ಪುಟ:ರಾಣಾ ರಾಜಾಸಿಂಹ.djvu/೧೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪] ಪತ್ರ ವಾಚನ ೯೧ ಅಭಿಮಾನಕ್ಕಾಗಿ ಔರಂಗಜೇಬನೊಡನ ಕಾದುವದಕ್ಕೆ ಬೇರೆ ಸಮರ್ಥರು ಯಾರು ? ನಾನು ನಿಮ್ಮನ್ನು ಮೊರೆ ಹೊಕ್ಕಿರುತ್ತೇನೆ ನನ್ನನ್ನು ರಕ್ಷಿಸು ವದಿಲ್ಲವೆ? ಮಹಾರಾಜರೇ, ಮಹಾರಾಣಾ ಪ್ರತಾಪಸಿಂಹನು ಅಕಬರನನ್ನು ಗಾದಿಯ ಮೇಲಿಂದ ಉರುಳಾಡಿಸಿದನು, ರಜಪೂತಸ್ಯಾನದಲ್ಲಿ ಅಕಬರ ಬಾದಶಹನನ್ನು ಕಾಲಿಕ್ಕಗೊಡಲಿಲ್ಲ, ತಾವು ಅದೇ ಸಿಂಹಾಸನದ ಮೇಲೆ ವಿರಾಜಮಾನರಾಗಿರುವಿರಿ ಆ ವೀರಶ್ರೇಷ್ಠರಾದ ಸಂಗ್ರಾಮ ಹಾಗೂ ಪ್ರತಾಪರ ವಂಶದವರು, ಅವರಗಿಂತಲೂ ತಮ್ಮ ಬಲವು ಕಡಿಮೆಯಾದ ದೃಲ್ಲ ತಮ್ಮ ಎದುರಿಗೆ ಆ ತುರುಕನು ಯಾವ ಗಿಡದ ಸೊಪ್ಪು ? ತಮ್ಮ ಸರ್ವಸ್ವವೆಲ್ಲವು ನಾಶವಾದರೂ ಶರಣಾಗತರನ್ನು ರಕ್ಷಿಸು ವದು ರಾಜಧರ್ಮವಲ್ಲ ವೇನು? ಪ್ರಾಣವನ್ನು ಕಳೆದಾದರು ಸ್ವಜಾತೀಯ ಸ್ತ್ರೀಯನ್ನು ರಕ್ಷಿಸುವವರು ರಜಪೂತರಲ್ಲದೆ ಬೇರೆ ಯಾರು? ಮತ್ತೊಂದು ಮಾತು ನಾನು ತಿಳಿಸುವದುಳಿದದೆ ಆದರೆ ಅದನ್ನು ಬರೆಯುವದಕ್ಕೆ ನಾಚಿಕೆ ಬರುತ್ತದೆ ಬರೆಯದಹೂರ್ತು ತಿಳಿಸಲಿಕ್ಕಾ ಗುವಂತಿಲ್ಲ ಈ ಮೊಗಲರ ಕೈಯೊಳಗಿಂದ ನನ್ನನ್ನು ಬಿಡಿಸದ ರಜಪೂ ತವೀರನನ್ನು ವಿಧಿಪೂರ್ವಕ ಲಗ್ನವಾಗಿ ಆತನ ಧರ್ಮಪತ್ನಿ ಯಾಗಲು ನಿಶ್ನ ಯಿಸಿದ್ದೇನೆ ವೀರಶ್ರೇಷ್ಠರೇ, ಯುದ್ಧ ಮಾಡಿ ಸ್ತ್ರೀಯರನ್ನು ದೊರಕಿಸು ವದು ಕ್ಷತ್ರಿಯರಧರ್ಮವು ಭೀಷ್ಮಾಚಾರ್ಯರು ತಮ್ಮ ವೀರಪ್ರತಾ ಪದಿಂದ ಕಾಶಿಯಲ್ಲಿ ಕೂಡಿದ ಅನೇಕ ಅರಸುಮಕ್ಕಳುಗಳೆದುರಿಗೆ ರಾಜಕ ವೈ ಯನ್ನ ತೆಗೆದುಕೊಂಡು ಬಂದರು ರುಕ್ಕಿಣಿಯ ಚರಿತ್ರೆಯು ತಮಗೆ ಗೊತ್ತಿದೆ ಈ ಸಂಕಟದೊಳಗಿಂದ ಪಾರುಮಾಡುವ ನರಪುಂಗವರು ತಾವು ಬಬ್ಬರೆ ಎಂದು ತಮ್ಮನ್ನು ಮನಸಿನಿಂದ ಈಗಲೆ ವರಸಿರುತ್ತೇನೆ, ಅದಕ್ಕೂ ಸ್ಕರ ಉಪಾಧ್ಯಾಯನೊಡನೆ ಒಂದು ಮುತ್ತಿನ ಹಾರವನ್ನು ಕಳಿಸಿರು ತೇನೆ. ಅದನ್ನು ಸ್ವೀಕರಿಸಬೇಕು ರಾಜಧರ್ಮವನ್ನು ಪಾಲಿಸುವದು ತಮ್ಮ ಧರ್ಮವು, ಒಂದುವೇಳೆ ದಿಲ್ಲಿಗೆಹೋಗುವದಾದರೆ, ಮಾರ್ಗದಲ್ಲಿ ವಿಷ ತೆಗೆದುಕೊಂಡು ಸಾಯುತ್ತೇನೆ. "