ಪುಟ:ರಾಣಾ ರಾಜಾಸಿಂಹ.djvu/೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧] ಮಧ್ಯದಲ್ಲಿ ಏನಾಯಿತು? ೮೩ 11 1 1 1 1 1 1 1 1 1 ದನು ಮೂರನೆಯವನು ಕಳವಿನ ಒಡವೆಗಳನ್ನು ಪರೀಕ್ಷಿಸಹತ್ತಿದನು. ಆಮೇಲೆ ನಾಲ್ವರು ಒಂದೇ ಸ್ಥಳದಲ್ಲಿ ಒಟ್ಟಾದರು, ಐದು ಮೊಹರುಗ ಳಲ್ಲಿ ಮೊದಲು ತಲೆಗೆ ಒಂದೊಂದರಂತೆ ತೆಗೆದುಕೊಂಡರು. ಆಮೇಲೆ ಉಳಿದದ್ದೊಂದನ್ನು ನಾಲ್ಕು ತುಂಡುಮಾಡಿ ತಕ್ಕೊಂಡರು, ಹಾರವನ್ನು ಹರಿಯುವದು ಪಾಪದ ಕರ್ಮವೆಂದೂ ಮುತ್ತುಗಳೊಂದೊಂದನ್ನು ಅಗ ಲಿಸ ಕೂಡದೆಂದೂ ಒಟ್ಟಾಗಿ ಮಾರುವಂತೆ ನಿಶ್ಚಯಿಸಿ ಅದನ್ನು ಜಯಸಿ೦ ಹನ ಕಡೆಗೆ ಇಟ್ಟು ಬಿಟ್ಟರು ಎರಡು ಪತ್ರಗಳು ಉಳಿದಿದ್ದವು, ಅವು ಗಳ ವ್ಯವಸ್ಥೆಯನ್ನು ಯಾವರೀತಿಯಿಂದ ಮಾಡಬೇಕೆಂಬ ಚಿಂತೆಯು ಬಲವತ್ತರವಾಯಿತು CC ಜಯಸಿಂಹ, ಈ ಪತ್ರವನ್ನು ಸುಟ್ಟು ಹಾಕಿ ಬಿಡು, ” ಎಂದು ತಲೆನಾಯಕನು ಹೇಳಿದನು ಜಯಸಿಂಹನು ಯಾರ ಹೆಸರಿನ ಕಾಗದಗಳೆಂದು ನೋಡಹತ್ತಿದನು, ಅವರಲ್ಲಿ ಅವನೊಬ್ಬನೆ ಪಂಡಿ ತನು. ಎರಡೂ ಕಾಗದಗಳನ್ನು ಒಂದಾವರ್ತಿ ಓದಿ ಮುಗಿಸಿದನು. ಅತಿಶಯ ಆನಂದನೆನಿಸಿತು ಸುಡುವದಕ್ಕಿಂತ ಇವುಗಳಿಂದ ವಿಶೇಷ ಲಾಭ ಮಾಡಿಕೊಳ್ಳಬಹುದೆಂದನು ಲಾಭವೆಂಬ ಶಬ್ದವು ಕಿವಿಗೆ ಬಿದ್ದೊಡನೆಯೆ ಪತ್ರಾಭಿಪ್ರಾಯ ವನ್ನು ತಿಳಿಯುವ ಉತ್ಸಹವು ಎಲ್ಲರಿಗೂ ಹೆಚ್ಚಾಯಿತು. ಕೇಳುವ ಲವ ಲವಿಕೆಯು ಹೆಚ್ಚಾಗಿ ಎಲ್ಲರೂ ಆತನ ಸುತ್ತು ಮುತ್ತು ನೆರೆದರು ಜಯ ಸಿಂಹನು ಚಂಚಲ ಕುಮಾರಿಯ ಎಲ್ಲ ಸಂಗತಿಯನ್ನು ತಿಳಿಸಿದನು. ಈ ಪತ್ರವನ್ನು ಒಯ್ದು ರಾಣಾನಿಗೆ ಕೊಟ್ಟು ಬಹುಮಾನವನ್ನು ಪಡೆಯ ಬಹುದೆಂದು ಅವರ ಮುಖ್ಯಸ್ತನು ಅದನ್ನು ಕೇಳಿ_“ ಛಿ, ಮೂರ್ಖಾ ಅದನ್ನು ರಾಣಾನಿಗೆ ಕೊಡುವದರಿಂದ ಪ್ರಯೋಜನವಿಲ್ಲ, ವಿಚಾರಿಸಿ ನೋಡು ನಮ್ಮ ಕಳವು ಗೊತ್ತಾದರೆ ನಾವೆಲ್ಲರು ಹಾಳಾಗುವೆವು. ಆದ್ದರಿಂದ ಈ ಸಂಗತಿಯನ್ನು ರಾಣಾನಿಗೆ ಹೇಳುವದಕ್ಕಿಂತ ಬಾದಶಹನಿಗೆ ಹೇಳಿದರೆ ಚನ್ನಾಗಿ ಪರಾಮರಿಕೆಯಾಗಬಹುದು, ಇಂಧ ಸಂಗತಿಗಳನ್ನು ಹೇಳಿ ಎಷ್ಟೋ ಜನರು ಬಾದಶಹನಿಂದ ಬಹುಮಾನ ಹೊಂದಿದ್ದಾರೆ. ಮತ್ತು