ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೮

ರಾಮಚಂದ್ರಚರಿತಪುರಾಣಂ

ಬಾಲ ಮರಾಳಂಗಳುಂ, ಕಾಮಕಾಳೋರಗ ಲೇಖೆಯಂತೆ ನಿಮಿರ್ವ ನೀಲಮಣಿಸ್ತಂಭ
ದುನ್ಮುಖ ಮಯಾಖಲೇಖೆಯಂ ಕರ್ದು೦ಕುವ ದೀವದ ನವಿಲ್ಗಳುಂ, ಪಚ್ಚೆಯ ಜಗ
ಲಿಯ ಚೆಲ್ವಿಂಗೆ ಕಣ್ಣೆರವಿಯಾದಂತೆ ತೆರಂಬೊಳೆವ ದೀವದ ಹರಿಣಿಗಳ ಲೋಚನ ಪ್ರತಿಬಿಂಬಂಗಳುಂ, ಚಂದ್ರಾತಪಕ್ಕೆ ತನಿಗಂಪಾದಂತೆ ಚಂದ್ರಕಾಂತದ ಚಷಕ೦ಗ
ಳೊಳ್ ಮಗಮಗಿಸುವ ಚಂದನಕರ್ದಮಮುಂ, ಮಣಿಭಾಜನಂಗಳೊಳ್ ಕುಸುಮ
ಶರ ಕೃಶಾನುವಿನ ಪೊಗೆಯುಮುರಿಯುಮೆಂಬಂತೆ ಮೇಗೆ ನೆಗೆವ ಮರಿದುಂಬಿಯ
ಬಂಬಲಿಂದೆಸೆವ ಕುಂಕುಮಪಂಕಮು೦, ಕಂದರ್ಪ ಘಟಸರ್ಪದಂತೆ ಧೂಪಘಟದಿ ನೊಗೆವಗರುವಿನ ಪೊಗೆಯುಮತಿ ರಮಣೀಯಮಾಗೆ---

       ಕ೦|| ಪಳಿಕಿನ ಶುಕ್ತಿಕೆಯೊಳಕೆ ಕ
             ಣ್ಗೊಳಿಸುವ ಕತ್ತುರಿಯ ಕರ್ದಮಂ ಹಿಮಕರಮಂ||
             ಡಳದ ಕರೆಯಂತೆ ನಯನೋ
             ತ್ಪಳಮನಲರ್ಚಿದುದು ಸೌಧ ಶಯ್ಯಾಗೃಹದೊಳ್ ||೭೬||

ಚ|| ಉಗಿಬಗಿ ಮಾಡಿ ಧೂಪದ ಕವಲ್ವೊಗೆಯೊಳ್ ತನಿಗಂಪನುಂಡು ತ|
     ಣ್ಣಗೆ ತಣಿದೊಯ್ಯನೊಯ್ಯನಿದಿರುಂ ಬಳಿಯುಂ ನೆಗೆಯುತ್ತುಮಿರ್ಪ ತು೦||
     ಬಿಗಳಳಿಪಂ ಮನಕ್ಕೆ ತರಲಾರ್ತುವು ತದ್ಗೃಹದೇವತಾಜನಂ|
     ಸೊಗಯಿಸುವಿಂದ್ರನೀಲ ಮಣಿಯಿಂ ತಿರಿಕಲ ಳನಾಡುವಂತೆವೋಲ್||೭೭||

     ಅಂತು ಸೊಗಯಿಸುವ ಸೆಜ್ಜೆವನೆಯೊಳಪರಾಜಿತಾ ಮಹಾದೇವಿ ಸರೋವರ
ದೊಳಿರ್ಪ ಜಲದೇವತೆಯಂತೆ ವಿಲಾಸತಲ್ಪತಳದೊಳಿರ್ಪುದುಮಾಗಳುಪಚರಿತ ಗರ್ಭಾ
ಧಾನ ಮಂಗಳವಿಧಾನಂ ದಶರಥಮಹೀನಾಥಂ ನಿಜ ನಿರತಿಶಯರೂಪಂ ದರ್ಪಕನ ರೂಪದರ್ಪಮನದಿರ್ಪೆ ಭೂಷಣಮಯಾಖಲೇಖೆ ಚಿತ್ರಭಿತ್ತಿಗೆ ನಿರ್ವಾಣರೇಖೆ ಯೆನಿಸೆ ಚರಣ ನಖಕಿರಣದಿನುಪಹಾರ ಕುಸುಮಂಗಳಂ ದ್ವಿಗುಣಿಸುತ್ತುಮೊಳವುಗು
ವುದುಂ--

ಮ|| ಮದನಂ ಜೇವೊಡೆಗೆಯ್ದವೋಲ್ ಕನಕ ಕಾಂಚೀ ನಿಸ್ವನಂ ಪೊಣ್ಮೆ ಮೇ|
     ಲುದನೊಟ್ಟೈಸಿ ಕುಚ೦ ಕದಕ್ಕದಿಸೆಮುಗ್ಧಾಲೋಕನಂ ಲಜ್ಜೆಯ೦||
     ಪದೆಪಂ ಮುಂದಿಡೆ ಮೇರೆದಪ್ಪೆ ನಿಜಲಾವಣ್ಯಾರ್ಣವಂ ಭೂಭುಜ೦|
     ಗಿದಿರೆಳ್ದಿಳ್ ಸತಿ ಪುಷ್ಪಚಾಪ ಚತುರಂಗಂ ಮೀರಿ ಮೇಲೇಳ್ವಿವೋಲ್||೭೮||

     ಆಗಳರಸನರಸಿಯ ಮನಃಕುಮುದಿನಿಯಂ ಚತುರಪರಿಹಾಸ ವಚನಚಂದ್ರಿಕೆ
ಯಿಂದಲರ್ಚಿ--


೧:ಚಿತ್ರವನಿತೆಗೆ. ಚ.