ಪುಟ:ರಜನೀ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ 93 wwwwwwAvvvvvyurva Aw ಅಮರನಾಥನು ಸ್ವಲ್ಪ ಹೊತ್ತು ಯೋಚಿಸಿ ದುಃಖಭಾವದಿಂದ, ತಿಳಿಸಬೇಕಾದರೆ ತಿಳಿಸು ; ನೀನು ತಿಳಿಸಿದರೂ, ತಿಳಿಸದಿದ್ದರೂ ನಾನೇ ಈಹೊತ್ತು ಇದನ್ನೆಲ್ಲ ಅವಳಿಗೆ ತಿಳಿಸುವೆನು. ಅವಳು ನನ್ನ ಗುಣಗಳನ್ನೂ ದೋಷಗಳನ್ನೂ ತಿಳಿದವಳಾಗಿ ನನ್ನನ್ನು ಪರಿಗೃಹಿಸುವವಳಾಗಿದ್ದರೆ ಪರಿಗೃಹಿಸಲಿ; ಇಲ್ಲವಾದರೆ ಬಿಡಲಿ ; ನಾನವಳಿಗೆ ವಂಚಿಸು ವುದಿಲ್ಲ ಎಂದು ಹೇಳಿದನು, ನಾನು ಸೋತುಹೋದವಳಾಗಿ ಮನಸ್ಸಿನಲ್ಲಿ ಅಮರನಾಥನಿಗೆ ಅನೇಕ ವಿಧವಾಗಿ ಧನ್ಯನೆಂದು ಹೇಳಿ ಹರ್ಷವಿವಾದಗಳಿಂದ ವಿಕಲಚಿಕ್ತಳಾಗಿ ಹಿಂದಿರುಗಿ ಮನೆಗೆ ಬಂದು ಬಿಟ್ಟೆನು. - -ಓ ಐದನೆಯ ಪರಿಚ್ಛೇದ. ಶಚಂದ್ರನ ಹೇಳಿಕೆ. - ಎತ್ತರವನ್ನು ಕಳೆದುಕೊಂಡವನಾಗಿ ಕೆಲದಿನಗಳನಂತರ ಸ್ವಲ್ಪ ಆಲಸ್ಯದಿಂದ ಪೀಡಿತನಾಗಿದ್ದನು. ಐಶ್ವರದಿಂದ ದಾರಿದ್ರಕ್ಕೆ ಬಂದ ಕೊರತೆಯಿಂದ ಮನಸ್ಸಿಗೆ ವಿಕಾರವುಂಟಾಯಿತು. ಎಂತಹ ಕಾಯಿಲೆಯುಂಟಾಯಿತೆಂಬುದನ್ನು ವಿವರಿಸಿ ಹೇಳಲು ಪ್ರಯತ್ನ ಪಡುವುದಿಲ್ಲ. ಕೇವಲ ಆ ಕಾಯಿಲೆಯ ಅಕ್ಷಣಗಳನ್ನು ಮಾತ್ರ ತಿಳಿಸುವೆನು, ಸಾಯಂಕಾಲವಾಗುವುದಕ್ಕೆ ಮೊದಲು ಅಂದರೆ ಬಿಸಿಲಿನ ತಾಪವು ಕಡಮೆ ಯಾದಮೇಲೆ ಮಹಡಿಯ ಮೇಲೆ ಓದುತ್ತಲಿರುವೆನು, ಹಗಲೆಲ್ಲ ಓದುತಲಿದ್ದೆನು. ಪ್ರಪಂಚದ ಗೂಢವಾದ ತತ್ವಗಳನ್ನೆಲ್ಲ ಆಲೋಚಿಸುತ್ತಲಿರುವೆನು, ಆದರೆ ಅದರ ಯಾವ ಮರ್ಮವನ್ನೂ ಅರಿಯಲಾರೆನು, ಯಾವದರ ಉದ್ದೇಶವೂ ಗೊತ್ತಾಗುತ್ತಿರ ಲಿಲ್ಲ. ಎಷ್ಟು ಓದಿದರೂ ಓದಬೇಕೆಂಬ ಆಶೆಯಿರುವುದು, ಕಡೆಗೆ ಒಂದುದಿನ ಶ್ರಾಂತಿ ಯುಂಟಾಗಿ ಪುಸ್ತಕವನ್ನು ಮುಚ್ಚಿ ಬಿಟ್ಟ ಕೈಲಿಟ್ಟು ಕೊಂಡು ಹಾಗೆಯೇ ಯೋಚಿಸಿ ದೆನು. ಹಾಗೆಯೇ ನಿದ್ರೆಯು ಬಂತು ನಿದ್ರೆಯ ಅಲ್ಲ-ಅದು ಮೋಹ-ನಿದ್ರೆಯ ಹಾಗೆ ಸುಖಕರವಾಗಿ ತೃಪ್ತಿ ಜನಕವಾದುದಲ್ಲ. ಕಾಂತವಾದ ಹಸ್ತದಿಂದ ಪುಸ್ತಕವು ಜರಿದುಬಿದ್ದು ಹೋಯಿತು. ಕಣ್ಣುಗಳನ್ನು ತೆರೆದುಕೊಂಡು ನೋಡುತ್ತಲೇ ಇದ್ದೆನು, ಬಾಹ್ಯ ವಸ್ತುಗಳನ್ನೆಲ್ಲಾ ನೋಡುತಲಿರುವೆನು. ಆದರೆ ನೋಡಿದುದು ಇಂತಹದುದೆಂದು ಹೇಳುವುದಕ್ಕಾಗುತ್ತಿರಲಿಲ್ಲ, ಅ ತಸ್ಮಾತ್ ಅಲ್ಲಿ ಪ್ರಭಾತದ ತರಂಗವಿಕ್ಷೇಪದಿಂದ