ಪುಟ:ರಮಾನಂದ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆಂಗಳೂರು. oSMANYA U*'|VERSITY COL 1, : 6 - 1. 1{4}{ RY. 8-11-1916. ಸತಿಹಿತೈರ್ಷಿಣಿ ಸಂಪಾದಯಿತ್ರಿಯವರಾದ ತಿರುಮಲಂಮನವರ ಸಮಕ್ಷಮಕ್ಕೆ ನೀವು ಅ೦ತಃಕರಣಪೂರ್ವಕವಾಗಿ ಎಪ್ರಿಲ್ ತಿಂಗಳಲ್ಲಿ ಕಳು ಹಿಸಿಕೊಟ್ಟ ಮಾತೃನಂದಿನಿ, ರಮಾನಂದ ಎಂಬ ಪುಸ್ತಕಗಳೂ ಮತ್ತು ಕಳೆದ ತಿಂಗಳು ೧೭ನೇ ತಾರೀಖಿನಲ್ಲಿ ರವಾನಿಸಿದ ವಿಕ್ರಮ, ಚಂದ್ರ ವದನೆ ಮುಂತಾದ ಪುಸ್ತಕಗಳೂ ಸುರಕ್ಷಿತವಾಗಿಯೂ, ಸಕಾಲದಲ್ಲಿ ಯ ತಲುಪಿದವು. ಮಾತೃ ನಂದಿನಿ ರಮಾನಂದ ಎ೦ಬ ಪುಸ್ತಕಗಳನ್ನು ಬಲು ಸ್ನಾ ರಸ್ಯದಿಂದ ಓದಿದೆನು, ಅವುಗಳಲ್ಲಿ ನಿದರ್ಶಿಸಲ್ಪಟ್ಟಿರುವ ನಾಲ್ವಜನಿ ಕವೂ ಪ್ರತಿದಿನೋಪಯುಕ್ತವೂ ಅದಸದಾಚರಣೆಗಳ ಸವಿಸ್ತರಣೆಯು ಬಹಳ ಮನೋಹರವಾಗಿದೆ. ಈಗ ಬಂದಿರುವ ಪುಸ್ತಕಗಳನ್ನೂ ಕೈಲಾದಮಟ್ಟಿಗೆ ಜಾಗ್ರತೆಯಲ್ಲಿ ಯೇ ಓದಿ ಪುನಃ ನಿಮಗೆ ಬರೆಯು ತೇನೆ. - ಈಗ ತಾನೇ ಜನ್ಮವೆತ್ತಿರುವ ಕರ್ಣಾಟಕ ನಂದಿನಿ ( ಮಾಸ ಪತ್ರಿಕೆ )ಯು ಕನ್ನಡಿಗರೆಲ್ಲರಿಂದಲೂ ಯಥೋಚಿತವಾಗಿ ಪುರಸ್ಕರಿಸ ಲ್ಪಟ್ಟು ಮಾತೃಭಾಷೆಯ ಉಪಚಯಕ್ಕೆ ಕಾರಣವಾಗುವದೆಂದು ಕೋರುತ್ತೇನೆ. ಇತಿ. ಚೆ. ಎಸ್. ಚಕ್ರವರ್ತಿ.