ಪುಟ:ರಜನೀ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VVVVVV9 k L & 1/4 +1 1 s, , 1 > 1 1 1 1 } • • • • • Ily du MVJV ಈಗ ಸ್ವಂತವಾಗಿ ಅಡಿಗೆಯನ್ನು ಮಾಡಿ ಸವತಿಗೆ ಅನ್ನವನ್ನು ಬಡಿಸಿಕೊಂಡು ಕೂತಿ ರುವ ಏರ್ಪಾಡನ್ನು ಮಾಡಿಕೊಳ್ಳುತ್ತಿರಲಿಲ್ಲವೆಂದು ಹೇಳಿದೆನು. ಲವಂಗಳು ಘಟ್ಟಿಯಾಗಿ ನಕ್ಕು, ಅದನ್ನು ಮನಸ್ಸಿಗೆ ಬಹಳ ಹಚ್ಚಿಸಿಕೊಂಡಿ ನೆಂದು ತಿಳಿದಿಯೊ ? ಸವತಿಗೆ ಅಡಿಗೆಮಾಡಿ ಹಾಕಬೇಕು. ಅದು ಕಷ್ಟವಾದ ಕೆಲಸವಾಗಿದ್ದರೂ ಇರಬಹುದು. ಆದರೆ ಒಬ್ಬ ಪೋಲೀಸಿನವನನ್ನು ಕರೆದು ನಿನ್ನನ್ನು ದಸ್ತಗಿರಿಮಾಡಿಸಿಬಿಟ್ಟರೆ, ಈಗಲೇ ಹತ್ತು ಸಲ ಅಡಿಗೆ ಮಾಡಿದ ಹಾಗಾಗುತ್ತದೆಯಲ್ಲವೆ? ಎಂದಳು. ನಾನು-ಆಸ್ತಿಯು ರಜನಿಗೆ ಸೇರಿದ್ದು ; ನನ್ನನ್ನು ದುಗಿರಿ ಮಾಡಿಸುವುದ ರಿಂದ ಆಗುವದೇನು ? ಆಸ್ತಿಯು ಯಾರದೋ ಅವರು ಅನುಭವಿಸಬೇಕು. ಲವಂಗ-ನೀನು ಹೆಂಗಸರ ಸ್ವಭಾವವನ್ನು ಯಾವಾಗಲೂ ಅರಿತವನಾಗಿಲ್ಲ. ರಜನಿಯು ಯಾರನ್ನು ಪ್ರೀತಿಸುವ ಅವರ ಸಂರಕ್ಷಣೆಗೋಸ್ಕರ ಆಸ್ತಿಯನ್ನೆಲ್ಲ ಬಿಟ್ಟು ಕೊಡುವಳು. ನಾನು-ಹಾಗೆಂದರೆ, ರಜನಿಯು ನನ್ನ ರಕ್ಷಣೆಗೋಸ್ಕರ ಆಸ್ತಿಯನ್ನೆಲ್ಲ ನಿನಗೆ ಲಂಚವಾಗಿ ಕೊಟ್ಟು ಬಿಡುವಳು. ಲವಂಗ-ಹಾಗೆಯೇ ಇರಬಹುದು, ನಾನು-ಇದುವರೆಗೆ ನನಗೆ ಮದುವೆಯಾಗಲಿಲ್ಲವೆಂದು ನೀನು ಆ ಲಂಚ ವನ್ನು ಕೇಳಲಿಲ್ಲ ; ಮದುವೆಯಾದ ಕೂಡಲೆ ಲಂಚವನ್ನು ಕೇಳುವೆ ಎಂದು ಕಾಣುತ್ತದೆ. ಲವಂಗ-ನಿನ್ನಂತಹ ಅಲ್ಪ ಮನುಷ್ಯನು ಮತ್ತೆ ಹೇಗೆ ತಿಳಿಯಬಲ್ಲಿ ? ಕಳ್ಳರು ಪರರ ಸ್ವತ್ತನ್ನು ಮುಟ್ಟು ಕೂಡದೆಂದು ತಿಳಿಯಲಾರರು. ರಜನಿಯು ಒಂದು ವೇಳೆ ಆಸ್ತಿಯನ್ನು ಕೊಟ್ಟರೂ ನಾನೇಶಕ್ಕೆ ತೆಗೆದುಕೊಳ್ಳಲಿ ? ನಾನು-ನೀನು ಇಂತಹವಳಾಗದೆ ಇದ್ದಿದ್ದರೆ ನನಗೆ ಆ ಸಾಯುವಕಾಲದ ದುರ್ಬುದ್ದಿಯು ಹೇಗೆ ಬರುತಲಿತ್ತು ? ನೀನು ನನ್ನ ಅಪರಾಧವನ್ನು ಮನ್ನಿಸುವಳಾಗಿ ನನ್ನಲ್ಲಿ ಅನುಗ್ರಹ ಮಾಡುವವಳಾಗಿದ್ದರೆ, ನಾನು ಬೇಡಿಕೊಳ್ಳುವದೊಂದು ಭಿಕ್ಷೆ ಯುಂಟು ; ಅದೇನೆಂದರೆ-ನಿನಗೆ ತಿಳಿದಿರುವುದನ್ನು ಇತರರಿಗೆ ಹೇಳಕೂಡದು, ರಜನಿಗೂ ಹೇಳಕೂಡದೆಂದು ಪ್ರಾರ್ಥಿಸುತ್ತೇನೆ