ಪುಟ:ರಜನೀ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿಲಸಿಯ ಪರಿಚ್ಛೇದ 87 vy2 + ++vvvv \r\rn ರಜನಿಯು, ನೀವು ತೆಗೆದುಕೊಳ್ಳದಿದ್ದರೆ, ನಾನು ಆಸ್ತಿಯನ್ನೆಲ್ಲಾ ಯಾರಿಗಾ ದರೂ ಸುಮ್ಮನೆ ಕೊಟ್ಟು ಬಿಡುವೆನೆಂದಳು. ನಾನು-ಅಮರನಾಧಬಾಬುವಿಗೆ ! ರಜನಿ-ನೀನು ಅವನನ್ನು ಚೆನ್ನಾಗಿ ತಿಳಿಯಲಿಲ್ಲ. ನಾನು ಕೊಟ್ಟರೂ ಅವನು ತೆಗೆದುಕೊಳ್ಳುವುದಿಲ್ಲ. ತೆಗದುಕೊಳ್ಳುವವರು ಬೇರೇ ಜನರು ಇದ್ದಾರೆ. ನಾನು-ಅಮರನೆ ಧಬಾಬು ! ಏನು ಹೇಳುತ್ತಿ ? ಅಮರನಾಧ-ನನ್ನ ಸಂಗಡ ಯಾವ ಮಾತೂ ನಡೆದಿಲ್ಲ. ನಾನೇನು ಹೇಳಲಿ ? ನಾನು ಬಹಳ ಅನುಮಾನದಲ್ಲಿ ಬದ್ದೆ, ರಜನಿಯು ಆಸ್ತಿಯನ್ನು ಬಿಟ್ಟು ಕೊಟ್ಟಿದ್ದು ಆಶ್ಚರೈವೆಸಿ ದುದು. ಅಮರನಾ ಧನು ಯಾವ ಆಸ್ತಿಗೋಸ್ಕರ ಇಷ್ಟು ಕಷ್ಟ ಪಟ್ಟು ಯಾವದರ ಆಶೆಗೊಸ್ಕರ ರಜನಿಯನ್ನು ವಿವಾಹಮಾಡಿಕೊಳ್ಳುವವನಾಗಿ ದ್ದಾನೋ, ಅವನೂ ಕೈಬಿಡುವಹಾಗಿರುವವನಾಗಿದ್ದಾನೆ. ನೋಡಿದರೆ, ಅವನು ಏನೇನೂ ವ್ಯಾಕುಲವಿಲ್ಲದೆ ಪ್ರಫುಲ್ಲ ಚಿತ್ರನಾಗಿದ್ದಾನೆ. ಇದೇನು ವ್ಯಾಪಾರ ! ಎ೦ದು ಯೋಚಿಸುತಲಿದ್ದೆನು. ನಾನು ಅವರನಾಧರನ್ನು ಕುರಿತು, ನೀನು ಬೇರೆ ಕಡೆಗೆ ಹೋಗು ; ನಾನು ರಜನಿಯ ಸಂಗಡ ಕೆಲವು ಮಾತುಗಳನ್ನು ಸ್ಪಷ್ಟವಾಗಿ ಹೇಳಬೇಕಾಗಿದೆ ಎಂದು ಹೇಳಿದಪ್ರಕಾರ ಅಮರನಾಥನು ಬೇರೆಕಡೆಗೆ ಹೋದನು. ಅನಂತರ ನಾನು ರಜನಿ ಯನ್ನು ಕುರಿತು ನೀನು ನಿಜವಾಗಿಯೂ ಆಸ್ತಿಯನ್ನು ಯಾರಿಗಾದರೂ ಕೊಟ್ಟು ಬಿಡುವೆಯಾ ? ಎಂದು ಕೇಳಿದೆ. - ರಜನಿ-ನಿಜವಾಗಿ ಸತ್ಯನಾಗಿ ಕೊಟ್ಟು ಬಿಡುವೆನು. ನಾನು ಗಂಗೆಯ ಬಲ ವನ್ನು ಕೈಲಿ ತೆಗೆದುಕೊಂಡು ಪ್ರಮಾಣ ಮಾಡುತ್ತೇನೆ, ನಾನು-ನಾನು ನಿನ್ನ ದಾನವನ್ನು ಪರಿಗ್ರಹಿಸುತ್ತೇನೆ. ನೀನು ನಮ್ಮಿಂದ ಏನಾದರೂ ತೆಗೆದುಕೊಂಡರೆ-ಇಲ್ಲವಾದರೆ ತೆಗೆದುಕೊಳ್ಳುವುದಿಲ್ಲ. ರಜನಿ-ಬಹಳ ತೆಗದುಕೊಂಡಿದ್ದೇನೆ. ನಾನು-ಇನ್ನೇನಾದರೂ ಸ್ವಲ್ಪ ತೆಗೆದುಕೊಳ್ಳಬೇಕು; ರಜ-ತಮ್ಮಹೆಸರಾಗಿ ನೀವು ಉಟ್ಟ ಒಂದು ಹಳೇಬಟ್ಟೆಯನ್ನು ಕೊಟ್ಟರೆ ಸಾಕು, ನಾನು-ಅದಲ್ಲ. ನಾನು ಕೊಡುವುದನ್ನು ತೆಗೆದುಕೊಳ್ಳಬೇಕು, ರಜನಿ ಏನು ಕೆಡುವೆ ?