ವಿಷಯಕ್ಕೆ ಹೋಗು

ಪುಟ:ರಾಜಶೇಖರ ವಿಲಾಸಂ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨ ತ್ರ ಯೋ ದ ಶಾ ಶಾ ಸ೦ ತನುಭವನೆಲ್ಲಿದನೆಲ್ಲಿದ | ಇನಿವಾತಿನ ನೀರನೆಲ್ಲಿದಂ ಮೆಲ್ನಗೆಯಿ೦ || ಪಿನ ಸೊಬಗನೆಲ್ಲಿದಂ ಚ | ಲ್ವಿನ ಕಣಿಯಲ್ಲಿದನ ಮನ್ನ ನೋಂಬುಜಹಂಸಂ | ೧೦೪ ವ|| ಎಂದು ಪಲುಂಬಿ ಪಲವಾಡಿ ಬರ್ಪ್ಪಾಗಳಾಪುರಜನಂ ಕಂಡೀಮಡಿದ ಶಿಶುವಿವಳದೆಂದು ತಿಳಿದಳವಳಿದು ಪಳಯಿಸುವಳಂ ಕರೆದು ನೆರೆದಜನದೊಳಗಿಸಿ ನರೇಂದ್ರತುರಗಖುರಹತಿಯಿಂ ಮಡಿದನೆಂದು ತೊಟ್ಟನೆ ತೊರಿಡನಾರುಂಡಮಂ ಮುಂಡಮಂ ಕಂಡಡವಿಗಿರ್ಚ್ಚುಗೊಂಡ ಪುಲ್ಲೆಯಂತೆ ಹರಣಂ ಹಂಮೈಸಿ ಪರ್ದ್ಧೆರ ಗಿದುರಗಿಯಂತೆ ಮಿಡುಮಿಡನೆ ಮಿಡುಕಿ ಕಡಿವಡೆದಳವಳ್ಳಿಯಂತೆ ಕೊರಗಿ ಪೊಸೆ ದಿಟ್ಟ ಪೂಮಾಲೆಯಂತೆ ಕಂದಿ ಕುಂದಿ ಮಂದೈಸಿದಳಲಿಂ ಮು೦ದುಗೆಟ್ಟು ಕೆಟ್ಟ ಕೆಟ್ಟೆನೆಂದು ಬಸಿರಂಪೊಸದು ದೆಸೆದೆಸೆಗೆ ಬಾಯ ಬಿಟ್ಟು ಮೊರೆಯಿಟ್ಟು ಮರುಗಿ ವ|| ಎಳಗಿಳಿಯಂ ಕೊರಲ್ಕುರಿದು ಮೋದಿದರಾ ರ್ಮ್ಮುಯಂಚೆಯಂ ಭಯ೦ || ಗೊಳಿಸುತೆರಂಕೆಯಂಪರಿದು ಪೊಯ ವರಾರ್ಷ್ಟಗಶಾ ಬಮಂ ಕರಂ || ಮುಳಿದು ಶಿರೋಧಿಯಂ ಕಡೆಯಲೆಚ್ಚವರಾರ್ಮ್ಪಿಸನಾಳಕಾಂಡ ಕೋ || ಮಳತರಕಂಠಮಂ ಕಡಿದುರುಳ್ಳಿದರಾರ್ಸ್ಸುಕುಮಾರಶೇಖರಾ || ೧೦೫ ವ|| ಎಂದಾಕ ಬಂಧಮನೆ ತೊಡೆಯೊಳಿಟ್ಟಾರುಂಡಮಂ ಕರಯುಗದೊ ಧೃಡಿದಶ್ರುಮಿಶ್ರಕಟಾಕ್ಷ ದಿನೀಕ್ಷಿಸಿ ಮೊಗದೊಳು ಸುಂಕಿದಧೂಳಿಯಂ ಮೇಲು ದಿನೊಳೊಯ್ಯನೆರಸಿ ಕೆಲಸದಮಾಂಗಾಯ ೪ನೇಸರಿಸಿದರಳೆಲೆಯ ಸೈತು ಮಾಡಿ ಗಲ್ಲಮಂ ಪಿಡಿದು ಮೆಲ್ಲನಲುಗಿ ಮುದ್ದಿಸಿ ಮುಂಡಾಡಿ ನೋಡಿ ಮೆರೆದ ಪ್ಪಿದಳಲಂ ಸೈರಿಸಲಾರದೆ ಕಂ|| ಹಾಮಗನೆ ಹಾಮನೋಜ್ಞನೆ | ಹಾಮುದ್ದುಗ ಹಾಮದೇಭಗತಿಮಂಜುಳ ಹಾ || ಹಾಮಧುರವಾಣಿ ಹಾಮ | ತೈಮಾಸ್ಪದ ಹಾಮದೀಶವಂಶಲಲಾಮಾ || ೧೦೬