ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೬

ರಾಮಚಂದ್ರಚರಿತಪುರಾಣಂ

ಯ ಮೊಗಸಾಲೆಯೊಳಿಕ್ಕಿದ ಮಣಿಮಯಾಸನಮನಲಂಕರಿಸಿ ಕರ್ಣಪೂರ ಪಾರಿಜಾತ
ಸ್ತಬಕ ಪರಿಮಳಕ್ಕೆಳಸಿ ಬಳಸುವೆಳದುಂಬಿಯ ಕಳರವಮನಾಲಿಸುತಿರ್ಪುದುಮಾ
ಸಮಯದೊಳ್---

ಮ|| ನಯನೋತ್ಸಾಹಮನಿತ್ತು ದೇಹ ರುಚಿಯಿಂದೆಯ್ತಂದನಾಕಾಶ ಗಂ।
      ಗೆಯ ನೀರಾನಿಸನೆಂಬಿನಂ ದಶರಥ ಕ್ಷೋಣೀಶನಾಸ್ಥಾನ ಭೂ||
      ಮಿಯನಾ ರದಮಾರ್ಗದಿಂದಿರಿದು ಸನ್ಮಾರ್ಗಕ್ಕೆ ಮೆಯ್ಯಾರದಿ
      ನಯಮಂ ಸಾರದನಾವ ಕಾಳೆಗದೊಳಂ ಕಣ್ಮರದಂ ನಾರದಂ||೧೮||

      ಕಂ|| ಬಿಸಸೂತ್ರದ ಕಟಸೂತ್ರಂ,
            ಪೊಸದುಗುಲದ ಕೋವಣಂ ಕಮಂಡಲು ರಾರಾ||
            ಜಿಸೆ ದಂಡಪಾಣಿ ಪೊಕ್ಕಂ
            ಕಿಸುರಳಿತಿಪಂ ಪಿಸುಣ ಪಸರಿಗಂ, ನೃಪಸಭೆಯಂ||೧೯||

      ಅ೦ತಾ ನಾರದಂ ನಭೋಮಂಡಲದಿ೦ ಸಭಾಮಂಡಲಕ್ಕವತರಿಸೆ---

      ಕಂ||ಇದಿರೆಳ್ದಿಚ್ಛಾಕಾರಮ
           ನುದಾತ್ತನೇನಿತ್ತು ಮಾಣ್ದನೇಕಾಂಚನ ಪೀ||
           ಠದೊಳಿರಿಸಿ ಮುಕುಳಿತಾಂಜಲಿ
           ಸದರ್ಭ ಸಾಕ್ಷತಮನರ್ಘ್ಯಪಾದ್ಯಮನಿತ್ತಂ||೨೦||

           ಬಂದ ಬರವಾವುದೀ ಬರ
           ವಿಂದಂ ಚರಿತಾರ್ಥನಾದೆನಾನೆಲ್ಲಿಂದಂ||
           ಬಂದಿರೆನೆ ನೃಪತಿ,ನಾರದ
           ನೆಂದಂ ದಶನಾಂಶು ಕೆದರೆಚಂದ್ರಾತಪಮಂ.||೨೧||

       ಆನೀ ಜಂಬೂದ್ವೀಪದ ಪೂರ್ವವಿದೇಹದ ಪುಂಡರೀಕಿಣೀಪುರದ ಸೀಮಂ
ಧರಸ್ವಾಮಿಗಳ ಪರಿನಿಷ್ಕ ಮಣ ಕಲ್ಯಾಣ ವಿಭೂತಿಯಂ ನೋಡಿ ಬಂದೆನೆಂದು ಸಭೆ
ಯಂ ಕಣ್ಸನ್ನೆಯಿಂ ತೊಲಗಿಸಿ ದಶರಥಂಗೆ ಕಟ್ಟಿಕಾಂತದೊಳಿಂತೆಂದಂ---

ಉ || ಲಂಕೆಗೆ ಪೋಗಿ ಶಾಂತಿ ಜಿನಭಕ್ತಿಯೊಳಾಂ ಸ್ಮರ ದಾನದಂತಿ ವ|
      ಜ್ರಾಂಕುಶ ದರ್ಶನ ಸ್ತವನದಿ೦ಚರಿತಾರ್ಥನೆನಾದೆನಾಗಿ ವೀ||
      ತಾಂಕುಶನಪ್ಪ ರಾವಣನೊಳಂ ನೆರೆದೀನುಡಿಗೇಳ್ದು ನಾಡೆಯುಂ|
      ಶಂಕೆಯೊಳೊಂದಿ ಬಂದೆನರಿಪಲ್ಬೆರತೇಂ ಪಿಆತೇ೦ ನಿಮಗಾ ಪ್ರಪಂಚಮಂ||೨೨||