ಪುಟ:ರಾಣಾ ರಾಜಾಸಿಂಹ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಪರ್ಣಕುಟೀರದ ರಹಸ್ಯ ೬೧ ಶಿವು- ಇದರೊಳಗೆ ಸಂಶಯವೇನು? ಆದರೆ !” ಇಷ್ಟು ಮಾತಾಡಿ ಸುಮ್ಮನಾದನು, ಆತನ ಲಕ್ಷವು ಭೀಮನ ಮುಖದಕಡೆಗೆ ಹೋಯಿತು. ಆವೇಳೆಯಲ್ಲಿ ಭೀಮನ ಕಣ್ಣುಗಳು ನೀರಶ್ರೀಯಿಂದ ಆರಕ್ತ ವಾಗಿದ್ದವು. ಬಾಹುಗಳು ಸ್ಪುರಿಸುತ್ತಿದ್ದವು ಇದನ್ನು ನೋಡಿ ಶೀವುನು ಸುಮ್ಮನಾಗಿದ್ದನು ಆತನು ಸುಮ್ಮನಾದದ್ದು ಕಂಡು ಭೀಮ ನು- ಆದರೆ ಎಂದು ಸುಮ್ಮನೆ ನಿಂತಿರುವಿಯೇಕೆ? ಹುಟ್ಟಿದವರಿಗೆ ಮರಣವು ಒಂದು ದಿವಸ ಇದ್ದೇಇದೆ. ಹಿಂದೂಧರ್ಮವನ್ನು ಮೊಗಲರ ಕೈಯಿಂದ ರಕ್ಷಿಸುವದಕ್ಕಾಗಿಯೂ ಪರಮಪ್ರತಾಪರಾದ ರಾಣಿಯವರ ಬಯಕೆಯನ್ನು ಪೂರ್ಣ ಮಾಡುವದಕ್ಕಾಗಿಯ ಮೊಗಲರೊಡನೆ ಯುದ್ಧ ಮಾಡುವ ಪ್ರಸಂಗವು ಒದಗಿದರೆ ಅದಕ್ಕಿಂತಲೂ ಹೆಚ್ಚಿನ ಹರ್ಷಾ ತಿರೇಕವು ಬೇರೆಯಾವದು ? ಈ ಸಮಯದಲ್ಲಿ ಯಾರು ಹಿಂಜರಿಯು ವರೋ ಅವರೇ ಹೇಡಿಗಳು, ಮರ್ಖರು.” ಶಿವ-« ನಿನ್ನಂಧ ಧರ್ಮಭಕ್ತರು ದೊರೆಯುವದು ದುರ್ಲಭ. ಈಶ್ವರನು ನಿನ್ನನ್ನು ದೀರ್ಘಾಯುವನ್ನಾಗಿ ಮಾಡಲಿ ಆದರೆ ನಾಳ ನಮ್ಮ ರಾಣಿಯವರೂ ಅವರಿಗೆ ನೆರವಾಗಲೊಪ್ಪಿದ ವೀರರೂ ಕೂಡಿ ಕಡೆಯ ಪ್ರತಿಜ್ಞೆಯನ್ನು ಮಾಡುವರಲ್ಲವೆ? ?” ಭೀಮ-« ಹೌದು, ನಾನೂ ಹಾಗೆ ಕೇಳಿರುವೆನು ಆದರೆ ನಾವು ನಮ್ಮ ಹೊತ್ತು ಬರುವವರೆಗೂ ಆ ಮಹೋತ್ಸವವನ್ನು ಕಾಣುವ ದಿಲ್ಲ. ಬಾಗಿಲನ್ನು ಸರಿಯಾಗಿ ಮುಚ್ಚು ಪೂಜ್ಯರಾದ ಗುರುವರ್ಯ ಪರಮಹಂಸರು ವೀರರಸ ಸಂಯುಕ್ತವಾದ ಪದ್ಯವನ್ನು ನಾಳೆಗೋಸುಗ ಸಂಗೀತದಧಾಟಿಗೆ ಹಚ್ಚುತ್ತಿರುವರು. ಅಲ್ಲಿಗೆ ಹೋಗಿ ಅದನ್ನು ಕೇಳೋಣ ನಡೆ, ೨) ತಾಯಿ