ಪುಟ:ರಜನೀ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾರನೆಯ ಪರಿಚ್ಛೇದ 89 ರಜನಿ_ಇ ನಾನು-ಅದೇನೆ ? ಹಾಗಾದರೆ, ಇಷ್ಟು ಮಾತುಗಳನ್ನೆಲ್ಲ ಹೇಳಿದ್ದೇಶಕ್ಕೆ ? ಇಷ್ಟೆಲ್ಲಾ ಅತ್ಯದ್ದೇತಕ್ಕೆ ? ರಜನಿ-ನನಗೆ ಆ ಸುಖವು ಹಣೆಯಲ್ಲಿ ಬರದಿಲ್ಲ ವೆಂತಲೇ ಇಷ್ಟು ಅyದ್ದು. ನಾನು-ಅದೇತಕ್ಕೆ ? ನಾನು ಮದುವೆ ಮಾಡುತ್ತೇನೆ. ರಜನಿ-ನೀನು ಮದುವೆ ಮಾಡಲಾರೆ, ಅಮರನಾಥನು ನಮಗೆ ಸತ್ವಸ್ವನಾಗಿ ದ್ದಾನೆ, ಅಮರನಾದನು ನಮ್ಮ ಆಸ್ತಿಯನ್ನು ಉದ್ದಾರ ಮಾಡುವುದಕ್ಕೆ ಮಾಡಿರುವಷ್ಟು, ಇತರರು ಪರರಿಗೋಸ್ಕರ ಅಷ್ಟುಮಾಡುವರೆ ? ಅದು ಸಾಲದುದಕ್ಕೆ ಅವನು ತನ್ನ ಪ್ರಾಣ ವನ್ನು ಕೊಟ್ಟು ನನ್ನ ಪ್ರಾ"ವನ್ನು ರಕ್ಷಣೆ ಮಾಡಿದ್ದಾನೆ, - ರಜನಿಯು ಆ ಸಮಾಚಾರವನ್ನೆಲ್ಲಾ ಹೇಳಿದಳು. ಅನಂತರ ಅವಳು ನಾನು ಯಾರಲ್ಲಿ ಇಷ್ಟು ಋಣಿಯಾಗಿದ್ದೇನೆ, ಅವನು ಹೇಳುವಹಾಗೆ ನಡೆಯಬೇಕು, ಅವನು ಅನುಗ್ರಹಿಸಿ ನನ್ನನ್ನು ತನ್ನ ದಾಸಿಯಾಗಬೇಕೆಂದರೆ ನಾನವನ ದಾಸಿಯಾಗುವೆನು. ಮತ್ಯಾರಿಗೂ ದಾಸಿಯಾಗಲಾರೆನೆಂದಳು, ಹರಿ ! ಹರಿ ! ಸನ್ಯಾಸಿಯು ಹುಡುಗನಿಗೇತಕ್ಕೆ ಔಷಧವನ್ನು ಕೊಟ್ಟನೋ ? ವಿವಾಹವಿಲ್ಲದೇ ಆಸ್ತಿಯು ಉಳಿಯುವದು. ರಜನಿಯು ಆಸ್ತಿಯನ್ನು ಕೊಡಲು ಈಗಲೇ ಸಿದ್ಧಳಾಗಿದ್ದಾಳೆ ! ರಜನಿಯ ದಾನವನ್ನು ತೆಗೆದು ಕೊಳುವುದೆ? ಬಿಕ್ಷೆಯನ್ನು ಬೇಡಿ ತಿನ್ನುವುದು ಅದಕ್ಕಿಂತಲೂ ಮೇಲು. ನಾನು ಮೊದಲು, ಈ ವಿವಾಹವನ್ನು ಮಾಡದಿದ್ದರೆ ನಾನು ಕಾಯಸ್ಥ ಹೆಣ್ಣೆ ಅಲ್ಲ ಎಂದು ಹೇಳಿಕೊಂಡಿದ್ದೇನೆ, ನಾನು ಈ ಮದುವೆಯನ್ನು ಮಾಡಿಯೇ ತೀರುತ್ತೇನೆಂದು ಹೇಳಿ ಕೊಂಡು, ರಜನಿಯನ್ನು ಕುರಿತು, ಹಾಗಾದರೆ ನಾನು ನಿನ್ನ ದಾನವನ್ನು ತೆಗೆದುಕೊಳ್ಳು ವುದಿಲ್ಲ. ನೀನು ಯಾರಿಗೆ ಬೇಕೋ ಅವರಿಗೆ ಕೊಟ್ಟು ಬಿಡೆಂದು ಹೇಳಿ ಅಲ್ಲಿಂದ ಎದ್ದೆನು. ರಜನಿಯು, ಸ್ವಲ್ಪ ಕುಳಿತುಕೊ, ನಾನು ಅವರನಾಥನಿಂದ ಒಂದು ಮಾತು ಹೇಳಿಸುತ್ತೇನೆ. ಅವನನ್ನು ಕರೆಯುತ್ತೇನೆಂದು ಹೇಳಿದಳು. ನಾನು ಅಮರನಾಥನನ್ನು ಇನ್ನೊಂದುಸಲ ನೋಡಬೇಕೆಂದಿದ್ದೆನು. ಅದು ಕಾರಣ ಪುನಃ ಕೂತುಕೊಂಡೆನು. ರಜನಿಯು ಅವರನಧನನ್ನು ಕರೆದಳು. ಅಮರನಾಥನು ಬರುತ್ತಲೇ ನಾನು ರಜನಿಯನ್ನು ಕುರಿತು, ಅಮರನಾಥನು ಈ ವಿಷಯದಲ್ಲಿ ಏನಾದರೂ ಹೇಳಬೇಕಾದರೆ ನಿನ್ನ ಇದುರಿಗೆ ಅದನ್ನೆಲ್ಲಾ ಹೇಳಲಾ ರನು, ನಿನ್ನ ಪ್ರಶಂಸೆಯನ್ನು ನೀನೇ ಕೇಳುವುದು ಸರಿಯಲ್ಲವೆಂದೆನು, ರಚನಿಯು ಅಲ್ಲಿಂದ ಹೊರಟುಹೋದಳು.