ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ರಾಮಚಂದ್ರಚರಿತಪುರಾಣಂ

               ನಡೆಗಲ್ವಂದುಂ ಬಣ್ಣಿ೦
               ಕೊಡೆ ನೆಗೆದಪುದುರ್ವಿಯೆಂದು ವಾಸುಗಿ ಪಲವು೦||
               ಹೆಡೆಯಂ ಶಿಶುನಡೆವೆಡೆಯೊಳ್|
               ಪಡೆದಾಂತು ಸಹಸ್ರಫಣನೆನಲ್ ಪೆಸರ್ವಡೆದಂ||೧೯೬||

               ಮಣಿಯೇರಂ ಚೆಂಬೊನ್ನುಡೆ
               ಮಣಿಯುಲಿಗೆಲೆ ಗೆಲ್ಲ ನಂಗರುಚಿಯಿಂದೈರಾ
               ವಣಮಂ ಕುಮಾರ ಚೂಡಾ
               ಮಣಿ ಲಾಲಾಜಲದೊಳಂ ಚತುರ್ದ೦ತದೊಳಂ||೧೩೦||

               ಅಮೃತಾಂಶು ಪೆರ್ಚೆ ಪೆರ್ಚುವ
               ಸಮುದ್ರಮೆಂತಂತೆ ರಾಮಚಂದ್ರಂ ದಿವಸ||
               ಕ್ರಮದಿನಭಿವೃದ್ಧಿವೆತ್ತಾ
               ಕ್ರಮಿಸಿದನತಿಮುಗ್ಧಭಾವಮಂ ಶೈಶವಮಂ||೧೩೧||

         ಅ೦ತು ರಾಮಚಂದ್ರನಾದಿತ್ಯನಂತೆ ನಿತ್ಯೋದಯಮನಪ್ಪುಕೆಯ್ವುದುಂ--

         ಕಂ|| ಬಾಲತ್ವದೊಳಮುದಾತ್ತ ಗು
               ಣಾಲಯಮೆನಿಸಿದ ತನೂಜ ಮುಖಚಂದ್ರಮನಂ||
               ಲೀಲೆಯಿನೀಕ್ಷಿಸಿ ದಶರಥ
               ನೋಲಾಡಿದನಧಿಕ ರಾಗರಸ ವಾರಿಧಿಯೊಳ್||೧೩೨||

         ಅಂತು ಸಂತೋಷದ ಪರಮಪದಮನೆಯ್ದಿರ್ಪುದುಮದಲ್ಲದೆಯುಮಾ ಮಹೀ
ವಲ್ಲಭನ ಮೋಹವಲ್ಲರಿಗಳೇ ಪೂತುವೆಂಬಂತೆ ಪುಷ್ಪವತಿಯರಾಗಿ ನಾಲ್ಕು ನೀರ್ಮಿ೦ದು
ಬೆಳ್ವ ಸದನದ ಪೊಸದೇಸೆ ವಿಳಾಸಂಬಡೆಯೆ ಸೂಳ್ಗೆ ವಂದು ಶುಭಸ್ವಪ್ನ ದರ್ಶನಾ
ನಂತರಂ ಕೆಲವು ದಿವಸಮರ್ಪಿನಂ--

          ಕಂ|| ಕುಲದೋದವಿಂಗೀ ಸತಿಯರೆ
                ಕುಲದೇವತೆಯರ್ಕಳೆಂಬ ಬಗೆ ಪುಟ್ಟುವಿನಂ||
                ತಲೆದೋರೆ ಗರ್ಭಚಿಹ್ನಂ
                ತಲೆದೋರಿದುದವನಿಪತಿಗೆ ರಾಗೋದ್ರೇಕ೦||೧೩೩||

      ಆಗಳಾಕೆಗಳ ಪಸುರ್ಪೆಸೆವಸಿಯ ಬಾಸೆ ಲಾವಣ್ಯನದಿಯ ಶೈವಾಲಲತೆಯ ಲಾಸ್ಯ ಮನಸಹಾಸ್ಯಂಗೆಯ್ಯುಮಾಕೆಗಳ ಕರಂಗಿದ ಕುಚ ಚೂಚುಕಂಗಳಿಂದೆಸೆದು ತೋಳ
ಮೊದಲಿಂ ಜಕ್ಕುಲಿಸುವ ಪೆರ್ಮೊಲೆ ಕರ್ನೆಯ್ದಿ ಲೆಸಳಂ ನಲಿದು ಕರ್ಚುವ ಜಕ್ಕವಕ್ಕಿ