ಪುಟ:ರಮಾನಂದ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ೪n ಅಪರಾಧಿಯಾಗಿ ಪರಿಗಣಿಸಲ್ಪಟ್ಟು ದಂಡನೆಗೆ ಗುರಿಯಾಗುವಂತೆ ಯ ಮಾಡಬೇಕಾದ ಹಲವು ಭೇದೋಪಾಯಗಳನ್ನು ಪ್ರಯೋಗಿಸ ಬೇಕೆಂಬುದೇ ನನ್ನ ಆಲೋಚನೆಯಾಗಿದೆ. ಕಳಿಂಗ:-ಅಹುದಹುದು, ಹಾಗೆಯೇ ಮಾಡಬೇಕು. ಆ ದುರಭಿಮಾನಿಯು ಸಹಾಧ್ಯಾಯಿಗಳೊಡನೆ ಸರಸ ಪ್ರಸಂಗದಲ್ಲಿ 5 ನಲವೇರಿ ಮೈ ಮರೆತು ಕುಳಿತಿರುವಾಗ, ಆತನ ತರ್ಕ, ವ್ಯಾಕರಣ, ದಂಡನೀತಿ ಶಾಸ್ತ್ರ ಪುಸ್ತಕಗಳನ್ನು ಅಪಹರಿಸಿ ಬೈತಿಡುವುದೂ, ಆತನ ಬರೆವಣಿಗೆಯಲ್ಲಿ ಕೊಳೆಯನ್ನು ತುಂಬುವುದೂ, ಆತನ ನಡೆನುಡಿ ಯಲ್ಲಿ ಕಲಂಕವುಂಟಾಗುವಂತೆ ಇತರ ಮಾಯಾಜಾಲಗಳನ್ನೊಡ್ಡು ವುದೂ, ಇವೆಲ್ಲವೂ ಆತನನ್ನು ಸುಲಭವಾಗಿ ಬಲೆಯೊಳಕ್ಕೆ ಕಡಹ 10 ಕಕ್ಕುವುಗಳಾಗಿವೆ. - ರವಿ:-(ಕಳಿಂಗನ ಬೆನ್ನು ತಟ್ಟಿ) ಭಲೆ ಭಲೆ ಮಿತ್ರನೆ! ಒಳ್ಳೆಯ ಸಲಹೆಬಲು ಒಳ್ಳೆಯ ಮಾಟವನ್ನೇ ತೋರಿಸಿದೆ. ಒಪ್ಪಿತು; ನನಗೆ ಇದು ಚೆನ್ನಾಗಿಯೂ ಒಪ್ಪಿತು. ಇನ್ನು ವೈರಿಯು ನಮ್ಮ ಬಲೆಗೆ ಬಿದ್ದನೆಂದೇ ತಿಳಿದು ಸಮಾಧಾನ ಹೊಂದುವೆನು. 15 (ತೆರೆಯಲ್ಲಿ ಕುಮಾರನೆ! ಶಾಲೆಗೆ ಹೊತ್ತು ಮೀರುತ್ತಿಲ್ಲವೇ? ಇದೇಕೆ ? ಅಲ್ಲಿಗೆ ತಡೆತಡೆದು ನಿಲ್ಲುತ್ತಿರುವೆ? ರವಿ:- (ಆತುರದಿಂದ) ಇದೊ ಇದೊ-ಆತನೇ ಇಲ್ಲಿಗೆ ಬರುತ್ತಿ ರುವನು. ನಳ:- (ತೆರೆಯಕಡೆ ನೋಡಿ) ಆತನು ಸಹಧ್ಯಾಯಿಗಳೊಡನೆ 2 ಬಾಲೋದ್ಯಾನದಿಂದ ಶಾಲೆಗೆ ಬರುತ್ತಿರುವನು, ಕಪಟತಂತ್ರವನ್ನೇ ತಿಳಿಯದ ಪಶುಪ್ರಾಣಿಯಾದ ಇವನನ್ನು ನಾವು ಜಯಿಸುವುದೇನೂ ಕಷ್ಟವಾಗಿ ಕಾಣುವುದಿಲ್ಲ, ಕಳಿಂಗ:- ಕಷ್ಟವಾಗಿಲ್ಲ ದಿದ್ದರೂ, ಮುಂದೆ ನಾವು ನಿರ್ದೊ ಷಿಗಳಾಗಿಯೇ ಪರಿಗಣಿಸಲ್ಪಡಬೇಕಲ್ಲವೆ ? ಅದಕ್ಕಾಗಿ ಈತನಲ್ಲಿ 25