ಪುಟ:ರಾಣಾ ರಾಜಾಸಿಂಹ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨] ರಾಜಸಿಂಹನ ಸಹಾಯ ೧೬೯

  • vvv

• • • ಯಾಕಂದರೆ ಉದೇಪುರದ ರಾಣಾನು ರಜಪೂತ ಕುಲದಲ್ಲಿ ಮುಖ್ಯನೆಂದು ಎಣಿ ಸುತ್ತಿದ್ದರು ಆದರೆ ಆತನು ಕಾಣಿಕೆಯನ್ನು ತಕ್ಕೊಳ್ಳದೆ-" ಈ ನಿಮ್ಮ ಕಾಣಿಕೆಯನ್ನು ತಕ್ಕೊಳ್ಳಲಿಕ್ಕೆ ಬಾದಶಹನೆ ಯೋಗ್ಯನು ಎಂದು ಹೇಳಿದನು ವಿಕ್ರಮಸಿಂಹಈವರೆಗೆ ಆ ಮಾತು ಆಯಿತು ಅಕಾ ಲವು ಹೋಯಿತು ಇನ್ನು ಮೇಲೆ ರಾಣಾರಾಜಸಿಂಹನ ಶರೀರದಲ್ಲಿ ಜೀವವಿರುವವರೆಗೆ ಯಾವ ರಜಪೂತನೂ ಬಾದಶಹನಿಗೆ ಕಾಣಿಕೆಯನ್ನು ಕೊಡಲಿಕ್ಕಿಲ್ಲ ಮಹಾರಾಜರೇ ನನ್ನನ್ನು ಕ್ಷಮಿಸಿರಿ ನಾನು ಪತ್ರ ಒರದು ತಪ್ಪು ಮಾಡಿದೆನು ತಾವು ಒಬ್ಬರೇ ಮೊಗಲರನ್ನು ಶಾಸನ ಮಾಡಿದ್ದನ್ನು ಕಂಡು ನನಗೆ ನಾಚಿಕೆಯನಿಸುತ್ತದೆ ಯಾವತ್ತು ರಜ ಪೂತರು ನಿಮ್ಮ ಧ್ವಜದ ನರಳಿನಲ್ಲಿ ನಿಂತು ಕಾದುವದಕ್ಕೆ ಸಿದ್ಧರಾದರೆ ಮೊಗಲಬಾದಶಹನು ಹೇಳಹಸರಿಲ್ಲದಂತಾಗುವನು ಮತ್ತು ನಮ್ಮ ಬಿಳಕೂದಲುಗಳಿಗ ಕಲಂಕ ಬರುವ ಪ್ರಸಂಗವೂ ನಮ್ಮ ಮೇಲೆ ಬರುವ ದಿಲ್ಲ, ನಾನು ನಿಮಗೆ ಬರೇ ಕಾಣಿಕೆಯನ್ನಷ್ಟೇ ಕೊಡಬೇಕೆಂದು ಬಂದ ವನಲ್ಲ, ನನ್ನ ಪತ್ರದ ಕಡೆಯ ವಾಕ್ಯವು ತಮ್ಮ ಸ್ಮರಣೆಯಲ್ಲಿರಬಹುದು. ಅದನ್ನು ನಿಶ್ಚಯಗೊಳಿಸುವದಕ್ಕಾಗಿಯ ಈ ನನ್ನ ಎರಡು ಸಾರ ಸವಾ ರರನ್ನೂ ಈ ನನ್ನ ಕತ್ತಿಯನ್ನೂ ತಮಗೆ ಅರ್ಪಿಸುವದಕ್ಕೆ ಬಂದಿದ್ದೇನೆ. ಈ ವಪ್ಪಿನ ಹಸ್ತದಲ್ಲಿ ಉಳಿದಿರುವ ಸ್ವಲ್ಪ ಶಕ್ತಿಯನ್ನು ತಮ್ಮ ಬೇಕಾದ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬೇಕೆಂಬದೇ ನನ್ನ ಬಯಕೆಯು ? ವಿಕ್ರಮಸಿಂಹನ ಈ ಮಾತುಗಳನ್ನು ಕೇಳಿ ರಾಜಸಿಂಹನಿಗೆ ಅತ್ಯಂತ ಅನಂದವಾಯಿತು ಅದಕ್ಕೆ ರಾಜಸಿಂಹನು- ನೀವು ಈ ವರೆಗೆ ಮಾತಾಡಿದ್ದು, ಸೋಳಂಜೆವಂಶಕ್ಕೆ ಭೂಷಣವಾದದ್ದು ಮೊಗಲರು ತಹವನ್ನು ಮುರಿದಿರುತ್ತಾರೆ. ಶಹಾಬಾದಾ ಅಕಬರಲಿಹನನ್ನು ಬಿಡುಗಡ ಮಾಡಿ ಕೊಳ್ಳುವದಕ್ಕೆ ಬರುತ್ತಿರುವರು. ಅವರು ಅಲ್ಲಿಗೆ ಒಂದು ವೇಳೆ ಮುಟ್ಟಿದರೆ, ಕುಮರಜಯಸಿಂಹನಿಗೆ ಬಹಳ ಸಂಕಟ ಬರುವದು ನಾನು