ಪುಟ:ರಮಾನಂದ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ೩೯ ನಮ್ಮೆಲ್ಲರಿಗೂ ಸೇರಿದ ಮಾತಾಗಿದೆ. ಇದಕ್ಕೆ ನಾವೆಲ್ಲರೂ ಸೇರಿಯೇ ಪ್ರತೀಕಾರವನ್ನು ಮಾಡಬೇಕಾಗಿದೆ. ನಳ:-ಹಾಗಿದ್ದರೆ ನಿಮ್ಮ ಅಭಿಪ್ರಾಯವೇನು? ರವಿ:-ಬಾಲೇಂದುವಿನಂತೆ ಅಭ್ಯುಧಿತನಾಗುತ್ತಿರುವ ಶತ್ರುವಿನ ಏಳಿಗೆಯನ್ನು ನೋಡಿ ನೋಡಿ, ಪರಿತಪಿಸುತ್ತಿರುವ ನನ್ನಂತಹ ಭಾಗ್ಯ 5 ಹೀನರ ಅಭಿಪ್ರಾಯವಿನ್ನೇನು? ಕಳಿಂಗ:- ಕುಮಾರನೇ! ನೀತಿಜ್ಞನಾದ ನೀನೇ ಹೀಗೆ ಹೆಂಗ ಸಂತೆ ಕಳವಳಿಸುವುದು ತಕ್ಕುದಲ್ಲ; ಸಮಾಧಾನವನ್ನು ವಹಿಸಿ, ಮುಂದಿನ ಕೆಲಸವನ್ನು ಆಲೋಚಿಸು. ರವಿ:-ಮಿತ್ರರೇ! ಯಾವನ ಮೂಲಕವಾಗಿ ನಾನು ಕುಲ, 10 ಭೋಗ, ಸಂಪದಗಳೆಲ್ಲ ಕ್ಯೂ ಎರವಾಗಿ ತಿರುಗುವಂತಾಗಿರುವೆನೋ, ಅಂಥವನಿಗೆ ಪ್ರತೀಕಾರಮಾಡದೆ ಬಿಟ್ಟರೆ ನನಗೆ ಹೇಗೂ ಉಳಿ ಗಾಲವಿಲ್ಲ, - ನಳ:-ಮಿತ್ರನೆ ಕೇವಲ ಬಾಲಮಾತ್ರನಾದ ರಮಾನಂದನನ್ನು ನೀನು ಸಮಾನಸ್ಕಂಧನಾದ ವೈರಿಯಂತೆ ಭಾವಿಸಿ ಹೀಗೆ ಶಂಕಿಸುತ್ತಿರು 15 ವುದು ಆಶ್ಚರ್ಯವಾಗಿದೆ ? - ರವಿ:-ಅಯ್ಯ, ನಳನೆ! ರಮಾನಂದನು ನನಗೆ ನಾಲ್ಕಾರು ವರ್ಷಗಳಷ್ಟು ಕಿರಿಯನಾಗಿದ್ದರೂ, ಪ್ರಬಲಾಶಯದಿಂದ ಬಲಿಷ್ಠನಾದ ಶುವಾಗಿಯೇ ಇರುವನು, ಹಾಗೂ ಒಂದುವೇಳೆ ಆತನನ್ನು ಬಾಲ ಮಾತ್ರನೆಂದೆಣಿಸಿ ಬಿಟ್ಟೆನಾದರೆ, ಮುಂದೆ ಅವನೇ ಅತ್ಯಂತ ಪ್ರಬಲ 20 ನಾಗಿ, ನಮ್ಮ ದಾಯಭಾಗವೆಲ್ಲ ಕ್ಕೂ ಸೊನ್ನೆ ಸುತ್ತುವುರದಲ್ಲಿ ಸಂದೇ ಹವಿಲ್ಲ, ಆದುದರಿಂದ, ಆತನು ತಲೆಯೆತ್ತದಂತೆ ಈಗಲೇ ನಿಗ್ರಹಿಸು ವುದು ಸಹಜವಾಗಿದೆ, ಏಕೆಂದರೆ «ಚಿಗುರೆಂದುಂ ಮಲೆಬೇವು ಸ್ಮಾದುವಹುದೇ-ಚೇಳ್ ಚಿಕ್ಕದೆಂದಳ್ಳರಿಂ | ತಗೆಯಲ್ ಚುಚ್ಚದೆ, ಪಾಲನೂಡಿ ಪುಲಿಯಂ ಸಾಕಿ ವಿಶ್ವಾಸಿಯೇ !! 25