ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


೧೪
ರಾಮಚಂದ್ರ ಚರಿತಪುರಾಣಂ

ಆತನಿಂ ಬಳಿಯಮಾರನೆಯ ಕುಲಧರಂ ಸೀಮಂಧರನೆಂಬಂ--

ಕ೦||ಕಲುಷಾಂಧರ್ ಸುರತರು ಸಂ
ಕುಲಮೆಮ್ಮವು ತಮ್ಮವೆಂದು ತಮ್ಮೊಳಗಾ‌ರ್ಯರ್||
ತಲೆಯೊತ್ತಿ ಕುಟ್ಟ ಪೊಯ್ವವ
ರಲವರಿಕೆಯೊಳಾದ ತೋಟಿಯಂ ತೊಲಗಿಸಿದ||೭೫||

ಆತನಿ೦ ಬಳಿಯಮೇಳಿನೆಯ ಕುಲಧರಂ ವಿಮ_________--
ಕಂ||ಅಡಿದಳಿರ್ಗೆ ಧರಾವಲಯಂ
ಕಡುವೆಟ್ಟತ್ತಾಗೆ ನಡೆಯಲರಿಯದೆ ಮನುಜರ್||
ಸೆಡೆಯ ಹಯಾದಿಗಳಿಂದಂ
ನಡೆಯಿಸಿದಂ ಕಲಿಸಿ ವಾಹನಾರೋಹಣಮಂ||೭೬||

ಆತನಿಂ ಬಳಿಯಮೆಂಟನೆಯ ಕುಲಧರಂ ಚಕ್ಷುಷ್ಮನೆಂಬನಂದಿನ ಮಿಥುನಂ
ಸುತಮುಖ ವಿಲೋಕನದಿನತಿ ಕುತೂಹಲವನಪ್ಪುಕೆಯ್ವುದುಂ--

__||ಸ್ರ||ಯುಗಳಂಗಳ್ಪುಟ್ವೆ, ಸೀ೦ತಾಗುಳಿಸಿ ಪಿತೃಯುಗಂ ಸತ್ತು ಸಗ್ಗ೦ಗಳೊಳ್ ಪು|
ಟ್ಟುಗುಮಿಲ್ಲಿಂ ಮುನ್ನಮಿತ್ತಲ್ ಕತಿಪಯ ದಿನದಿಂ ಮಕ್ಕಳಂ ನೋಡಿ ಸಾವೆ||
ಯ್ದುಗುಮೀಗಳ್ ಕರ್ಮಭೂಮಿಸ್ಥಿತಿ ಮೊಗಸಿದುದಿಂ ಬಾಲಕಾಲೋಕದಿಂದು
ಬೈಗಮಿಲ್ಲೆಂದಿ೦ತು ಕಾಲಸ್ಥಿತಿಯನವರ್ಗತಿ ವ್ಯಕ್ತಮಪ್ಪಂತು ಪೇಳ್ವಿಂ ||೭೭||
ಆತನಿಂ ಬಳಿಯಮೊಂಬತ್ತನೆಯ ಕುಲಧರಂ ಯಶಸ್ವಿಯೆಂಬಂ--

ಕಂ||ಅವರಿವರೆನ್ನದೆ ಮುನ್ನಾ
ರ್ಯವೆಸರ್‌ ಪೆಸರಾಗೆ ಬೇರೈವೇರಂದಿನ ಮಾ||
ನವರ್ಗೆ ಪೆಸರಿಟ್ಟು ನಾಮ
ವ್ಯವಸ್ಥೆಯಂ ಪಡೆದು ಮನುಗಳೊಳ್ ಪೆಸರ್ವಡೆದಂ||೭೮||

ಆತನಿ೦ ಬಳಿಯಂ ಪತ್ತನೆಯ ಕುಲಧರನಭಿಚಂದ್ರನೆಂಬನಾ ಕಾಲದೊಳ್--

ಕಂ||ಉಡುಪತಿಯುಮನುಡು ಗಣಮುಮ
ನೆಡೆಯುಡುಗದೆ ತೋಳಿ ತೋಳಿ ಕಿಳುಗೂಸುಗಳಂ||
ನುಡಿಗಲಿಸಿದಂ ತೊದಲ್ನುಡಿ
ಪಡೆವಿನೆಗಂ ಪಿತೃಯುಗಕ್ಕೆ ಕರ್ಣಾಮೃತಮಂ||೭೯||

ಆತನಿಂ ಬಳಿಯಂ ಪನ್ನೊಂದನೆಯ ಕುಲಧರಂ ಚ೦ದ್ರಾಭನೆಂಬಂ--


೧.ವೊತ್ತಗುಟ್ಟವೊಯ್ದವ, ಗ, ಘ,
೨.ದಚ್ಚಿಗ, ಚ.