ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ೧೩೧ ಗಳೇನು ನಡೆದರೂ ತಾನು ಅದರಲ್ಲಿ ಸೇರದೆ ಇದ್ದನು, ಮಹರ್ಷಿದೇವೇಂದ್ರಠಾಕೂರರು “ನಮ್ಮ ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿಯಾಗಲಿ ಯಾವುದೋ ಒಂದು ವ್ರತವನ್ನು ಮಾಡು ತಿದ್ದುದರಿಂದ ನಮ್ಮ ತಂದೆಯ ಅಪ್ಪಣೆಯಂತೆ ನಾನು ಆತನನ್ನು ಕರೆಯಲಿಕ್ಕೆ ಹೋದೆನು. ಆ ಮಹಾತ್ಮನು ನನ್ನ ಆಮಂತ್ರಣವನ್ನು ಅಂಗೀಕರಿಸಲಿಲ್ಲ' ಎಂದು ಹೇಳಿರುವರು. ಈತನ ವಾದಗಳು ಅತ್ಯದ್ಭುತವಾದವುಗಳು, ದೊಡ್ಡ ದೊಡ್ಡ ಆಂಗ್ಲೆಯ ವಿದ್ವಾಂ ಸರು ಸುದಾ ವಿದ್ಯಾವಾದಗಳಲ್ಲಿ ನಿರುತ್ತರರಾಗಿ 'ಸರಿ ಸರಿ, ಒಳ್ಳೇದು, ಈ ವಿಷಯವನ್ನು ಕುರಿತು ನಾವು ಸಾವಕಾಶವಾಗಿ ಆಲೋಚನೆಮಾಡಿಹೇಳುವವು' ಎಂದು ತತ್ರಾಲೋಚಿತವಾಗಿ ಮಾತನಾಡಿ ತಪ್ಪಿಸಿಕೊಂಡು ಹೋಗುತ್ತಿದ್ದರು. ರಾಮಮೋಹನನು ಯಾವಜಾತಿಯಲ್ಲಿ ಯಾವವಸ್ತುವು ಉತ್ತಮವಾಗಿರುವುದೋ ಅದನ್ನು ಸ್ವೀಕರಿಸುತ್ತಿದ್ದನು. ಮಹಮ್ಮದೀಯಂ ವಸ್ತಾ ಇದ್ಯಲಂಕಾರಗಳಲ್ಲೆಲ್ಲಾ ಪರ ಡಿಯೂ, ತಲೆಯಪಾಗೂ, ಅಂಗರೇಖೆಯೆಂಬ ಬೊಗೆಯ, ಆಂಗ್ಲೀಯ ಪದ್ಧತಿಗಳಲ್ಲಿ ಗೃಹಾ ಲಂಕಾರವೂ ಇವುಗಳನ್ನು ಅಂಗೀಕರಿಸಿ ಪೂರ್ವ ಪದ್ಧತಿಯಾದ ಬಂಗಾಳ ಆಚಾರಗಳಲ್ಲಿ ಇವೆ ರಡನ್ನೂ ಬೆರಸಿ, ತನ್ನ ಜೀವಿತಾಂತದವರೆಗೂ ಅವುಗಳನ್ನೇ ಅವಲಂಬಿಸುತ್ತಿದ್ದನು. ತನುವಿಂದಾರೊಗ್ಯ ದಿನಾ | ಘನವಿದ್ಯೆಯನುತ್ತಮೋತ್ತಮಟ್ಠಾನತೆ ತಾ | ನನುಪಮವೆನಿಸಿಯ ಧರ್ಮವ | ನನುಗೊಳಿಸಿದಮಹಿಮನವನೊಳಿಲ್ಲಿಂ ಲೋಸ೦ || GS ಎಂಟನೆಯ ಪ್ರಕರಣ, ರಾಜಾರಾಮಮೋಹನರಾಯರ ಮತ. ರಾಜಾರಾಮ ಮೋಹನರಾಯರ ಮರಣಾನಂತರ ಆತನನ್ನು ಕುರಿತು ಹಿಂದುಗಳಲ್ಲಿ ವೇದಾಂತಿಗಳು ವೇದಾಂತಿಯೆಂತಲೂ, ಕ್ರಿಸ್ಟಿಯರು ಕ್ರೈಸ್ತವನೆಂತಲೂ, ಮುಸಲ್ಮಾನರು ಮಹಮ್ಮದೀಯನೆಂತಲೂ ಹೇಳುತ್ತಿದ್ದರು. ಈ ಚರ್ಚೆಯೆಂಬುದು ಕೆಲವು ಮತಗಳವರಲ್ಲಿ ಈಗಲೂ ಜೀವಿಸುತ್ತಲೇ ಇರುವುದು, ಆದರೆ ನಿಷ್ಪಕ್ಷಪಾತ ಬುದ್ದಿಯಿಂದ ವಿಮರ್ಶೆ ಮಾಡಿ ನೋಡಿದರೆ ನಾವು ಸುಲಭವಾಗಿ ಆತನ ಹೃದಯದಲ್ಲಿದ್ದ ಅಭಿಪ್ರಾಯಗಳಿಗೆ ಸಂಬಂಧಿಸಿದ ನಿಶ್ಚಯಮತವಾವುದೋ ಅದನ್ನು ತಿಳಿದುಕೊಳ್ಳಬಹುದು, ಆದುದರಿಂದ ಇಲ್ಲಿ ಆ ವಿಷಯ ವಾಗಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೩೮
ಗೋಚರ