ಪುಟ:ರಜನೀ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ 81 \//\/\/\ + > / n \ /\n \r\n \r

  • *
  • *
  • * * * *

/ht \ •h ಹೂವಾಡಗಿತ್ತಿ ನನಗೂ ಅದೇ ಇಷ್ಟ, ನೀನು ಅವಳನ್ನು ನೋಡಿ ತಿಳಿಯ ಹೇಳಿದರೆ ಅವಳು ಒಪ್ಪಿದರೂ ಒಪ್ಪಿಕೊಂಡಳು. ನಿಮ್ಮಲ್ಲಿ ಅವಳಿಗೆ ಭಕ್ತಿಯ ಇದೆ. ನಾನು ಹಾಗೆ ಮಾಡಿ ನೋಡುತ್ತೇನೆ. ಆದರೆ ಅವಳನ್ನು ನೋಡುವುದು ಹೇಗೆ ? ನಾಳೆ ಸ್ವಲ್ಪ ಹೊತ್ತಿನಮಟ್ಟಿಗೆ ಅವಳನ್ನು ಇಲ್ಲಿಗೆ ಕಳುಹಿಸುವಿಯಾ ? ಹೂವಾಡಗಿತ್ತಿ-ಅದಕ್ಕೇನೂ ಅಡ್ಡಿಯಿಲ್ಲ. ಅವಳು ಇಲ್ಲಿನ ಅನ್ನ ಬಟ್ಟೆಯಿಂ ದಲೇ ದೊಡ್ಡವಳಾದವಳು. ಆದರೆ ಮನೆಗೆ ಸೊಸೆಯಾಗುವಳು, ಹೊತ್ತೂ, ವೇಳೆ ಇಲ್ಲದೆ ಆವನೆಗೆ ಬರುತ್ತದೆ ? ಹಾಳಾಯಿತು! ಇದೊಂದು ಅಡ್ಡಿ ! ಮಾಡುವುದೇನು? ನಾನು ಬೇರೆ ಉಪಾಯ ತೋರದೆ, ಒಳ್ಳೇದು, ರಜನಿಯು ಬರಕೂಡದು, ನಾನೇ ಒಂದುಸಲ ನಿಮ್ಮ ಮನೆಗೆ ಬರಲೆ ? ಎಂದೆನು. ಹೂವಾಡಗಿತ್ತಿ-ಅದೇನಮ್ಮ ! ಹಾಗೆ ಕೇಳುತ್ತಿ? ನಿಮ್ಮ ಪಾದಧೂಳಿ ನಮ್ಮ ಮನೆಯಲ್ಲಿ ಬೀಳುವಷ್ಟು ನಾವು ಪುಣ್ಯ ಮಾಡಿದ್ದೇವೆ ? - ನಾನು-ಸಂಬಂಧಬೆಳದರೆ, ನಾನೇನು ? ಎಲ್ಲರೂ ಬಂದು ಹೋಗಬೇಕಾಗು ಇದೆ. ನೀನು ನನಗೆ ಔತನ ಹೇಳಿ ಹೋದರೆ ಬರುತ್ತೇನೆ. ಹೂವಾಡಗಿತ್ತಿ-ನಮ್ಮ ಮನೆಗೆ ಬರಬೇಕಾದರೆ ತಮ್ಮ ಯಜಮಾನರ ಅಪ್ಪಣೆ ಬೇಡವೆ ? ಅವರು ಒಪ್ಪುವರೆ ? ನಾನು-ಗಂಡಸರ ಮಾತು ಇದಕ್ಕೆಲ್ಲ ಏತಕ್ಕೆ ? ಇಂತಹ ಸಂಗತಿಯಲ್ಲಿ ಹೆಂಗ ಸರ ಅಭಿಪ್ರಾಯವೇ ಗಂಡಸರ ಅಭಿಪ್ರಾಯ. ಹೂವಾಡಗಿತ್ತಿಯು ಕೈಮುಗಿದುಕೊಂಡು ನಗುನಗುತ್ತ ನಾಳೆ ನಮ್ಮ ಮನೆಗೆ ಊಟಕ್ಕೆ ದಯಮಾಡಿಸಬೇಕೆಂದು ಹೇಳಿ ಹೊರಟು ಹೋದಳು. --ಇ --- ಎರಡನೆಯ ಪರಿಚ್ಛೇದ. ಅಮರನಾಥನ ಹೇಳಿಕೆ - ರಜನಿಯ ಆಸ್ತಿಯನ್ನು ದೂರಮಾಡುವುದಕ್ಕೋಸ್ಕರ ನಾನು ಪಟ್ಟ ಶ್ರಮವು ಸಾರ್ಥಕವಾಯಿತು. ಮಿತ್ರನ ಮನೆಯವರೂ ಸಹ ನಿರ್ವಿವಾದವಾಗಿ ಆಸ್ತಿಯನ್ನು ಬಿಟ್ಟು ಬಿಟ್ಟರು. ಆದರೂ ಆಸ್ತಿಯು ಸ್ವಾಧೀನಕ್ಕೆ ಬಾರದಿರುವುದು ನೋಡಿ ಎಲ್ಲರೂ 11 |