ಪುಟ:ರಜನೀ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ 86 vÀAvÁ/\frifyA WAvth “Y A fy +* * *Ar" AA Ph• • *A AP \\\\/ ನಿ ದರ್ಪಿತಳಾದ ಲವಂಗತೆಯು ಭೂಭಂಗಿ ಮಾಡಿದಳು- ಎಂತಹ ಭೂಭಂಗಿ ! ಭೂಭಂಗಿ ಮಾಡಿ, ನಾನು ರಕ್ಕು ಮಾಡುವವಳೆ ! ನಿನ್ನ ಹೆಂಡತಿಯಾಗುವವಳಲ್ಲಿ ನಿನ್ನ ಹೆಸರಿನಲ್ಲಿ ಠಕ್ಕು ನಿಕ್ಕುವುದಕ್ಕೋಸ್ಕರವೇ ನಾನವಳ ಮನೆಗೆ ಬಂದುದು ? ಎಂದು ಹೇಳಿದಳು. ಹೀಗೆಂದು ಹೇಳಿ ಲವಂಗತೆಯು ನಕ್ಕಳು. ಅವಳ ನಗುವಿನ ಮರ್ಮವನ್ನು ನಾನು ಯಾವಾಗಲೂ ಕಂಡುಹಿಡಿಯಲಾರದೆ ಹೋದೆನು, ಲವಂಗಳು ಬಹಳ ಕೋಪಗೊಂಡಿದ್ದಳು. ಆದರೆ ಕೋಪವು ಆ ನಗುವಿನಲ್ಲಿ ತೇಲಿಹೋಯಿತು. ನೀರಿನ ಮೇಲೆ ಇದ್ದ ಮೇಘದ ಛಾಯೆಯು ಸರಿದುಹೋಗಿ, ಅದರಮೇಲೆ ಮೇಘದಿಂದ ಮುಕ್ತನಾದ ಚಂದ್ರನು ಪ್ರಜ್ವಲಿಸಲಾರಂಭಿಸುವಹಾಗೆ ಅವಳ ಮುಖವು ಪ್ರಕಾಶ ವಾಯಿತು. ಅವಳ ಮರವನ್ನು ನಾನು ಯಾವಾಗಲೂ ಅರಿಯಲಾರದೆ ಹೋದೆನು. ನಕ್ಕು, ಲವಂಗಲತೆಯು ಹಾಗಾದರೆ, ನಾನು ರಜನಿಯ ಹತ್ತಿರ ಹೋಗು ನಂದಳು. ನಾನು-ಹೋಗು. ಒಲಿತಲವಂಗಲತೆಯು ಲಲಿತವಾದ ಲವಂಗದ ತಯಹಾಗೆ ಒಳುಕು ಬಳುಕುತ್ತ ನಡೆದುಹೋದಳು. ಒಂದು ಕ್ಷಣದಮೇಲೆ ನನ್ನನ್ನು ಕರೆಸಿದಳು. ಹೋಗಿ ನೋಡಲಾಗಿ, ಅವಂಗಲತೆಯು ನಿಂತಿದ್ದಳು, ರಜನಿಯು ಅವಳ ಕಾಲುಗಳನ್ನು ಹಿಡಿದು ಕಂಡು ಆಳುತ್ತಿದ್ದಳು. ನಾನು ಅಲ್ಲಿಗೆ ಹೋದ ಮೇಲೆ ಅವಂಗಲತೆಯು, ಕೇಳು, ನಿನ್ನನ್ನು ಮುಂದೆ ಮದುವೆಯಾಗುವ ಹೆಂಡತಿಯು ಏನು ಹೇಳುತ್ತಾಳೋ ಕೇಳು | ನಿನ್ನಿ ದಿರಿಗೆ ಹೊರ್ತು ನಾನು ಇಂತಹ ಮಾತನ್ನು ಕಿವಿಯಲ್ಲಿ ಕೇಳಲಾರೆ ಎಂದಳು. ನಾನು ವಿಸ್ಮಿತನಾಗಿ ಅದೇನೆಂದು ಕೇಳಿದನು. ಲವಂಗತೆಯು ರಜನಿಯನ್ನು ಕುರಿತು, ಹೇಳು, ನಿನ್ನ ವರನು ಬಂದಿ ದಾನೆಂದಳು. ರಜನಿಯು ಕಾತರದಿಂದ ಕಣ್ಣೀರು ತುಂಬಿದವಳಾಗಿ ಆಲಿಕಲವಂಗಲತೆಯ ಚರಣಗಳನ್ನು ಸ್ಪರ್ಶಮಾಡಿಕೊಂಡು, ನನ್ನ ಪ್ರಾರ್ಥನೆ ಏನೆಂದರೆ-ನನಗೆ ಇರತಕ್ಕ ಆಸ್ತಿಯೆಂದರೆ ಈ ಬಾಬು ಮಹಾಶಯರ ಪ್ರಯತ್ನದಿಂದ ಉದ್ಘಾರವಾದ ಆಸ್ತಿಯನ್ನು ಕಾಗದಪತ್ರಗಳನ್ನು ಬರೆಸಿ ನಿನಗೆ ದಾನವಾಗಿ ಕೊಟ್ಟುಬಿಡುವೆನು ; ನೀನು ದಯವಿಟ್ಟು ಗ್ರಹಣಮಾಡುವೆಯೋ ? ಇದೇ ನನ್ನ ಪ್ರಾರ್ಥನೆಯೆಂದಳು,