ಪುಟ:ರಾಣಾ ರಾಜಾಸಿಂಹ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ರಾಣಾ ರಾಜಸಿಂಹ [ಪಕರಣ wn~ ~ ~ ~ www.mv ver www ww M + vhh M ಸಿಂಹಾಸನದ ಹತ್ತರ ಇಟ್ಟ ಮೇಲೆ ಅವುಗಳ ಬಾಯಿ ತೆರೆದು ಯಾವತ್ತು ವೀರರ ಕಡೆಗೆ ತಿರುಗಿ« ಧರ್ಮೊದ್ದಾರದ ಪವಿತ್ರ ಕಾರ್ಯವನ್ನು ಮಾಡುವದಕ್ಕೆ ನಡಕಟ್ಟುವ ಪೂರ್ವದಲ್ಲಿ ಮಹಾರಾಣಿಯವರ ಅಪ್ಪಣೆ ಯಂತೆ ನೀವೆಲ್ಲರು ಪ್ರತಿಜ್ಞೆ ಮಾಡಲಿಕ್ಕೆ ಸಿದ್ಧರಿರುವಿರೋ ? " • ನಾವೆಲ್ಲರೂ ಸಿದ್ಧರಿದ್ದೇವೆ ಬೇಕಾದ ಪ್ರತಿಜ್ಞೆಯನ್ನು ಮಾಡಲಿಕ್ಕೆ ಹೇಳಿರಿ” ಈ ತರದ ಧೀರೋದಾತ್ತವಾದ ಗಂಭೀರಧ್ವನಿಯು ದಿವಾಣ ಖಾನೆಯಲ್ಲೆಲ್ಲ ತುಂಬಿ ಹೋಯಿತು “ ಹಾಗಾದರೆ ಕೇಳಿರಿ-ಈ ಹೊತ್ತು ಇಲ್ಲಿಯ ಕಾರ್ಯಸಾಧನ ಕ್ಲೋಸುಗ ಆರ್ಯಧರ್ಮದ ವಿಜಯಕ್ಕೋಸುಗ, ಆರ್ಯಧರ್ಮದ ದ್ವೇಷಿಗಳಾದ ಮೊಗಲರ ನಾಶಕ್ಕಾಗಿ ಎಂದೂ ಹಿಂಜರಿಯುದಿಲ್ಲ ವೆಂದು ನಾನು ಪ್ರತಿಜ್ಞೆ ಮಾಡುತ್ತೇನೆ ನನ್ನ೦ತ ನೀವೂ ಪ್ರತಿಜ್ಞಾ ಬದ್ದರಾ ಗಿರಿ.” ಎಂದು ಹೇಳಿದ ಮೇಲೆ ಎಲ್ಲರೂ ಆ ಪೆಟ್ಟಿಗೆಯಲ್ಲಿದ್ದ ಶವದ ಮೇಲೆ ಕೈ ಇಟ್ಟು ಪ್ರತಿಜ್ಞೆಯನ್ನು, ಮಾಡಿದರು. ಪ್ರತಿಜ್ಞೆ ಮಾಡಿದ ಮೇಲೆ ರಾಣಿಯ ಆವರಣವನ್ನು ತೆಗೆದಳು. ಸಂಗಡಲೇ ಯಾವತ್ತು ವೀರರು ತಮ್ಮ ಮುಖಗಳ ಮೇಲಿನ ಆವರಣವನ್ನು ತೆಗೆದುಹಾಕಿದರು. ಆವರಣವನ್ನು ತೆಗೆದೊಡನೆಯೆ ತರುಣಿಯ ಅವರ್ಣನೀಯವಾದ ಸುಂದರ ಮುಖವು ಎಲ್ಲರಿಗೂ ತೋರಹತ್ತಿತು ಆಕೆಯ ಅಪೂರ್ವ ಸೌಂದರ್ಯವನ್ನು ನೋಡಿ ಎಲ್ಲರೂ ಬೆರಗಾದರು, ವೀರಸಿಂಹ, ಪ್ರತಾ ಪಸಿಂಹರಿಗಂತೂ ಪರಮಾನಂದವಾಯಿತು. ಇಂಧ ಆಲೌಕಿಕ ರಮಣೀ ರತ್ನವು ತಮ್ಮಿಂದ ರಕ್ಷಿತವಾಯಿತೆಂದು ಅವರು ಅಭಿಮಾನವನ್ನು ತಾಳಿ ದರು. ವಾಚಕರಿಗೆ ಈ ಕರುಣಿಯ ಯಾರೆಂಬದನ್ನು ಹೇಳಲವಶ್ಯ ಕತೆ ಇಲ್ಲ ಯಮುನಾನದಿಯಲ್ಲಿ ಹಾರಿಕೊಂಡು ಪ್ರಾಣವನ್ನು ಕಳ ಕೊಳ್ಳಲಪೇಕ್ಷಿಸಿದ ತರುಣಿಯೆ ಇವಳು, ಹುಸೇನಖಾನನ ತಾಮಸಕ್ಕೆ ಬಲಿಯಾಗಿ ವೀರಪ್ರತಾಪದಿಂದ ರಕ್ಷಿಸಲ್ಪಟ್ಟ ಮನೋಹರಿಯೆ ಈ ರಾಣಿಯು.