ಪುಟ:ರಾಣಾ ರಾಜಾಸಿಂಹ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫] ಉದೇಪುರದ ಬೇಗಮ್ಮಳು ರಾಣಾನ ವಶದಲ್ಲಿ ೧೩೯ Shwwwಿ འ་གམ བ ལས་འགན་ངག་ ೨೫ ನೆಯ ಪ್ರಕರಣ, ಉದೇಪುರದ ಬೇಗಮ್ಮಳು ರಾಣಾನ ವಶದಲ್ಲಿ - ಅಕಬರಶಹನನ್ನು ಮುಂದಕ್ಕೆ ಕಳಿಸಿ ಬಾದಶಹನು ಉದಯಸಾ ಗರದ ದಂಡೆಯಮೇಲೆ ತನ್ನ ಛಾವಣಿಯನ್ನು ಹಾಕಿಕೊಂಡಿದ್ದನೆಂದು ವಾಚಕರಿಗೆ ಗೊತ್ತಿರಬಹುದು, ಮೊಗಲರ ಛಾವಣಿಯು ದೊಡ್ಡದೊಂದು ಶಹರದಂತೆ ಕಂಡುಬರುತ್ತಿತ್ತು. ಅಸಂಖ್ಯ ಡೇರೆಗಳು ಅಲ್ಲಲ್ಲಿಗೆ ಸುಶೋಭಿತ ವಾಗಿದ್ದವು, ಬಾದಶಹನ ಸುಖೋಪಭೋಗಕ್ಕೆ ಇಲ್ಲಿಯ ದಿಲ್ಲಿಯಂತೆ ಎಲ್ಲ ವೂ ಅಣಿಯಾಗಿತ್ತು ಆತನ ಡೇರೆಯ ಶೃಂಗಾರವು ಆಮೌಲ್ಯವಾ ದದ್ದು. ಡೇರೆಯು ಜರತಾರಿಯ ವಸ್ತ್ರದಿಂದ ಮಾಡಿತ್ತು, ಕಬ್ಬಿಣ ಹಿತ್ತಾ ಳಿಗಳ ಬದಲು ಬೆಳ್ಳಿಯನ್ನೇ ಉಪಯೋಗಿಸಿದ್ದರೂ ಒಳಮಗ್ಗಲಿರುವ ಗೋಡೆಗಳು ಕಿನಕಾಪಿನಿಂದ ಮುಚ್ಚಿ ಹೋಗಿದ್ದವು. ಒಳಗೆ ಬೇರೆಬೇರೆ ಕೋಣೆಗಳಾಗಿ ವಿಭಾಗಿಸಲ್ಪಟ್ಟಿತ್ತು ದರಬಾರಮಾಡುವ ಸ್ಥಳದಲ್ಲಿ ರತ್ನ ಖಚಿತವಾದದ್ದೊಂದು ಸಿಂಹಾಸನವು, ಡೇರೆಯ ಎದ,ರಿಗೆ ದೊಡ್ಡದೊಂದು ಮಹಾದ್ವಾರ, ನಾಲ್ಕಮಗ್ಗಲು ಹತ್ಯಾರಬಂದ ತಾರ್ತರಸ್ತ್ರೀಯರ ಸಹ ರೆಯು ಬಾದಶಹನ ಡೇರೆಯ ಹಿಂದೆ ಅಮಾರ ಉಮರಾವಗಳ ಸಾಲು ಗಳು, ನೋಡುವುದಕ್ಕೆ ಬಹು ಮನೋಹರವಾಗಿತ್ತು, ಡೇರೆಯ ಸುತ್ತಲೂ ದಿಲ್ಲಿಯ ಚೌಕಿಯಲ್ಲಿರುವಂತೆ ಅಂಗಡಿಗಳು ಬಾದಶಹನ ಆಗಮನದಿಂದ ಉದಯಸಾಗರದ ಮೇಲೆ ಹೊಸದೊಂದು ಶಹರವು ಹುಟ್ಟಿದಂತೆ ಕಂಡು ಬರುತ್ತಿತ್ತು. ಬಾದಶಹನು ದಿಲ್ಲಿಯಿಂದ ಹೊರಗೆ ಹೊರಟ ಸರತಿಗೊಮ್ಮೆ ಆತನ ಜನಾನಖಾನೆಯ ಸಂಗಡ ಇರುತ್ತಿತ್ತು, ಈಸಾರೆಯಾದರೂ ಎಲ್ಲಾ