ಪುಟ:ರಜನೀ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9) ರಜನೀ nAmummy wwwwwwww! ಭಾನು ಕಳ್ಳನನ್ನು ಗುರ್ತಿಸಿದೆನು, ಭಯಪಟ್ಟು ಪರಿಚಾರಿಕೆಯನ್ನು ಎಬ್ಬಿಸಿದೆನು. ಅವಳಿಗೆ ಕಳ್ಳನ ಗುರುತು ಇರಲಿಲ್ಲ. ನಾನು ಯತ್ನವಿಲ್ಲದೆ ಕಳ್ಳನನ್ನು ಒಳ್ಳೆಯ ಮಾತನ್ನು ಹೇಳಿ ಮುಂಚದಮೇಲೆ ಕೂರಿಸಿದನು, " ಅಮರ-ಕ್ಷಮಿಸು, ನಾನು ಅದೆಲ್ಲ ಬಲ್ಲೆನು. ನಾನು ಒಂದುಸಲ ಜ್ಞಾಪಕಕ್ಕೆ ತರುವುದು ಒಳ್ಳೆಯದೆಂದು ಯೋಚಿಸಿ ಮುಂದೆ ಹೇಳತೊಡಗಿದೆನು, 14 ಅನಂತರ ಒಂದು ಕ್ಷಣದಮೇಲೆ ಕಳ್ಳನಿಗೆ ಗೊತ್ತಾಗದೆ ನನ್ನ ಸಂಕೇತಾನುಸಾರವಾಗಿ ಪರಿಚಾರಕಳು ಹೊರಗೆ ಹೋಗಿ ಪಹರೆಯವನನ್ನು ಕರೆದು ಕನ್ನದ ಹತ್ತಿರ ಹೊರಗಡೆ ನಿಲ್ಲಿಸಿದಳು. ನನಗೆ ಅದು ಗೊತ್ತಾಗಿ ಸ್ವಲ್ಪ ಕೆಲಸವಿದೆಯೆಂದು ಹೇಳಿ ಹೊರಗೆ ಹೋಗಿ ಚಿಕ್ಕಮನೆಯ ಬಾಗಳಿನ ಹೊಂಗಿನ ಚಿಲಕ ವನ್ನು ಹಾಕಿಕೊಂಡೆನು. " ಇಷ್ಟು ಹೇಳಿ ಕೆಟ್ಟ ಕೆಲಸವಾತೇನು ? ಎಂದೆನು, ಅಮರ-ಈ ಮಾತುಗಳೆಲ್ಲ ಏತಕ್ಕೆ ? ನಾನು-ಕಡೆಗೆ ಕಳ್ಳನು ಹೊರಗೆ ಬಂದುದು ಹೇಗೆ ? ಹೇಳು, ನೆರೆಹೊರೆಯ ಜನರನ್ನೆಲ್ಲಾ ಕರೆದು ಗುಂಪು ಸೇರಿಸಿದೆನು. ಒಳ್ಳೆ ಬಲಿಷ್ಟರು ಬಂದು ಕಳ್ಳನನ್ನು ಹಿಡಿದುಕೊಂಡರು. ಕಳ್ಳನು ಲಜ್ಜೆಯಿಂದ ಮುಖಕ್ಕೆ ಬಟ್ಟೆ ಯನ್ನು ಹಾಕಿ ಮುಚ್ಚಿ ಕೊಂಡನು. ನಾನು ದಯಮಾಡಿ ಆ ಮುಖದ ಬಟ್ಟೆ ಯನ್ನು ತೆಗಿಸಲಿಲ್ಲ. ಆದರೆ ನಾನೇ ಬಂದು ಕಬ್ಬಿಣದ ಸಲಾಕಿಯನ್ನು ಚೆನ್ನಾಗಿ ಕಲಸಿ ಅವನ ಬೆನ್ನಿನಮೇಲೆ ಬರೆ ಯನ್ನು ಹಾಕಿ ಒಂದೆನು. ಏನೆಂದು ? «« ಕಳ್ಳ'-ಎಂದು, ಅಮರನಾಥನು ಅತ್ಯಂತ ಬಿಸಲು ಕಾಲದಲ್ಲಿಯ ಕವಚವನ್ನು ಹಾಕಿ ಕೊಳ್ಳದೆ ಮಲಗುವುದಿಲ್ಲ ವೇತಕ್ಕೆ ? ಎಂದು ಕೇಳಿದನು. ಅವರ...? ಲೈ. ನಾನು-ಲವಂಗಲತೆಯ ಹಸ್ತಾಕ್ಷರವು ಅಳಿಸಿಹೋಗುವುದಿಲ್ಲ. ನಾನು ರಜನಿಯನ್ನು ಕರೆದು ಅವಳಿಗೆ ಈ ಕಥೆಯನ್ನು ಹೇಳಬೇಕೆಂದು ಇಷ್ಟ ವಿತ್ತು. ಆದರೆ ಕೇಳುವುದಿಲ್ಲ. ನೀನು ರಜನಿಗೆ ಯೋಗ್ಯನಲ್ಲ, ಅವಳನ್ನು ಮದುವೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಡ ; ಹಾಗೆ ಸುಮ್ಮನೆ ಕ್ಲಾಂತನಾಗದಿದ್ದರೆ, ಆಗವಳಿಗೆ ಹೇಳಬೇಕಾಗುತ್ತದೆಂದು ಅಮರನಾಥನಿಗೆ ಹೇಳಿದೆನು.