ಪುಟ:ರಾಣಾ ರಾಜಾಸಿಂಹ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಧರ್ಮೋದ್ದಾರರಾದ ವೀರರ ಗುಪ್ತ ಸಂಘ ೭೭ ಅಭೀಷ್ಟಪ್ರಿಯರಾದ ಮಹಾರಾಣಿಯವರ ಆಜ್ಞೆಯನ್ನು ಮನ್ನಿಸುವದರಲ್ಲಿ ತತ್ಪರನಿರುತ್ತೇನೆ, ಮತ್ತೂ ನಿಮ್ಮಲ್ಲಿ ಯಾರೂ ಇವರ ವಿರುದ್ಧ ಹೋಗ ಲಿಕ್ಕೆಲ್ಲೆಂದು ನಾನು ತಿಳಿಯುತ್ತೇನೆ ” ಪರಮಹಂಸನ ಈ ಮಾತು ಮುಗಿಯುವದರೊಳಗಾಗಿ ಆವರಣದಿಂದ ಅಚ್ಛಾದಿತ ವೀರರು • ಯಾರೂ ವಿರುದ್ಧ ಹೋಗುವದಿಲ್ಲ ” ವೆಂದು ಒಟ್ಟಾಗಿ ಹೇಳಿದರು. ಇದನ್ನು ಕೇಳಿ ಪರಮಹಂಸನು ಪುನಃ ಉತ್ಸಾಹಪೂರ್ವಕವಾಗಿ • ವೀರರೆ, ತಮ್ಮೆಲ್ಲರ ಏಕಮತವನ್ನು ಕೇಳಿ ಅತ್ಯಾನಂದವಾಯಿತು ಕೃಪಾಪೂ ರ್ಣಳಾದ ತಾಯಿಯ ಕಟಾಕ್ಷದಿಂದ ನಮ್ಮ ಅಭಿಲಾಷೆಯು ಅವಶ್ಯವಾಗಿ ಪೂರ್ಣವಾಗುವದೆಂದು ನನಗೆ ನಂಬುಗೆಯಿದೆ ಮತ್ತು ಆರ್ಯರ ವಿಜಯ ಪತಾಕೆಯು ಪುನಃ ಭಾರತಭೂಮಿಯಲ್ಲಿ ಮೆರೆಯಬಹುದು. ನಿಮ್ಮಂಥ ವೀರರ ಸಹಾಯದಿಂದ ನಮ್ಮ ಮಾತೃಭೂಮಿಯು ದುರಾತ್ಮರೂ ದುರಾ ಚಾರಿಗಳೂ ದುಷ್ಕರೂ ಆದ ಮೊಗಲರ ಕೈಯೊಳಗಿಂದ ತೀವ್ರವೇ ಮುಕ್ತ ತೆಯನ್ನು ಹೊಂದುವದೆಂಬದು ನನಗೆ ನಿಶ್ಚಯವೆನಿಸುತ್ತದೆ. " ಕೂಡಲೆ ಯಾವತ್ತು ವೀರರು “ ಗುರುಗಳೇ, ಈಶ್ವರನು ಆರ್ಯ ಧರ್ಮದ್ವೇಷಿಗ ಳಾದ ಯವನರ ಕೈಯೊಳಗಿಂದ ತೀವ್ರವೇ ಈ ನಮ್ಮ ಮಾತೃಭೂಮಿ ಯನ್ನು ಬಿಡುಗಡೆ ಮಾಡಿಸುವನು. ” ಎಂದು ಒಳ್ಳೆ ಆವೇಶದಿಂದ ಹೇಳಿ ದರು. ಅನಂತರ ಪಸನು ರಾಣಿಯವರ ಕಡೆಗೆ ತಿರುಗಿ “ ಮಹಾ ರಾಣಿಯವರೆ, ತಮ್ಮ ಅಪ್ಪಣೆಯೇನಿರುವದೆಂಬುದನ್ನು ಹೇಳಿದರೆ ನಾವೆ ಆರು ನೆರವೇರಿಸಲಿಕ್ಕೆ ತತ್ಪರರಿರುತ್ತೇವೆ” ಎಂದನು. ರಾಣಿ:_“ ಪಿತಾಜಿ, ಈಗ ಎರಡನೆಯ ಯಾವ ಕೆಲಸವೂ ಇಲ್ಲ, ಆದರೆ ವೃತವನ್ನು ಪಾಲಿಸಲಿಕ್ಕೆ ಪ್ರತಿಯೊಬ್ಬರೂ ಪ್ರತಿಜ್ಞೆಯನ್ನು ಮಾಡಬೇಕು.” ಕೂಡಲೆ ಪರಮಹಂಸನು, ನಾಲ್ಕು ಜನ ಆವರಣದವರಿಗೆ ಸನ್ನೆ ಯನ್ನು ಮಾಡಿದನು, ಆಮೇಲೆ ಅವರು ಸ್ವಲ್ಪ ಹೊತ್ತಿನಲ್ಲಿ ಎರಡು ದೊಡ್ಡ ದೊಡ್ಡ ಪೆಟ್ಟಿಗೆಗಳನ್ನು ತಂದು ಇಟ್ಟರು. ಅವುಗಳನ್ನು