ಪುಟ:ರಾಣಾ ರಾಜಾಸಿಂಹ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وده ಕಣಿವೆ ರಜಸಿಂಹ [ಪ್ರಕರಣ /s v vvvv \ \v/ v vv • • •v ೨೨ ನೆಯ ಪ್ರಕರಣ. ಒನ್ ಮದನೋತ್ಸವಕ್ಕೆ ಬದಲು ರಣೋತ್ಸವ ವಸಂತಋತುವಿನ ಕಡೆಯದಿವಸ, ಉದೇಪುರದಲ್ಲಿ ಮದನೋತ್ಸ ವವು ಒಳ್ಳೆ ಭರದಿಂದ ನಡೆದದೆ ಈ ಉತ್ಸವದಲ್ಲಿ ಆನಂದಭರಿತರಾದ ಸ್ತ್ರೀಪರುಷರು ಬೀದಿಗಳಲ್ಲಿ, ಘಾಟಿನಲ್ಲಿ, ಉದ್ಯಾನದಲ್ಲಿ, ಒಟ್ಟು ಗೂಡು ತಿರುವರು. ರಜಪೂತಸ್ತ್ರೀಯರು ನಾನಾಲಂಕಾರಗಳಿಂದ ಭೂಷಿತರಾಗಿ ತಲೆಯಲ್ಲಿ ಹೂವುಗಳನ್ನು ಮುಡಿದುಕೊಂಡು ಉಲ್ಲಾಸದಿಂದ ಅತ್ತಿತ್ತ ಅಲೆಯುತ್ತಿರುವರು. ಇಂಧ ಸಮಯದಲ್ಲಿ ಒಂದು ಉದ್ಯಾನದಲ್ಲಿ ರಜ ಪೂತರು ಮೆಲ್ಲ ಮೆಲ್ಲನೆ ಕೊಡುತ್ತಿದ್ದರು ಸ್ವಲ್ಪ ಹೊತ್ತಿನಲ್ಲಿ ಉದ್ಯಾನ ವೆಲ್ಲವೂ ತುಂಬಿಹೋಯಿತು. ಜನರದಟ್ಟಣೆಯ ಬಲವಾಯಿತು ಆವ ರೆಲ್ಲರೂ ಸ್ತಬ್ಧರಾಗಿ ಯಾರದೋ ಮಾರ್ಗವನ್ನು ನಿರೀಕ್ಷಿಸುತ್ತಿದ್ದರು ಇಷ್ಟರಲ್ಲಿ ಮಹಾರಾಣಾ ರಾಜಸಿಂಹನೂ ಹಾಗೂವೀರಸಿಂಹನೂ ಅಲ್ಲಿಗೆ ಬಂದರು. ಅವರು ಬಂದೊಡನೆ ಎಲ್ಲರು ಚಕಿತರಾದರು. ಆಮೇಲೆ ಎಲ್ಲರೂ ಘಟ್ಟಿಯಾಗಿ- ಮಹಾರಾಣಾಜೆಯವರೆ, ಭರತಖಂದ ವನ್ನು ಯವನ ಬಾಧೆಯಿಂದ ಬಿಡಿಸುವವರೆಗೆ ನಾವು ಮದನೋತ್ಸವವನ್ನು ಮಾಡಲಿಕ್ಕಿಲ್ಲ, ನಮ್ಮ ಮೈಯ್ಯಲ್ಲಿ ಸಾಮರ್ಧ್ಯವಿಲ್ಲದಿದ್ದರೆ ಮಾತ್ರ ಜಝಯಾ ತರಿಗೆಯನ್ನು ಕೊಡುತ್ತೇವೆ. ನಮ್ಮ ಪರಮಪೂಜ್ಯರಾದ ಗೋಮಾತೆಯ ವಧೆಯನ್ನು ನಾವು ಬದುಕಿರುವಾಗ ಎಂದೂ ಮಾಡಗೊ ಡಲಿಕ್ಕಿಲ್ಲ ನಮ್ಮ ಯುದ್ಧದ ಸಿದ್ಧತೆಯನ್ನು ಮಾಡಿಕೊಳ್ಳೋಣ, ನಾವು ಗೆಲ್ಲಲಿ, ಸಾಯಲಿ, ಯವನರ ಶಾಸನಮಾಡಿದ ಹೊರ್ಸು ಮದನೋತ್ಸವ ವನ್ನು ಮಾಡಲಿಕ್ಕಿಲ್ಲ. ಇದೇ ನಮ್ಮೆಲ್ಲರ ಪ್ರತಿಜ್ಞೆಯು, ” ಎಂದು ಹೇಳಿದರು.