೆ ? ಹಾಗೇತಕ್ಕೆ ಹೇಳು ? ಹೂವಾಡಗಿತ್ತಿ--ರಜನಿಯು ಇಲ್ಲಿನ ಮಾತಿನಮೇಲೆ ಕುರುಡಿಗೆ ಏತಕ್ಕೆ ಮದುವೆ ? ಎಂದು ಹೇಳಿದಳು. ನಾನು-ಅಮರನಾಥನಿಗೆ ಕೊಟ್ಟು ಮದುವೆಯಾಗುವ ಮಾತು ನಡೆದುದು ಹೇಗೆ ? ಹೂವಾಡಗಿತ್ತಿ...ಅವನು ಹೇಳಿದ್ದು-ಅವನು ಹೇಳಿದ ಹಾಗೆಲ್ಲ ಮಾಡೇ ತೀರಬೇಕಾಗಿದೆ, ನಾನು- ಹಾಗಾದರೆ ಮದುವೆ ವಿಚಾರದಲ್ಲಿ ಹೆಣ್ಣಿನ ಅಭಿಪ್ರಾಯವನ್ನು ಕಟ್ಟಿ ಕೊಂಡು ಪ್ರಯೋಜನವೇನು ? ತಾಯಿತ ದೆಗಳ ಇಷ್ಟದಂತೆ ಆಗಬೇಕು, - ಹೂವಾಡಗಿತ್ತಿ--ರಜನಿಯು ಚಿಕ್ಕ ಹುಡುಗಿಯಲ್ಲ. ನನ್ನ ಹೊಟ್ಟೆಯಲ್ಲಿ ಹುಟ್ಟಿದವಳೂ ಅಲ್ಲ. ಅದಲ್ಲದೆ ಆಸ್ತಿಯೆಲ್ಲಾ ಅವಳದು. ನಮ್ಮದಲ್ಲ. ಅವಳು ನಮ್ಮನ್ನು ಹೊರಡಿಸಿಬಿಟ್ಟರೆ ನಾವು ಮಾಡತಕ್ಕದ್ದೇನು ? ಅವಳ ಮನಸ್ಸಿಗೆ ಸರಿಯಾ ಗಿದ್ದರೆ ನಾವೂ ಕಾಲ ಕಳೆಯಬಹುದು. ನಾನು ಹಾಗೆಯೇ ಸ್ವಲ್ಪ ಯೋಚಿಸಿ ರಜನಿಯನ್ನು ಅಮರನಾಥನು ನೋಡಿ ಅವಳ ಸಂಗಡ ಮಾತನಾಡಿದ್ದಾನೇನೆಂದು ಕೇಳಿದೆನು, ಹೂವಾಡಗಿತ್ತಿ ಇಲ್ಲ. ಅಮರನಾಥನು ಅವಳನ್ನು ನೋಡಿಲ್ಲ. ನಾನು-ರಜನಿಯನ್ನು ನಾನೊಂದುಸಲ ನೋಡಕೂಡದೆ ?