ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೯

ತೃತೀಯಾಶ್ವಾಸಂ



       ಕ೦|| ಮರಕತಮಣಿ ಮುದ್ರಿಕೆಯಿಂ
             ನರೇಂದ್ರನಂಗನೆಯ ಕೋಮಳಾಂಗುಲಿಯನಲ೦||
             ಕರಿಸುವ ನೆವದಿ೦ ಮೆಲ್ಲನೆ
             ಬರೆ ತೆಗೆದುತ್ಸಂಗ ತಲ್ಪಮಂ ದಯೆಗೆಯ್ದಂ||೭೬||

ಅನಂತರಂ--

       ಕ೦|| ಓರೊರ್ವರ ತನಿಸೋ೦ಕಿ೦
             ದೋರೊರ್ವರ ಮೆಯ್ಯೊಳೊಗೆಯೆ ರೋಮಾಂಚ೦ ಶೃಂ||
             ಗಾರ ಸುಧಾರಸ ವಾರಿಧಿ
             ತೀರ ಲತಾದ್ರುಮದೊಳೊಗೆದ ಕೊನರೆಂಬಿನೆಗಂ||೮೦||

             * * * * * * * * * * *

       ಅಂತು ಸೂಳೆವಂದು ನಿದ್ರಾವಸರ ನಿಮಿಾಲಿತ ಲೋಚನೆಯಾಗಿ
 
       ಕಂ|| ದಾನ ದ್ವಿರದನಮಂ ಪಂ
             ಚಾನನಮಂ, ಚಂಡಭಾನುವಂ ಚಂದ್ರಮನಂ||
             ಮಾನಿನಿ ನಿಶಾವಸಾನದೊ
             ಳೀ ನಾಲ್ಕುಂ ಶುಭದಮಪ್ಪ ಕನಸಂ ಕಂಡಳ್||೮೧||

        ಆ ಸಮಯದೊಳ್ ನಿಜರಾಜಸದನ ಸರಸೀ ಸರೋಜ ರಜಮನೊಟ್ಟಿಕೊಂಡು
ಸುಳಿವ ಸುಪ್ರಭಾತ ಪ್ರಭಂಜನನುಂ, ಮದನ ಮದಕುಂಜರದ ಮಣಿಯೇರಂ
ಮೀರುವ ರಾಜಹಂಸ ಕೂಜಿತಮುಂ, ದಿನಮುಖ ದರ್ಶನಾತುರತೆಯಿಂ ಬರ್ಪ
ಸಂಧ್ಯಾದೇವತೆಯ ನೂಪುರನಿನದಮಂ ನೆನೆಯಿಸುವ ಚಂಚರೀಕದಿಂಚರಮುಂ,
ಉದಯನಗ ನಿಕುಂಜಮನೇರುವ ರವಿಯ ರಥಚಕ್ರಚೀತ್ಕಾರಮಂ ಚಲ್ಲವಾಡುವ ರಥಾಂಗರವಮುಂ, ನೈಯ್ದಿಲ್ಗೊಳದ ಸೊಬಗು ಸೊಪ್ಪಾಗೆ ಕಮಳಿನಿಗೆ ಪುಟ್ಟಿದಟ್ಟ ಹಾಸಮನುದಾಸೀನಂ ಮಾಳ್ಪಿ ಕೊಳರ್ವಕ್ಕಿಯ ಕಳಕಳಧ್ವನಿಯುಮನುಕೂಲಮಾಗೆ--
       
       ಕಂ|| ಮಂಗಳ ಪಾಠಕ ರವಮು೦
             ಮಂಗಳ ಗಾಯಿನಿಯ ಗೀತರವಮುಂ ಪರಿಚ||
             ರ್ಯಾ೦ಗನೆಯರ ನೂಪುರದ ರ
             ವಂಗಳುಮಿತ್ತುವು ಸುಖಪ್ರಬೋಧಮನಾಗಳ್||೮೨||

ಅಂತುಪ್ಪವಡಿಸಿ--


ಇಲ್ಲಿ ಗ್ರಂಥಪಾತವಾದಂತೆ ತೋರುತ್ತದೆ